PGK NEWS :-ಹಾವೇರಿ: ಯಾವ ಕೆಲಸಕ್ಕೆ ಬಾರದ ಕೆಲಸ ಮಾಡುವುದೇ"ಕಾಂಗ್ರೆಸ್ ಸರ್ಕಾರ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿ ಗೆ ಬೊಮ್ಮಾಯಿ ಗರಂ.

 

   

PGK NEWS:-ಹಾವೇರಿ: `ಸರ್ಕಾರಕ್ಕೆ ಮಾಡಲು ಹತ್ತು ಹಲವು ಕೆಲಸಗಳು ಇದ್ದಾವೆ. ಆದರೆ ಇವರು ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡ್ತಿದ್ದಾರೆ'
ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನೀಡಿರುವ ಪ್ರತಿಕ್ರಿಯೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ ಎಂದು ಪ್ರಶ್ನಿಸಿದರು.

ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತೇನೆ. ಈ ಹಿಂದೆ ಎಲ್ಲಾ ಹಾಕಿಕೊಂಡು ಕೆಲಸ ಮಾಡಿದ್ದಾರೆ. ಅಂದು ಯಾವ ತೊಂದರೆಯೂ ಆಗಿಲ್ಲ. ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲಾ. ಹತ್ತು ಹಲವು ಬೇಕಾದಷ್ಟು ಕೆಲಸಗಳು ಇದಾವೆ. ಆದರೆ ಇವರು ಮಾತ್ರ ಕೆಲಸಕ್ಕೆ ಬಾರದ ಕೆಲಸಗಳನ್ನ ಮಾಡ್ತಾ ಇದಾರೆ ಎಂದು ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.


ಪ್ರತಿಪಕ್ಷ ನಾಯಕ 19ರ ಬಳಿಕ ತೀರ್ಮಾನ

ಪ್ರತಿಪಕ್ಷ ನಾಯಕ ಆಯ್ಕೆ ವಿಚಾರ ಕುರಿತಂತೆ ಮಾತನಾಡಿದ ಅವರು ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು,ಆದಷ್ಟು ಬೇಗ ಮಾಡ್ತಾರೆ. ನಮ್ಮ ಪಕ್ಷ ನಿರ್ಣಯ ಮಾಡುತ್ತದೆ, 19 ನೇ ತಾರೀಕಿನ ನಂತರ ತೀರ್ಮಾನ ಆಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

ಮುಖ್ಮಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಪ್ರಿಯಾಂಕಾ ಖರ್ಗೆ, ಯತೀಂದ್ರ ಸರ್ಕಾರದಲ್ಲಿ ಸ್ಯಾಡೊ ಸಿಎಂ ಆಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ವಿಧಾನಸಭೆಯಲ್ಲಿ ಹಲವು ವಿಚಾರ ಎತ್ತಿದ್ದೆವು. ಸಿಎಂ ಆಫೀಸಿನಿಂದ ಹಿಡಿದು ಎಲ್ಲಾ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡ್ತಾ ಇದ್ದಾರೆ. ಟ್ರಾನ್ಸಫರ್ ನಲ್ಲಿ ನಾನು ಯಾವುದಕ್ಕೂ ಹಣ ತಗೊಂಡಿಲ್ಲಾ ಎಂದು ಸಿಎಂ ಅಂತಾರೆ. ಸಿಎಂ ಸ್ವಂತಕ್ಕೆ ಹಣ ತಗೊಂಡಿಲ್ಲ ಎಂದು ಜಾರಿಕೊಳ್ತಾ ಇದಾರೆ.
ಇಡೀ ಅವರ ಸರ್ಕಾರ ಸಚಿವ ಸಂಪುಟದ ಸದಸ್ಯರು, ಭಂಟರು ತಗೊಳ್ತಾ ಇರೋದು ಸ್ಪಷ್ಟವಾಗಿದೆ. ಅಧಿಕಾರಿಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗ್ತಾ ಇದೆ. ಅದನ್ನು ಮುಚ್ಚಿ ಹಾಕುವ ಸಲುವಾಗಿ ನಾನು ತಗೊಂಡಿಲ್ಲ. ತಗೊಂಡಿದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ ಅಂತಾರೆ. ಅಂದರೆ ಅದರ ಅರ್ಥ ಸರ್ಕಾರದಲ್ಲಿ ಬೇರೆಯವರು ತಗೊಂಡ್ರೆ ಮುಖ್ಯಮಂತ್ರಿಗಳ ಜವಾಬ್ದಾರಿ ಮುಗಿತಾ? ಎಲ್ಲಾ ಸ್ಪಷ್ಟವಾಗಿ ಕಾಣ್ತಾ ಇದೆ. ಸಿಎಂ ಸಿದ್ದರಾಮಯ್ಯ ಜಾರಿಕೊಳ್ಳುವ ಪ್ರಯತ್ನ ಮಾಡ್ತಾ ಇದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
J D S ಜೊತೆ ಮೈತ್ರಿ ವರಿಷ್ಠರಿಗೆ ಬಿಟ್ಟಿದ್ದು



ಜೆಡಿಎಸ್ ಮೈತ್ರಿ ವಿಚಾರ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ , ಅದನ್ನು ವರಿಷ್ಠರು ತಿರ್ಮಾನ ಮಾಡ್ತಾರೆ ಎಂದು ತಿಳಿಸಿದರು. RSS ಗೆ ಜಮೀನು
ಮಂಜೂರು ಹಿಂಪಡೆದ ವಿಚಾರ ಕುರಿತಂತೆ ಮಾತನಾಡಿದ ಅವರು ಇದು ಸೇಡಿನ ರಾಜಕಾರಣ. ಅದರಲ್ಲಿ ಬಡವರ ಮಕ್ಕಳಿಗೆ, ಅನಾಥರಿಗೆ ದೊಡ್ಡ ಸಹಾಯ ಆಗಿದೆ. ಶಿಕ್ಷಣದಲ್ಲಿ ದೊಡ್ಡ ಕೆಲಸ ಮಾಡ್ತಾ ಇದೆ. ಕ್ಯಾಬಿನೆಟ್ ಗೆ ಅಧಿಕಾರ ಇದೆ. ನಾವು ಮಾಡಿದ್ವಿ. ಇದು ಸೇಡಿನ ರಾಜಕಾರಣ ಅದು ಬಹಳ ನಡೆಯೊಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
Advertisement













PGK

Post a Comment

Previous Post Next Post