PGK NEWS ಅಂತರ್ಜಲ ಕುಸಿತ: ನಿಷ್ಕ್ರಿಯ ಕೊಳವೆಬಾವಿಗಳಿಗೆ ಪುನಶ್ಚೇತನ ಭಾಗ್ಯ.

ಮಂಗಳೂರು: ಅಂತರ್ಜಲ ಕುಸಿತ ತಡೆಯಲು ರಾಜ್ಯದ ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲೂ ಕನಿಷ್ಠ 5 ನಿಷ್ಕ್ರಿಯ ಕೊಳವೆಬಾವಿಗಳನ್ನು ಪುನಶ್ಚೇತನ ಗೊಳಿಸುವ ಯೋಜನೆ “ನರೇಗಾ’ ಮೂಲಕ ಕಾರ್ಯಗತಗೊಳ್ಳಲು ಸಿದ್ಧತೆ ನಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೇ ಪಾಳು ಬೀಳುವ ಕೊಳವೆಬಾವಿಗಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಕಡೆ ಕೊಳವೆಬಾವಿಗಳೇ ಗ್ರಾ.ಪಂ.ಗಳ ನೀರಿನ ಮೂಲ ಗಳೂ ಆಗಿವೆ. ಆದರೆ ಅಂತ ರ್ಜಲ ಮಟ್ಟದ ತೀವ್ರ ಕುಸಿತ ದಿಂದಾಗಿ ನೀರಿಗೆ ಬರ ಎದು ರಾ ಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಕೊಳವೆಬಾವಿ ಗಳ ಪುನಶ್ಚೇತನ ಈ ಯೋಜನೆಯ ಉದ್ದೇಶ
ಒಂದು ಕೊಳವೆಬಾವಿ ಪುನಶ್ಚೇತನಕ್ಕೆ ಅಂದಾಜು ವೆಚ್ಚ 82 ಸಾವಿರ ರೂ. ನಿಗದಿಯಾಗಿದ್ದು ಇದನ್ನು “ನರೇಗಾ(ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಮೂಲಕವೇ ಭರಿಸಲಾಗುತ್ತದೆ. ಒಂದು ವೇಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್‌ಗೆ ಸೇರಿದ 5 ನಿಷ್ಕ್ರಿಯ ಕೊಳವೆ ಬಾವಿಗಳಿಲ್ಲದಿದ್ದರೆ ಖಾಸಗಿ ಕೊಳವೆಬಾವಿಗಳನ್ನೂ ಪರಿಗಣಿಸ ಲಾಗುತ್ತದೆ. ಇದು ಸುಮಾರು 80 ಮಾನವ ದಿನಗಳನ್ನು ಒಳಗೊಂಡಿದ್ದು, ಮಳೆನೀರನ್ನು ವೈಜ್ಞಾನಿಕ ರೀತಿಯಲ್ಲಿ ವ್ಯವಸ್ಥಿತ ವಾಗಿ ಕೊಳವೆಬಾವಿ ಪರಿಸರದಲ್ಲಿ ಮರುಪೂರಣ ಮಾಡಲಾಗುತ್ತದೆ.

ದ.ಕ., ಉಡುಪಿಯಲ್ಲಿ 1,890
ದ.ಕ. ಜಿಲ್ಲೆಯಲ್ಲಿ 223 ಮತ್ತು ಉಡುಪಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿದ್ದು ತಲಾ 5ರಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 1,115 ಮತ್ತು ಉಡುಪಿ ಜಿಲ್ಲೆಯಲ್ಲಿ 775 ಕೊಳವೆಬಾವಿಗಳಿಗೆ ಕಾಯಕಲ್ಪ ಸಿಗುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಸುಮಾರು 600 ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 400 ನಿಷ್ಕ್ರಿಯ ಕೊಳವೆ ಬಾವಿಗಳನ್ನು ಗುರುತಿಸಲಾಗಿತ್ತು. ಪ್ರಸ್ತುತ ಈ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದ್ದು, ನಿಖರವಾಗಿ ಗುರುತಿಸಲು ಸೂಚಿಸಲಾಗಿದೆ. ನೀರಿನ ಲಭ್ಯತೆಯೇ ಇರದ ಕೊಳವೆಬಾವಿಗಳ ಬದಲು ಬೇಸಗೆಯ ಎರಡು-ಮೂರು ತಿಂಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಾಣುವ ಕೊಳವೆ ಬಾವಿಗಳನ್ನು ಪರಿಗಣಿಸಲಾಗುತ್ತಿದೆ.
(ಪರಿಣಾಮ ಪರಿಶೀಲನೆ.)
ಇದುವರೆಗೆ ಗ್ರಾ.ಪಂ.ಗಳ ಪ್ರಸ್ತಾವ ಪ್ರಕಾರ ನರೇಗಾದಡಿ ಕೊಳವೆಬಾವಿಗಳ ಪುನಶ್ಚೇತನ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕನಿಷ್ಠ 5 ಕೊಳವೆಬಾವಿಗಳ ಪುನಶ್ಚೇತನಕ್ಕೆ ನಿರ್ಧರಿಸಲಾಗಿದೆ. 2021-22 ಹಾಗೂ 2022-23ರಲ್ಲಿ ಉಡುಪಿ ಜಿಲ್ಲೆಯಲ್ಲಿ 71 ಹಾಗೂ ದ.ಕ. ಜಿಲ್ಲೆಯಲ್ಲಿ 95 ನಿಷ್ಕ್ರಿಯ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲಾಗಿತ್ತು. ಇವುಗಳಲ್ಲಿ ಕೆಲವೆಡೆ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ. ಕರಾವಳಿ ಭಾಗದ ಮಣ್ಣಿನ ಸ್ವರೂಪ, ಕೊಳವೆಬಾವಿ ಬಳಿ ಕಾಮಗಾರಿಗೆ ಸೂಕ್ತ ಸ್ಥಳ ಹೊಂದಿಸುವುದೇ ದೊಡ್ಡ ಸವಾಲು ಎನ್ನುತ್ತಾರೆ ಅಧಿಕಾರಿಗಳು.ಅಂತರ್ಜಲ ಹೆಚ್ಚಳಕ್ಕೆ ಕೊಳವೆಬಾವಿ ಪುನಶ್ಚೇತನ ಕಾಮಗಾರಿ ಅನುಷ್ಠಾನಕ್ಕೆ ವೇಗ ಒದಗಿಸಿದ್ದು, ನರೇಗಾ ವತಿಯಿಂದ ಕೈಗೊಳ್ಳಲಾಗುತ್ತಿದೆ. ಹಲವೆಡೆ ಯಶಸ್ವಿಯಾಗಿದ್ದು, ಈ ಬಾರಿ ಒಂದು ಗ್ರಾ.ಪಂ.ನಿಂದ ತಲಾ 5 ನಿಷ್ಕ್ರಿಯ ಕೊಳವೆ ಬಾವಿ ಗುರುತಿಸಿ ಪುನಶ್ಚೇತನಗೊಳಿಸಲಾಗುತ್ತಿದೆ.
ಆನಂದ ಕುಮಾರ್‌, ಉಪಕಾರ್ಯದರ್ಶಿ, ದ.ಕ. ಜಿ.ಪಂ.
– ಪ್ರಸನ್ನಎಚ್‌., ಜಿ.ಪಂ. ಸಿಇಒ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು





PGK

Post a Comment

Previous Post Next Post