PGK NEWS(ಪಶ್ಚಿಮಘಟ್ಟ ವೈಸ್)-ಉಡುಪಿ: ಜಯಲಕ್ಷ್ಮೀ ಸಿಲ್ಕ್ಸ್‌ನ ನೂತನ ಮಳಿಗೆ ಉದ್ಘಾಟನೆ,ಗ್ರಾಹಕರಲ್ಲಿ ಸಂತಸ.

PGK NEWS:-ಉಡುಪಿ, ಆ: ಕಳೆದ 54 ವರ್ಷಗಳಿಂದ ಲಕ್ಷಾಂತರ ಗ್ರಾಹಕರ ಅಚ್ಚುಮೆಚ್ಚಿನ ಜವುಳಿ ಮಳಿಗೆಯಾಗಿರುವ ಉದ್ಯಾ ವರದ ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿ ಬನ್ನಂಜೆಯಲ್ಲಿ ರಾ.ಹೆದ್ದಾರಿ 169ಎ ಸಮೀಪ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಶೋರೂಂನ್ನು ಕರ್ಣಾಟಕ ಬ್ಯಾಂಕಿನ ನಿವೃತ್ತ ಎಂಡಿ ಮತ್ತು ಸಿಇಒ ಡಾ. ಮಹಾಬಲೇಶ್ವರ ಎಂ.ಎಸ್. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಣಮಯ ಇತಿಹಾಸವುಳ್ಳ ಉಡುಪಿಯಲ್ಲಿ ನಾನಾ ಶೈಲಿಯ ವಸ್ತುಗಳನ್ನು ಹೊಂದಿರುವ ವರ್ಣಮಯ ಜಯಲಕ್ಷಿ ಮಳಿಗೆ ಸ್ಥಾಪನೆಯಾಗಿರುವುದು ಮತ್ತಷ್ಟು ಮೆರುಗು ನೀಡಲಿದೆ. ಅತ್ಯಂತ ವಿಶಾಲ ವಾಗಿರುವ ಈ ಜವುಳಿ ಮಳಿಗೆಯಲ್ಲಿ ಜಯ ಮತ್ತು ಲಕ್ಷ್ಮೀ ಶಾಶ್ವತವಾಗಿ ನೆಲೆಸುವಂತಾಗಲಿ ಎಂದು ಶುಭ ಹಾರೈಸಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್, ಶಾಲಿನಿ ಶಂಕರ್ ಮೊದಲ ಮಹಡಿಯ ಸೀರೆ ವಿಭಾಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಂಕರ್, ಲವಕುಶರಂತೆ ಸಹೋದರರ ಜೋಡಿ, ಸಿಬ್ಬಂದಿ ಕಾರ್ಯಕ್ಷಮತೆ, ಗುಣಮಟ್ಟ ಹಾಗೂ ನಗುಮೊಗದ ಸೇವೆಯೊಂದಿಗೆ ಜಯಲಕ್ಷಿ ಸಿಲ್ಕ್ಸ್, ಉದ್ಯಮದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಹ್ಯಾಂಡ್ಲೂಮ್ ವಿಭಾಗವನ್ನು ಉದ್ಯಮಿ ಜರ್ರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಿದರೆ,ಗರ್ಲ್ಸ್ ಗೌನ್, ಗಾಗ್ರಾ ವಿಭಾಗವನ್ನು ಸಿನೆಮಾ ನಟಿಯರಾದ ಅಂಶಾ ಮತ್ತು ಮಾನಸಿ ಉದ್ಘಾಟಿಸಿದರು. 2ನೇ ಮಹಡಿಯ ಸಿಲ್ಕ್ ಸೀರೆಗಳ ವಿಭಾಗವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉನ್ನತ ಗುಣಮಟ್ಟದ ಸೀರೆ ವಿಭಾಗವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.
3ನೇ ಮಹಡಿಯಲ್ಲಿನ ಲೈಫ್‌ಸ್ಟ್ರೈಲ್ ವಿಭಾಗವನ್ನು ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, 4ನೇ ಮಹಡಿಯ ಎಥ್ನಿಕ್‌ ವೇರ್ ವಿಭಾಗವನ್ನು ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ರವಿಚಂದ್ರನ್ ಉದ್ಘಾಟಿಸಿ ದರು. 5ನೇ ಮಹಡಿಯಲ್ಲಿ ರುವ ಬ್ರ್ಯಾಂಡೆಡ್ ಮೆನ್ಸ್‌ವೇರ್ ವಿಭಾಗವನ್ನು ಉದ್ಯಾವರ ಹಲೀಮಾ ಸಬ್ಜು ಆಡಿಟೋರಿಯಂನ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಘಾಟಿಸಿದರು.

ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಹಾಗೂ ಶಾಸಕ ಯಶ್ಪಾಲ್ ಎ. ಸುವರ್ಣ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು. ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ, ಶಶಿಕುಮಾರ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ, ಜಯಲಕ್ಷ್ಮಿ ವೀರೇಂದ್ರ ಹೆಗ್ಡೆ, ಅಪರ್ಣಾ ರವೀಂದ್ರ ಹೆಗ್ಡೆ ಈ ವೇಳೆ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.



PGK

Post a Comment

Previous Post Next Post