SHIMOGA : ರಸ್ತೆಯಲ್ಲಿ ಡಿವೈಡರ್‌ಗೆ (Road Divider) ಟೊಯೋಟಾ ಫಾರ್ಚುನರ್ ಕಾರು lಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಐಬಿ ಸರ್ಕಲ್‌ನಲ್ಲಿರುವ ಡಿವೈಡರ್‌ಗೆ ಕಳೆದ ರಾತ್ರಿ ಕಾರು ಅಪ್ಪಳಿಸಿದೆ. ಕುವೆಂಪು ರಸ್ತೆಯಿಂದ ವೇಗವಾಗಿ ಬಂದ ಕಾರು ಸಿಗ್ನಲ್ ಬಳಿ ಹಾಕಲಾಗಿದ್ದ ಡಿವೈಡರ್‌ಗೆ ಗುದ್ದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಡಿವೈಡರ್‌ಗೆ ಹಾನಿಯಾಗಿದೆ. ಶಿವಮೊಗ್ಗದ ವೈದ್ಯರೊಬ್ಬರಿಗೆ ಸೇರಿದ ಕಾರು ಎಂದು ಹೇಳಲಾಗುತ್ತಿದೆ. ರಾತ್ರಿ 11 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
Tags:
Daily News