PGK NEWS :-k baligar _[ಮಾರುಕಟ್ಟೆಯಲ್ಲಿ ಈಗಿರುವ ಎಲ್ಲಾ ಎಲೆಕ್ಟ್ರಿಕಲ್ ಕಾರುಗಳಿಗೆ ಸಡ್ಡು ಹೊಡೆಯಲು ಟಾಟಾ ಮೋಟಾರ್ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆ ಕೂಡ ನಡೆದಿದೆ ಅಷ್ಟೇ ಅಲ್ಲ ಎಲಾನ್ ಮಸ್ಕ್ ಅವರ ಟೆಸ್ಲಾ ಗೂ ಠಕ್ಕರ್ ಕೊಡಲು ಟೊಯೋಟಾ ಮುಂದಾಗಿದೆ. ಈಗಾಗಲೇ ಬ್ಲೂಪ್ರಿಂಟ್ ಕೂಡ ಸಿದ್ಧಪಡಿಸಿರುವ ಟಾಟಾ ನೆಕ್ಸ್ಟ್ ಜನರೇಷನ್ ಹಾಗೂ ನೆಕ್ಸ್ಟ್ ಲೆವಲ್ ಕ್ರಾಂತಿಗೆ ಸಿದ್ಧವಾಗಿದೆ. ಆಧುನಿಕ ತಂತ್ರಜ್ಞಾನ ಹೊಸ ಮಾದರಿಯ ಬ್ಯಾಟರಿ ಅಳವಡಿಸಲು ಮುಂದಾಗಿರುವ ಟೊಯೋಟಾ ಈ ಬಗ್ಗೆ ಮಾಡಿರುವ ಸಂಶೋಧನೆಗಳೇ ವಿಶೇಷವಾಗಿದೆ.
ಜಪಾನ್ ಮೂಲದ ಟೊಯೋಟಾ ಮೋಟಾರ್:
ಭಾರತೀಯ ಮಾರುಕಟ್ಟೆಯಲ್ಲೂ ಕಮಾಲ್ ಮಾಡಿರುವ ಟೊಯೋಟಾ ಜಪಾನ್ ಮೂಲದ ಕಂಪನಿ ಆಗಿದ್ದು ನೆಕ್ಸ್ಟ್ ಜನರೇಶನ್ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಬಿಡುಗಡೆ ಮಾಡಲಿದೆ. ಬಹುಶಃ 2026ರಲ್ಲಿ ಇದನ್ನು ನಿರೀಕ್ಷೆ ಮಾಡಬಹುದು. ಇದರ ಮುಖ್ಯ ಪ್ರಯೋಜನ ಅಂದ್ರೆ ಅತಿ ಕಡಿಮೆ ಚಾರ್ಜಿನಲ್ಲಿ ಅತಿ ಹೆಚ್ಚು ವೇಗ ಹಾಗೂ ಅತಿ ಹೆಚ್ಚು ದೂರ ಕ್ರಮಿಸಬಲ್ಲ ಕಾರುಗಳನ್ನು ತಯಾರಿಸುವುದು. ಅಂದರೆ ಕೇವಲ ಹತ್ತು ನಿಮಿಷ ಚಾರ್ಜ್ ನಲ್ಲಿ ಸಾವಿರ ಕಿಲೋಮೀಟರ್ ವರೆಗೂ ಚಲಿಸಬಲ್ಲ ಅತಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಬ್ಯಾಟರಿಯನ್ನು ಟೊಯೋಟಾ (Toyota Car) ಅಭಿವೃದ್ಧಿಪಡಿಸುತ್ತಿದೆ.
ಬ್ಯಾಟರಿ ವಿಷಯಕ್ಕೆ ಬಂದರೆ ಮಾರುಕಟ್ಟೆಯಲ್ಲಿ ಟೆಸ್ಲಾದ ಲಿಥಿಯಂ ಇಯಾನ್ ಬ್ಯಾಟರಿ ಚಾಲಿತ ಕಾರು ಹೆಚ್ಚು ಮಾರಾಟ ಕಂಡಿದೆ. ಆದರೆ ಈ ಬ್ಯಾಟರಿಗಿಂತಲೂ ಹೆಚ್ಚು ಪವರ್ಫುಲ್ ಆಗಿರುವ ಬ್ಯಾಟರಿ ತಯಾರಿಸುವ ನಿಟ್ಟಿನಲ್ಲಿ ಟೊಯೋಟಾ ಕಾರ್ಯ ಪ್ರವರ್ತವಾಗಿದೆ. ವಿಶ್ವದ ಅತಿ ಹೆಚ್ಚು ಸೆಲ್ಲಿಂಗ್ ಹಾಗೂ ಬೆಸ್ಟ್ ಈವಿ ಬ್ಯಾಟರಿಗಳಲ್ಲಿ ಅಮೆರಿಕಾದಲ್ಲಿ ಪ್ರಚಲಿತದಲ್ಲಿರುವ ಬ್ಯಾಟರಿ 350 ಕಿಲೋ ಮೀಟರ್ ವರೆಗೆ ಕಾರು ಓಡಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. 2027ರ ವೇಳೆಗೆ ಇದಕ್ಕಿಂತಲೂ ಪವರ್ ಫುಲ್ ಬ್ಯಾಟರಿ ಬಳಸಿಕೊಂಡು ಟೊಯೋಟಾ ತನ್ನ ಹೊಸ ಎಲೆಕ್ಟ್ರಿಕ್ ಕಾರಣ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಉತ್ತಮ ಬ್ಯಾಟರಿ ಯಾವುದು?
ಯಾವುದೇ ಎಲೆಕ್ಟ್ರಿಕ್ ವಾಹನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ವಾಹನಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿಗಳು. ಬ್ಯಾಟರಿ ಪ್ಯಾಕ್ ಎಷ್ಟು ಉತ್ತಮವಾಗಿರುತ್ತದೆಯೋ ಸ್ಕೂಟರ್ ಅಥವಾ ಇತರ ವಾಹನಗಳು ಅಷ್ಟೇ ಪವರ್ಫುಲ್ ಆಗಿರುತ್ತವೆ. ಟೊಯೋಟಾ ಈಗಾಗಲೇ ಅಭಿವೃದ್ಧಿ ಪಡಿಸುತ್ತಿರುವ ಸಾಲಿಡ್ ಸ್ಟೇಟ್ ಬ್ಯಾಟರಿಗಳು ಈಗ ಬಳಕೆಯಲ್ಲಿರುವ ಲಿಕ್ವಿಡ್ ಎಲೆಕ್ಟ್ರೋಲೈಟ್ ಬ್ಯಾಟರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿವೆ. ಆದರೆ ಈಗಿರುವ ಬ್ಯಾಟರಿಗಿಂತಲೂ ಸಾಲಿಡ್ ಸ್ಟೇಟ್ ಬ್ಯಾಟರಿಗಳು ದುಬಾರಿ ಆಗಬಹುದು. ಹಾಗಾಗಿ ಲಿಥಿಯಂ ಐರನ್ ಫೋಸ್ಫೋಟ್ ಬ್ಯಾಟರಿ ತಯಾರಿಕೆಗೆ ಚಿಂತನೆ ನಡೆಸಲಾಗಿದೆ. ಅದೇ ರೀತಿ ಈ ಬ್ಯಾಟರಿ ಚಾಲಿತ ಕಾರನ್ನು ಬಿಡುಗಡೆ ಮಾಡಿದರೆ ಅದರ ಬೆಲೆ 35-37 ಲಕ್ಷ ರೂಪಾಯಿಗಳಾಗಬಹುದು.
Tags:
Daily News