PGK NEWS ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ, ಸರ್ಕಾರ ಮೊದಲು SDPI ಬ್ಯಾನ್ ಮಾಡಲಿ: ಬಸವರಾಜ ಬೊಮ್ಮಾಯಿ



PGK News ಹಾವೇರಿ, ಮೇ 25: ಕಾಂಗ್ರೆಸ್ ದ್ವೇಷ ರಾಜಕಾರಣಕ್ಕೆ ಮುನ್ನೂಡಿ ಬರೆದಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಸುತ್ತಿದ್ದಾರೆ. ಹಿಂದುಪರ ಸಂಘಟನೆಗಳನ್ನು ನಿಷೇಧ ಮಾಡುತ್ತೇನೆ ಎನ್ನುವವರು ಮೊದಲು ಎಸ್‌ಡಿಪಿಐ (SDPI) ಬ್ಯಾನ್ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.


ಹಾವೇರಿ ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ವಲ್ಪ ದಿನ ಕಾದು ನೋಡಿ. ಮುಂದಿನ ಐದೇ ತಿಂಗಳಲ್ಲಿ ರಾಜ್ಯ ರಾಜಕಾರಣದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಹೋಗುತ್ತಿರುವ ರೀತಿ ನೋಡಿದರೆ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಂತಿದೆ. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಈಗಲೇ ಶುರು ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಂಘಟನೆಗಳನ್ನು ಕಾಂಗ್ರೆಸ್‌ ನಿಷೇಧ ಮಾಡುವ ಬಗ್ಗೆ ಮಾತನಾಡಿದ ಅವರು, ಹಿಂದು ಪರ ಸಂಘಟನೆ ಬ್ಯಾನ್ ಬಗ್ಗೆ ಕಾಂಗ್ರೆಸ್ ಮಾತನಾಡಿದೆ. ಕಾಂಗ್ರೆಸ್‌ನವರು ಮೊದಲು ಅವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬ್ಯಾನ್ ಮಾಡಲಿ ಆಮೇಲೆ ಮಾತನಾಡಲಿ ಎಂದರು

ಉಸಿರಿರುವವರೆಗೂ ಶಿಗ್ಗಾವಿ ಕೇತ್ರದ ಜನರೊಂದಿಗೆ ಇರುತ್ತೇನೆ. ಕ್ಷೇತ್ರದ ಜನರ ಸೇವೆ ಮಾಡುತ್ತೇನೆ., ನನ್ನ ಜೀವನದ ಕೊನೆ ಉಸಿರಿನವರೆಗೂ ಕ್ಷೇತ್ರದ ಸೇವೆ ಮಾಡುತ್ತೇನೆ. ಸದಾ ಶಿಗ್ಗಾವಿ ಕ್ಷೇತ್ರದ ಜನರ ಸೇವೆಗಾಗಿ ಶ್ರಮಿಸುತ್ತೇನೆ.

ರಾಜ್ಯ ವಿಧಾಸಭಾ ಚುಣಾವಣೆ ಫಲಿತಾಂಶದ ನಂತರ ಸುಮ್ಮನೆ ಕುಳಿತಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸೀಟುಗಳನ್ನು ಕರ್ನಾಟಕದಲ್ಲಿ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಪರ ಸಂಘಟನೆ ನಿಷೇಧಕ್ಕೆ ಬಿಜೆಪಿ ನಾಯಕರು ಕಿಡಿ

ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ಮಂಗಳವಾರ ವಷ್ಟೇ, ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾನೂನು, ಗೋಹತ್ಯೆ ನಿಷೇಧ, ಹಿಜಾಬ್ ನಿಷೇಧ ಸೇರಿದಂತೆ ಕೋಮುದ್ವೇಷ ಸೃಷ್ಟಿಸುವ ಸಾಮಾಜಿಕ ಹಿತಕ್ಕೆ ಧಕ್ಕೆ ತರುವ ಕಾಯ್ದೆ-ಕಾನೂನುಗಳನ್ನು ಪರಿಶೀಲಿಸುತ್ತೇವೆ. ಅಗತ್ಯ ಬಿದ್ದಲ್ಲಿ ಹಿಂಪಡೆಯುತ್ತೇವೆ ಎಂದು ತಿಳಿಸಿದರು.

ಅಲ್ಲದೇ ನಾಡಿನ ಸೌಹಾರ್ಧತೆಗೆ ಧಕ್ಕೆ ತರುವ ಮತ್ತು ಕೋಮುದ್ವೇಷಕ್ಕೆ ಕಾರಣವಾಗುವ, ಕಾನೂನುಗಳನ್ನು ಉಲ್ಲಂಘಿಸುವ ಬಜರಂಗದಳ ಆಗಲಿ ಅಥವಾ ಸಂಘ ಪರಿವಾರವೇ (RSS) ಆಗಲಿ ನಿಷೇಧಿಸುತ್ತೇವೆ ಎಂದು ಖರ್ಗೆ ಎಚ್ಚರಿಕೆ ನೀಡಿದರು. ಇದೀಗ ಈ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.


PGK

Post a Comment

Previous Post Next Post