PGK NEWS:- ಪ್ರವರ್ಗ-1 ರಲ್ಲಿ ಬರುವ ಗೊಂಡ ಜಾತಿಯವರಿಗೆ ಪ. ಪಂಗಡ ಜಾತಿ ಪ್ರಮಾಣ ಪತ್ರ ಪಡೆಯಲು ಸಹಾಯ ಮಾಡಿದ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಅಮಾನತ್ತುಗೊಳಿಸಿ!ದಲಿತ ಸಂಘಟನೆಯಿಂದ ಆಗ್ರಹ.

 




PGK NEWS:-.ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಾಸಿಸುವ ಗೊಂಡ ಸಮುದಾಯದರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆಯಲು ಅವಕಾಶ ಮಾಡಿ ಕೊಟ್ಟಿರುವ ಉಪ ನಿರ್ದೇಶಕರು ಸಮಾಜ ಕಲ್ಯಾಣ ಅಧಿಕಾರಿ ಉತ್ತರ ಕನ್ನಡ ಜಿಲ್ಲೆ ಇವರ ಮೇಲೆ ದೌರ್ಜನ್ಯ .



ಪೊಲೀಸ್ ಪ್ರಕರಣ ದಾಖಲಿಸುವಂತೆ ವಿವಿಧ ಸಂಘಟನೆಯವರು ಸೇರಿ ಜಿಲ್ಲಾಧೀಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.


         ಭಟ್ಕಳ ತಾಲೂಕಿನಲ್ಲಿ ವಾಸಿಸುವ ಗೊಂಡ ಸಮುದಾಯದವರಾದ ಸಂತೋಷ ನಾಗಯ್ಯ ಗೊಂಡ, ಮಲ್ಲಿಕಾ ಮಂಗಳ ಗೊಂಡ, ಗಣಪತಿ ಸನ್ನು ಗೊಂಡ, ತೇಜಸ್ ಕುಮಾರ್ ಸುಕ್ರು ಗೊಂಡ ಮತ್ತು ಮಮತ ಮಂಜು ಗೊಂಡ ಇವರು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆಯಲು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಇವರ ಕಛೇರಿಯಿಂದ ನಾಗರುಕ ಹಕ್ಕು ಜಾರಿ ನಿರ್ದೇಶನಾಲಯ ಮಣಗಳೂರು ಇವರಿಗೆ ಜಾತಿ ವಿಚಾರಣೆಯನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ಪತ್ರವನ್ನು ಬರೆದಿರುತ್ತಾರೆ, ಪಿಎಸ್ಐ ಶ್ರೀ ಡಿ.ಎನ್ ಕುಮಾರ ರವರು ಸರಿಯಾಗಿ ತನಿಖೆಯನ್ನು ಮಾಡದೆ ಪ್ರವರ್ಗ-1 ರಲ್ಲಿ ಬರುವ ಗೊಂಡ ಸಮುದಾಯದ ಇವರು ಪರಿಶಿಷ್ಟ ಪಂಗಡದ “ಗೊಂಡ್” ಜಾತಿಗೆ ಬರುವರೆಂದು ವರದಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಂಗಳೂರು ಇವರಿಗೆ ಸಲ್ಲಿಸಿರುತ್ತಾರೆ. ಇವರ ವಿಚಾರಣೆಯ ವರದಿಯಲ್ಲಿ ಹಲವಾರು ನ್ಯೂನತೆಗಳು ಕಂಡು ಬಂದಿದ್ದು ಅವುಗಳನ್ನು ಮರು ವಿಚಾರಣೆಯನ್ನು ನಡೆಸಿದಾದ ವಿಚಾರಣಾಧಿಕಾರಿಯವರು ಸದರಿ ವ್ಯಕ್ತಿಗಳೆಲ್ಲರೂ ಹಿಂದೂಳಿದ ವರ್ಗದ ಪ್ರವರ್ಗ-1 ರಲ್ಲಿ ಬರುವ ಗ್ರಾಮ ಒಕ್ಕಲು ಜಾತಿಗೆ ಸೇರಿರುವ ಬಗ್ಗೆ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಶ್ರೀ ಡಿ. ಎನ್ ಕುಮಾರ್ ಪಿ.ಎಸ್ಐ ರವರು ಸರಿಯಾದ ವಿಚಾರಣೆಯನ್ನು ಮಾಡದೇ ತಪ್ಪು ವರದಿಯನ್ನು ಸಲ್ಲಿಸಿರುವ ಇವರನ್ನು ಸೇವೆಯಿಂದ ಅಮಾನತ್ತು ಮಾಡಿರುತ್ತಾರೆ. ತಪ್ಪು ವರದಿಯನ್ನು ಸಲ್ಲಿಸಿರುವ ಶ್ರೀ ಡಿ. ಎನ್ ಕುಮಾರ್ ಪಿ.ಎಸ್ಐ ರವರ ವರದಿಯನ್ನು  ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಇವರಿಗೆ ಕಳುಹಿಸಿದ್ದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಕಾರ್ಯದರ್ಶಿಯಾದ ಸಮರ್ಪಕ ರೀತಿಯಲ್ಲಿ ಪರಿಶೀಲಿಸದೇ ನಿರ್ಲಕ್ಷತೆ ತೋರಿ, ತಪ್ಪು ವರದಿಯನ್ನು ನೀಡಿ, ಇವರ ಬೇಜವಬ್ದಾರಿತನ ಹಾಗೂ ನಿಷ್ಕಾಳಜಿ ತೋರಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ತಪ್ಪು ವರದಿಯನ್ನು ಸಲ್ಲಿಸಿ ಪ್ರವರ್ಗ-1 ರಲ್ಲಿ ಬರುವ ಇವರಿಗೆ ಪರಿಶಿಷ್ಟ ಪಂಗಡ “ಗೊಂಡ್” ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಅನೂಕುಲ ಮಾಡಿ ಕೊಟ್ಟಿರುವ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ,


ಉತ್ತರ ಕನ್ನಡ ಜಿಲ್ಲೆ ಇವರನ್ನು ಈ ಕೂಡಲೇ ಸೇವೆಯಂದ ಅಮಾನತ್ತು ಮಾಡಿ ಇವರ ಮೇಲೆ ದೌರ್ಜನ್ಯ ಕಾಯ್ದೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಬೇಕೇಂದು ವಿವಿಧ ಸಂಘಟನೆಯ ಮುಖಂಡರು ಸೇರಿ ಜಿಲ್ಲಾಧೀಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

ರಾಷ್ಟ್ರೀಯ ದಲಿತ ಸಮಿತಿಯ, ಮುಖಂಡರುಗಳು ಪಾಲ್ಗೊಂಡಿದ್ದರು.R D S.






PGK

Post a Comment

Previous Post Next Post