PGK NEWS :-ಉತ್ತರಕನ್ನಡLoksabha ಚುನಾವಣೆಗೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ: ಮಂಕಾಳು ವೈದ್ಯ

 PGK news :-




PGK NEWS :-ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲುವೆವು. ಜನರ ಕೆಲಸ ಮಾಡುತ್ತಿರುವ ನಮಗೆ ವಿಶೇಷವಾಗಿ ತಯಾರಿ ಬೇಕೆಂದಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ‌ಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ.

ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಹಾಗಾಗಿ ಕಾಂಗ್ರೆಸ್ ಸುಲಭವಾಗಿ ಕೆನರಾ ಕ್ಷೇತ್ರದಲ್ಲಿ ಗೆಲ್ಲಲಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದಿಂದ ಜನರ ಕಷ್ಟಗಳಿಗೆ ನಮ್ಮ ಸರ್ಕಾರ‌ ನೆರವಾಗಿದೆ. ಹಾಗಾಗಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳನ್ನು ಸರ್ಕಾರ ತಲುಪಿದೆ. ಇಷ್ಟು ಸಾಕು 

‌ಸರ್ಕಾರಗಳು ಜನರಿಗೆ ನೆರವಾಗಬೇಕು. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಸಚಿವ ಮಂಕಾಳು ನುಡಿದರು.

ಯತ್ನಾಳ್ ಮನಸು ಸರಿ ಮಾಡಿಕೊಳ್ಳಲಿ:  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹಿರಿಯರು. ಅವರು ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಲು ಎರಡು ಸಾವಿರ ಕೋಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಕೊಡಬೇಕು ಎಂದು ಹೇಳಿದ್ದರು. ನಮ್ಮ ಸರ್ಕಾರ ಗಟ್ಟಿ ಇದೆ. ಐದು ವರ್ಷ ಅಧಿಕಾರದಲ್ಲಿ ಇರುತ್ತೇವೆ. ಇದೇ ಸತ್ಯ. ಲೋಕಸಭಾ ಚುನಾವಣೆ ನಂತರ ಬಿಜೆಪಿ ಸ್ಥಿತಿ ಏನಾಗಲಿದೆ ಕಾದು ನೋಡಿ. ಅವರಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗಿಲ್ಲ ಎಂದರು‌.

PGK

Post a Comment

Previous Post Next Post