PGK NEWS:-ದಾವಣಗೆರೆ: ಬುದ್ದಿವಂತರು, ಹೆಚ್ಚು ಹಣ ವುಳ್ಳವರೇ ವಾಸಿಸುವ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿರುವ ದಾವಣಗೆರೆಯ ಪ್ರಿನ್ಸ್ ಜಯಚಾಮರಾಜೇಂದ್ರ ಬಡಾವಣೆ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳಿಗೆ ಹೆಸರುವಾಸಿಯಾಗಿತ್ತು.
ಅಂತಹ ಬಡಾವಣೆಯಲ್ಲಿ ಇದೀಗ ಪೋಲೀಸರಿಗೆ ವೇಶ್ಯಾವಾಟಿಕೆಯ ವಾಸನೆ ಬಡಿದಿದೆ.
ಪಿಜೆ ಬಡಾವಣೆ ಮೂರನೇ ಮೇನ್ ಬಳಿಯ ಕರಿಗೌಡ್ರ ಬಿಲ್ಡಿಂಗ್ ನಲ್ಲಿ ಮನೆ ಬಾಡಿಗೆ ಪಡೆದು ಹೆಣ್ಣುಮಕ್ಕಳಿಗೆ ಹಣದ ಆಮಿಷ ಒಡ್ಡಿ ಬೇರೆ ಕಡೆಯಿಂದ ಕರೆ ತಂದು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ವಿದ್ಯಾನಗರ, ಮಹಿಳಾ ಪೊಲಿಸ್ ಠಾಣೆ ಹಾಗೂ ಬಡಾವಣೆ ಠಾಣೆಯ ಪೋಲೀಸರು ಪಿಜೆ ಬಡಾವಣೆ ಮೂರನೇ ಮೇನ್ ಎಂಟನೇ ಕ್ರಾಸ್ ನಲ್ಲಿರುವ ಮನೆಯ ಎರಡನೇ ಮಹಡಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿ, ಮಹಿಳೆಯೊಬ್ಬರನ್ನು ಬಂದಿಸಿದ್ದಾರೆ.
ಆರೋಪಿ ಬಳಿ 35100 ರೂ ಹಣ ಪತ್ತೆಯಾಗಿದ್ದು ಪ್ರಕರಣ ದಾಖಲಿಸಲಾಗಿದೆ.