PGK NEWS. ಶಿವಮೊಗ್ಗ
ಬರದ ಬೇಗೆಯಲ್ಲಿ ಚಿಂತೆಯಲ್ಲಿದ್ದ ಕರ್ನಾಟಕದ ರೈತರಿಗೆ ಮಳೆರಾಯನ ರೌದ್ರಾವತಾರವು ಒಂದಷ್ಟು ರಿಲೀಫ್ ನೀಡಿದೆ. ಕಳೆದ ವಾರದ ತನಕ ಮಳೆ ಇಲ್ಲವೆಂದು ಚಿಂತೆಯಲ್ಲಿದ್ದರು ರೈತರು. ಆದರೆ ಈಗ ಭರ್ಜರಿ ಮಳೆ ಸುರಿಯುತ್ತಿದ್ದು, ಜನ ಖುಷಿಯಾಗಿದ್ದಾರೆ. ಹಾಗೇ ರಾಜ್ಯದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಈಗ ಹರಿದು ಬರುತ್ತಿದ್ದು, ಕರ್ನಾಟಕದ ಜಲಾಶಯಗಳ ಈಗಿನ ನೀರು ಸಂಗ್ರಹಣೆ ಬಗ್ಗೆ ಮಾಹಿತಿ ಇಲ್ಲಿದೆ.
ಹೌದು, ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಅಬ್ಬರವು ಜೋರಾಗಿದೆ. ಈಗಾಗಲೇ ಭಾಗಶಃ ಕರ್ನಾಟಕಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು, ಕರ್ನಾಟಕದಲ್ಲಿ (Karnataka Rain) ಈಗ ಭರ್ಜರಿ ಮಳೆಯಾಗುತ್ತಿದೆ. ಹೀಗಾಗಿ ಜಲಾಶಯಕ್ಕೂ ಮರುಜೀವ ತುಂಬಿದಂತಾಗಿದೆ. ಮಲೆನಾಡು ಭಾಗದಲ್ಲಂತು ಈ ವಾರ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೆ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲೂ ಭಾರಿ ಪ್ರಮಾಣದ ಮಳೆ ಬೀಳುತ್ತಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ
1) ಕೆಆರ್‌ಎಸ್ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಜಲಾಶಯದಲ್ಲಿ 36.72 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದೀಗ ಒಳಹರಿವು ಹೆಚ್ಚಳವಾಗಿದ್ದು, ಕೆಆರ್‌ಎಸ್ ಜಲಾಶಯಕ್ಕೆ 1444 ಕ್ಯುಸೆಕ್ ನೀರು ಹರಿದು ಬರುತ್ತಿದೆ.
8) ಘಟಪ್ರಭಾ ಜಲಾಶಯ: ಈ ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 04 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಘಟಪ್ರಭಾ ಜಲಾಶಯದಲ್ಲಿ 6.90 ಟಿಎಂಸಿ ನೀರು ಸಂಗ್ರಹವಾಗಿತ್ತು. ಘಟಪ್ರಭಾ ಡ್ಯಾಂಗೆ 366 ಕ್ಯುಸೆಕ್ ನೀರು ಹರಿದು ಬರುತ್ತಿದೆ.
9) ಸೂಫಾ ಜಲಾಶಯ: ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು ಸೂಫಾ ಡ್ಯಾಂ ತುಂಬುವ ನಿರೀಕ್ಷೆ ಇದೆ. ಸೂಫಾ ಡ್ಯಾಂ ಒಟ್ಟು ಸಾಮರ್ಥ್ಯ 145 ಟಿಎಂಸಿ ಆಗಿದ್ದು, ಈಗ 29.89 ಟಿಎಂಸಿ ನೀರು ಇದೆ. ಆದರೆ ಒಳಹರಿವು 2285 ಕ್ಯುಸೆಕ್ ಮೀರಿಸಿದ್ದು, ಕೆಲವೇ ದಿನದಲ್ಲಿ ಡ್ಯಾಂ ತುಂಬುವ ನಿರೀಕ್ಷೆ ಇದೆ.
10) ವರಾಹಿ ಜಲಾಶಯ: ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ. ಆದರೆ ಈಗ ಜಲಾಶಯದಲ್ಲಿ 3.06 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ, ವರಾಹಿ ಜಲಾಶಯದಲ್ಲಿ 4.84 ಟಿಎಂಸಿ ನೀರು ಸಂಗ್ರಹವಾಗಿತ್ತು. ವರಾಹಿ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ.
11) ಮಲಪ್ರಭಾ ಜಲಾಶಯ: ಡ್ಯಾಂನಲ್ಲಿ 37.73 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 6.89 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭಕ್ಕೆ ಮಲಪ್ರಭಾ ಜಲಾಶಯದಲ್ಲಿ 11.85 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ.
12) ಹಾರಂಗಿ ಜಲಾಶಯ: ಜಲಾಶಯ ಬರಿದಾಗುತ್ತಿದ್ದು, ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ ಕೇವಲ 3 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಬರೋಬ್ಬರಿ 7 ಟಿಎಂಸಿ ನೀರು ಸಂಗ್ರಹವಿತ್ತು. ಹಾರಂಗಿ ಜಲಾಶಯದ ಒಳಹರಿವು 1557 ಕ್ಯುಸೆಕ್ ಆಗಿದೆ.