ನೀರಿಗಾಗಿ ಬದುಕನ್ನು ಮುಡಿಪಿಟ್ಟ ಹೆಬ್ಬಾರ್ ಕಾರ್ಯ ಜನತೆಗೆ ಪ್ರೇರಣಾದಾಯಕ: ಗೋಲ್ಡನ್ ಸ್ಟಾರ್ ಗಣೇಶ್






 ಶಿರಸಿ:ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣವನ್ನು ಹಾಗೂ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ಅದೂ ಸಹ ನಮಗೆ ಅದನ್ನೇ ನೀಡುತ್ತದೆ. ಹಾಗಾಗಿ ಪರಿಸರಕ್ಕೆ ನಮ್ಮಿಂದ ಕೈಲಾದಷ್ಟು ಒಳಿತನ್ನೇ ಬಯಸೋಣ. ನೀರಿಗಾಗಿ ಬದುಕನ್ನೇ ಮೀಸಲಿಟ್ಟಿರುವ ಶ್ರೀನಿವಾಸ ಹೆಬ್ಬಾರ್ ಕೆಲಸಗಳು ಜನರಿಗೆ ಪ್ರೇರಣೆಯಾಗಿದೆ ಎಂದರು

ಪರಿಸರಕ್ಕೆ ನಾವು ಪ್ರೀತಿ ತುಂಬುವುದರಿಂದ ಅದು ಜೀವಸಂಕುಲಕ್ಕೆ ಹೆಚ್ಚಿನ ಅನುಕೂಲ ನೀಡುತ್ತದೆ. ಪರಿಸರಕ್ಕೆ ಇನ್ನಷ್ಟು ಒಳಿತನ್ನು ಮಾಡಬೇಕು. ನಮಗೆಲ್ಲ ಜೀವ ಕೊಡುವುದು ನೀರು, ನೀರಿಗೆ ಜೀವ ಕೊಡುವವರು ಶ್ರೀನಿವಾಸ ಹೆಬ್ಬಾರರು. ಇವರು ಪರಿಸರಕ್ಕೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಒಬ್ಬ ವ್ಯಕ್ತಿಗೆ ಸಂಕಲ್ಪ ಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ಉದಾಹರಣೆ ಆಗಿದ್ದಾರೆ. ಯಾವ ಸರ್ಕಾರ, ಯಾವ ಜನಪ್ರತಿನಿಧಿಗಳೂ ಮಾಡದ ಕೆಲಸವನ್ನು ಹೆಬ್ಬಾರ್ ಅವರು ಮಾಡುತ್ತಿದ್ದಾರೆ.ಅವರ ಇಚ್ಛಾಶಕ್ತಿ ಪರಿಶ್ರಮ, ಕಾಳಜಿ ಇದಕ್ಕೆ ಕಾರಣ. ಶ್ರೀನಿವಾಸ್ ಹೆಬ್ಬಾರ್ ಅವರ ಪತ್ನಿ ಕುಟುಂಬಸ್ಥರು ಸಹ ಅವರಿಗೆ ಈ ಎಲ್ಲ ಸತ್ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.

PGK

Post a Comment

Previous Post Next Post