PGK NEWS:- ಪತನಗೊಂಡ ಮನಂಗ್ ಏರ್ ಹೆಲಿಕಾಪ್ಟರ್‌ನಲ್ಲಿದ್ದ ಐವರು ವಿದೇಶಿ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ. ಕ್ಯಾಪ್ಟನ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ.
ಸಂಪರ್ಕ ಕಳೆದುಕೊಂಡ ಮನಂಗ್ ಏರ್ ಹೆಲಿಕಾಪ್ಟರ್ ಜಿರಿ ಮತ್ತು ಫಾಪ್ಲು ನಡುವಿನ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಾಮ್ಜುರಾದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.
ಮೃತಪಟ್ಟವರಲ್ಲಿ ಐವರು ವಿದೇಶೀ ಪ್ರಜೆಗಳು ಮೆಕ್ಸಿಕೋ ಮೂಲದವರು ಎಂದು ಗುರುತಿಸಲಾಗಿದೆ.
ಮೃತಪಟ್ಟವರನ್ನು ಸಿಫ್ಯುಂಟೆಸ್ ಜಿ. ಫೆರ್ನಾಂಡೋ, ಗೊನ್ಸಾಲ್ವೆಝ್ ಅಬ್ರಿಕ್, ಗೊನ್ಸಾಲ್ವೆಝ್ ಒಲಾಸಿಯೊ ಲುಜ್, ಸಿಫ್ಯುಂಟೆಸ್ ಜಿ. ಮರಿಯಾ ಜೋಸ್, ರಿಂಕನ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಪೈಲಟ್ ಆಗಿದ್ದ ನೇಪಾಳಿ ಮೂಲದ ಕ್ಯಾಪ್ಟನ್ ಸಿಬಿ ಗುರುಂಗ್ ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.ಸೋಲುಖುಂಬುವಿನಿಂದ ಕಾಠ್ಮಂಡುವಿಗೆ ತೆರಳುತ್ತಿದ್ದ ಮನಂಗ್ ಏರ್ ಸಂಸ್ಥೆಗೆ ಸೇರಿದ್ದ ಹೆಲಿಕಾಪ್ಟರ್, ನೇಪಾಳದ ಸ್ಥಳೀಯ ಕಾಲಮಾನ 10:12ರ ಸುಮಾರಿಗೆ ರಾಡಾರ್‍ನ ಸಂಪರ್ಕ ಕಳೆದುಕೊಂಡಿತ್ತು.