PGK NEWS:-( ಪಶ್ಚಿಮ ಘಟ್ಟ ವಾಯ್ಸ್) ಚಿಕ್ಕಮಗಳೂರು:-ಸರ್ಕಾರ 15 ತಹಶಿಲ್ದಾರ್ ಗಳ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಕ್ರಮದ ತನಿಖೆಗೆ ಸೂಚನೆ ನೀಡಿದ್ದು ಮೊದಲ ಹಂತವಾಗಿ ಮೂಡಿಗೆರೆ ಕಡೂರಿನಲ್ಲಿ ತನಿಖೆ ಆರಂಭವಾಗಿದ್ದು. ಜಿಲ್ಲೆಯಾದ್ಯಂತ ತನಿಖೆ ನಡೆಯಲಿದೆ. ವಿಶೇಷ ತಂಡ ಒಂದೊಂದೇ ತಾಲೂಕಿನಲ್ಲಿ ನಡೆದಿರುವ ಅಕ್ರಮದ ದಾಖಲೆಗಳನ್ನ ಸಂಗ್ರಹ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಮಾಡಲಿದೆ. ರಾಜ್ಯದ ಅತಿ ದೊಡ್ಡ ಕಂದಾಯ ಭೂಮಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, 60 ಕಂದಾಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲೇ ಅತಿದೊಡ್ಡ ಕಂದಾಯ ಭೂಮಿ ಅಕ್ರಮದ ಬಗ್ಗೆ ತನಿಖೆ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ರಾಜ್ಯದ ಅತಿ ದೊಡ್ಡ ಸಾವಿರಾರು ಕೋಟಿ ಮೌಲ್ಯದ ಸಾವಿರಾರು ಎಕರೆ ತನಿಖೆಗೆ ರಾಜ್ಯ ಸರ್ಕಾರ 15 ತಹಶಿಲ್ದಾರ್ ಗಳ ನೇತೃತ್ವದ (revenue officials) ವಿಶೇಷ ತಂಡ ರಚನೆ ಮಾಡಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತವಾಗಿ ಕಡೂರು ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ವಿಶೇಷ ತಂಡ ತನಿಖೆ ಆರಂಭ ಮಾಡಿದ್ದು, ಕಡೂರು ತಾಲೂಕಿನಲ್ಲಿ ನಡೆದಿರುವ ಕಂದಾಯ ಭೂಮಿಯ ಅಕ್ರಮದ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖಾ ವರದಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೈ ಸೇರಿದೆ (Chikkamagalur revenue land encroachment).
ಕಡೂರು ತಾಲೂಕಿನಲ್ಲಿ ನಡೆದ ಕಂದಾಯ ಭೂಮಿಯ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆಯ ವರದಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೈ ಸೇರಿದೆ. 15 ತಹಶಿಲ್ದಾರ್ಗಳ ನೇತೃತ್ವದ ವಿಶೇಷ ತನಿಖಾ ತಂಡ ಕಡೂರು ತಾಲೂಕಿನಲ್ಲಿ ನಡೆದ ಅಕ್ರಮದ ಬಗ್ಗೆ ವರದಿ ಸಿದ್ದ ಪಡಿಸಿದ್ದು ಅಕ್ರಮದಲ್ಲಿ ತಹಶಿಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಸೇರಿದಂತೆ 60 ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ,ಮದಗದಕೆರೆ ಸುತ್ತಮುತ್ತಲಿನಲ್ಲಿ ಮೂರು ಸಾವಿರಾರು ಎಕರೆ ಗೋಮಾಳ, ಕಂದಾಯ ಭೂಮಿಯನ್ನ ಪ್ರಭಾವಿ ವ್ಯಕ್ತಿಗಳು ಹಿರಿಯ ಸರ್ಕಾರಿ ಅಧಿಕಾರಿಗಳ ಹೆಸರಿಗೆ ಪರಭಾರೆ ಮಾಡಿ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ತನಿಖಾ ವರದಿಯನ್ನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸರ್ಕಾರಕ್ಕೆ ಕಳಿಸಿ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ದೂರು ನೀಡಿ ಕಾನೂನು ಕ್ರಮಕ್ಕೆ ಸಿದ್ದತೆ ನಡೆಸಿದ್ದು. ಕಡೂರು ತಾಲೂಕಿನ ಹಿಂದಿನ ತಹಶಿಲ್ದಾರ್ ಉಮೇಶ್ ವಿರುದ್ಧ ಡಿ.ಸಿ ಸೂಚನೆ ಮೇರೆಗೆ ಪ್ರಕರಣ ದಾಖಲಾಗಿದೆ.