PGK DailyNEWS:-ಬೆಂಗಳೂರು ಕೆ ಆರ್ ಪುರಂ ತಹಸೀಲ್ದಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ:ಕಂತೆ ಕಂತೆ‌ ಹಣ ಅಕ್ರಮ ಆಸ್ತಿ ಪತ್ತೆ!

 PGK DAILY:-ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಗಳೂರು ಮೂಲದ ತಹಸೀಲ್ದಾರ್ ಅಜೀತ್ ರಾಜ್ ರೈ ಮನೆ ಮತ್ತು ಕಚೇರಿ ಸೇರಿದಂತೆ ಹತ್ತು‌ ಕಡೆ‌ ಏಕಕಾಲದಲ್ಲಿ ದಾಳಿ ಮಾಡಲಾಗಿದ್ದು. ಬೆಂಗಳೂರಿನ ಸಹಕಾರನಗರ ಮನೆಯಲ್ಲಿ ಕಂತೆ ಕಂತೆ‌ ಹಣ ಅಕ್ರಮ ಆಸ್ತಿ ಪತ್ತೆಯಾಗಿದೆ.



ಬೆಂಗಳೂರು ಪೂರ್ವದ ಕೃಷ್ಣರಾಜಪುರ ತಹಶೀಲ್ದಾರ್ ಅಜೀತ್ ರಾಜ್ ವಿರುದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಈ ಹಿಂದೆ ಅಜಿತ್ ರಾಜ್ ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರೇಡ್-2 ತಹಶಿಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರು ನಗರ ಜಿಲ್ಲೆ ಕೃಷ್ಣರಾಜಪುರದ ತಹಶಿಲ್ದಾರರಾಗಿದ್ದರು ಅಜಿತ್ ರಾಜ್ ರೈ. 

ತನಿಖೆ ಮುಂದುವರೆದಿದೆ.....


PGK

Post a Comment

Previous Post Next Post