*
16ವರ್ಷದ ಬಾಲಕನಿಗೆ 25.ಸಾವಿರ ರೂ ದಂಡ.*
PGKNEWS:- ಭದ್ರಾವತಿಯ ಹುತ್ತಾ ಕಾಲೋನಿಯ ಬಳಿ ವಾಹನ ತಪಾಸಣೆ ಮಾಡುವಾಗ *16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು ವಾಹನ ಚಾಲನಾ ಪರವಾನಿಗೆ ಇಲ್ಲದೆ ಕೆಎ-14 ಇಕೆ-2461 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಚಾಲನೆ*
ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ *ವಾಹನದ ಮಾಲೀಕರಾದ ಅಪ್ರಾಪ್ತ ವಯ್ಯಸ್ಸಿನ ಬಾಲಕನ ತಂದೆ ಶ್ರೀಕಾಂತ್, 45 ವರ್ಷ, ವಾಸ ಜನ್ನಾಪುರ ಭದ್ರಾವತಿ ಟೌನ್ ಈತನ* ವಿರುದ್ಧ *ಲಘು ಪ್ರಕರಣವನ್ನು ದಾಖಲಿಸಿ* ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, *ಜೆಎಂಎಫ್ಸಿ ನ್ಯಾಯಾಲಯ ಭದ್ರಾವತಿಯ ಮಾನ್ಯ ನ್ಯಾಯಾಧೀಶರು ದ್ವಿ ಚಕ್ರ ವಾಹನದ ಮಾಲೀಕರಾದ ಶ್ರೀಕಾಂತ್ ಈತನಿಗೆ ರೂ 25,000/- ದಂಡ* ವಿಧಿಸಿರುತ್ತಾರೆ.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ ದಾಖಲಿಸಿದೆ.
(ವರದಿಗಾರರು:- ನವೀನ್ ಭದ್ರಾವತಿ)