PGK NEWS:--YouTube Bodybuilding Star ಜೋ ಲಿಂಡ್ನರ್‌ ನಿಧನ ಅನೇಕ ಅಭಿಮಾನಿಗಳಿಂದ ಸಂತಾಪ.!


PGK NEWS:- 
ಬ್ಯಾಂಕಾಕ್‌: ಬಾಡಿಬಿಲ್ಡರ್ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಜೋ ಲಿಂಡ್ನರ್‌ (30) ನಿಧನರಾಗಿದ್ದಾರೆ.

ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿಧನ ಹೊಂದಿದ್ದು, ಅವರ ಗೆಳತಿ ನಿಚಾ ಸಾವಿನ ಸುದ್ದಿಯನ್ನ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇವಲ 2 ದಿನಗಳ ಹಿಂದೆಯಷ್ಟೇ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತ ವಿಡಿಯೋ ಹಂಚಿಕೊಂಡಿದ್ದರು. ಆರೋಗ್ಯಕರ ದೇಹದಾರ್ಢ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕಡೆಗೆ ಬದಲಾಗುವಂತೆ ಕರೆ ನೀಡಿದರು.

 ಲಿಂಡ್ನರ್‌ ಯುಟ್ಯೂಬ್‌ನಲ್ಲಿ 9,40,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್‌ ಗಳನ್ನ ಹೊಂದಿದ್ದರು. ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್‌ ತರಬೇತಿ ಜೊತೆಗೆ ಆಹಾರ ಸೇವನೆಯ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದರು.  ಲಿಂಡ್ನರ್‌ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.


PGK

Post a Comment

Previous Post Next Post