PGK NEWS( ಪಶ್ಚಿಮ ಘಟ್ಟ ವಾಯ್ಸ್) ಗುಂಡು ಹಾರಿಸಿ ನವಿಲನ್ನು ಕೊಂದವನು ಅರೆಸ್ಟ್.



PGK NEWS(ಪಶ್ಚಿಮ ಘಟ್ಟ ವಾಯ್ಸ್):-ಭಟ್ಕಳ: ಭಟ್ಕಳದ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಹಳ್ಳಿಯಲ್ಲಿ ರಾಷ್ಟ್ರಪಕ್ಷಿ ನವಿಲನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುರವರ್ಗ ಮುಗಳಿ ಹೊಂಡ ನಿವಾಸಿ ಇನಾಯತ್ ಉಲ್ಲಾ ಮೈಲಪ್ಪಿ (40) ಎಂದು ತಿಳಿದು ಬಂದಿದೆ
.

ಈತ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಹಳ್ಳಿಯ ಅರಣ್ಯ ಪ್ರದೇಶದಲ್ಲಿ ತನ್ನ ಏರ್‌ಗನ್‌ನಿಂದ ಹೆಣ್ಣು ನವಿಲಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ನವಿಲನ್ನು ದ್ವಿಚಕ್ರ
ವಾಹನ ಸಂಖ್ಯೆ: KA-47 W -5566ರ ಡಿಕ್ಕಿಯಲ್ಲಿ
ಹಾಕಿಕೊಂಡು ಬೇಹಳ್ಳಿಯಿಂದ ಸಬತ್ತಿ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

 ಈ ಕುರಿತಾಗಿ ವನ್ಯಜೀವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಹೊನ್ನಾವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ , ಭಟ್ಕಳ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಹಾಗೂ ಉಪವಲಯ ಅರಣ್ಯಾಧಿಕಾರಿಗಳಾದ ಸಂದೀಪ ಭಂಡಾರಿ ಪಾಲ್ಗೊಂಡಿದ್ದರು.

Advertisement







PGK

Post a Comment

Previous Post Next Post