ಶಿವಮೊಗ್ಗ PGK NEWS:-ಹೊಸದಾಗಿ ಮೂರು ವಿವಿಧ ಸ್ಥಳಗಳಿಗೆ ವಿಮಾನ ಹಾರಾಟ; ಆಗಸ್ಟ್‌ 11ರಂದು ಮೊದಲ ವಿಮಾನ ಟೆಕಾಫ್‌


ಶಿವಮೊಗ್ಗ:
ನೂತನವಾಗಿ ನಿರ್ಮಾನವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೊಸದಾಗಿ ಮೂರು ಸ್ಥಳಗಳಿಗೆ ವಿಮಾನಗಳು ಹಾರಾಟ ನಡೆಸಲು ಅನುಮತಿ ಸಿಕ್ಕಿದೆ. ಆಗಸ್ಟ್‌ 11 ರಂದು ಬೆಂಗಳೂರಿಗೆ ಮೊದಲ ವಿಮಾನ ವಾಣಿಜ್ಯ ಹಾರಾಟ ನಡೆಸಲಿದೆ. ಈ ಕುರಿತು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. " ಆ. 11ರಿಂದ ಶಿವಮೊಗ್ಗ ಏರ್ಪೋರ್ಟ್ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಬೆಂಗಳೂರು, ಚೆನ್ನೈ, ದೆಹಲಿ ಹೊರತುಪಡಿಸಿ ಇತರೆ 3 ವಿವಿಧ ಸ್ಥಳಗಳಿಗೆ ಶಿವಮೊಗ್ಗದಿಂದ ಪಯಣ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದೆ

" ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ 11 ವಿವಿಧ ಸ್ಥಳಗಳಿಗೆ ವಿಮಾನ ಹಾರಾಟ ನಡೆಸಲು ಈ ಬಗ್ಗೆ 2022ರಲ್ಲಿ ವಿಮಾನಯಾನ ಸಚಿವಾಲಯಕ್ಕೆ ನಾನು ಪತ್ರ ಬರೆದಿದ್ದೆ. ಇದೀಗ ಆಗಸ್ಟ್ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಸದ್ಯ ಜಾರಿಯಲ್ಲಿದ್ದ ಬೆಂಗಳೂರು, ದೆಹಲಿ, ಚೆನ್ನೈ ಹೊರತುಪಡಿಸಿ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ಶಿವಮೊಗ್ಗದಿಂದ ಪಯಣ ಆರಂಭವಾಗಲಿದೆ " ಎಂದರು.

ಹೊಸ ಯಾವ ಯಾವ ಮಾರ್ಗ?

  • ಮಾರ್ಗ 1- ಹೈದರಾಬಾದ್, ಶಿವಮೊಗ್ಗ, ಗೋವಾ, ಶಿವಮೊಗ್ಗ, ತಿರುಪತಿ, ಶಿವಮೊಗ್ಗ, ಹೈದರಾಬಾದ್
  • ಮಾರ್ಗ 2- ಹೈದರಾಬಾದ್, ಶಿವಮೊಗ್ಗ, ದೆಹಲಿ, ಶಿವಮೊಗ್ಗ, ಚೆನೈ, ಶಿವಮೊಗ್ಗ, ಬೆಂಗಳೂರು, ಶಿವಮೊಗ್ಗ, ಹೈದರಾಬಾದ್
  • ಮಾರ್ಗ 3- ಹೈದರಾಬಾದ್, ಶಿವಮೊಗ್ಗ, ಹೈದರಾಬಾದ್
  • ಮಾರ್ಗ 4 - ಬೆಂಗಳೂರು, ಸೇಲಂ, ಕೊಚ್ಚಿನ್, ಸೇಲಂ, ಬೆಂಗಳೂರು, ಶಿವಮೊಗ್ಗ, ಬೆಂಗಳೂರು.

ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳು:

  • ಶಿವಮೊಗ್ಗ- ಬೆಂಗಳೂರು
  • ಶಿವಮೊಗ್ಗ- ಚೆನ್ನೈ
  • ಶಿವಮೊಗ್ಗ- ದೆಹಲಿ
  • ಶಿವಮೊಗ್ಗ- ಹೈದರಾಬಾದ್‌
  • ಶಿವಮೊಗ್ಗ- ತಿರುಪತಿ
  • ಶಿವಮೊಗ್ಗ- ಗೋವಾ

ಆಗಸ್ಟ್‌ 11ಕ್ಕೆ ಬೆಂಗಳೂರಿಗೆ ಮೊದಲ ವಿಮಾನ ಸಂಚಾರ

ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಡೆಯಲಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಲಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸಹ ಆರಂಭವಾಗಲಿದೆ.

ಬೆಂಗಳೂರು ವಿಮಾನ ವೇಳಾಪಟ್ಟಿ ಏನು?

ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ 1.30ಕ್ಕೆ ಬೆಂಗಳೂರು ತಲುಪಲಿದೆ.

ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ?

ಸದ್ಯ ಶಿವಮೊಗ್ಗದಿಂದ ಬೆಂಗಳೂರಿನ ನಡುವಿನ ಪ್ರಯಾಣ ದರದ ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ. ಇರಲಿದೆ ಎನ್ನಲಾಗುತ್ತಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಆ ನಂತರ ದರ, ಹೆಚ್ಚಿನ ವಿಮಾನ ಹಾರಾಟ ನಡೆಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ವಿಮಾನದಿಂದ ಪ್ರಸಿದ್ಧ ಜೋಗ ಜಲಪಾತ ಮತ್ತು ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ನೆರವಾಗಲಿದೆ.

ಸೋಗಾನೆ ಬಳಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ನಿಲ್ದಾಣದ ರನ್‌ ವೇ 3110 ಮೀಟರ್‌ ಉದ್ದ, ಅದರ ಅಗಲ 45 ಮೀಟರ್‌ ಇದೆ. ಸುಮಾರು 220 ಕೋಟಿ ರೂ. ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ 27 ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆದರೆ, ಇಲ್ಲಿಯ ತನಕ ಪ್ರಯಾಣಿಕ ವಿಮಾನಗಳ ಸಂಚಾರ ಆರಂಭವಾಗಿರಲಿಲ್ಲ.


PGK

Post a Comment

Previous Post Next Post