PGK NEWS:-ಕಾರವಾರ:- ಕಾಡು ಹಂದಿಯನ್ನು, ಬಾಂಬ್‌ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು.

 



 

PGK NEWS:
ಕಾರವಾರ ಜನಸ್ನೇಹಿಯಾಗಿದ್ದ ಕಾಡು ಹಂದಿಯನ್ನು ನಾಡ ಬಾಂಬ್ ಇಟ್ಟು ಸಾಯಿಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಅಮದಳ್ಳಿಯ ಸೀಫ್ರನ್ ಥಾಮಸ್ ಫರ್ನಾಂಡಿಸ್ ಬಂಧಿತ ವ್ಯಕ್ತಿ.‌

ದನಗಳ ಜತೆ ಮನೆಗಳಿಗೆ ಬಂದು ಅವರು ಕೊಟ್ಟ ತಿಂಡಿ ತಿನ್ನುತ್ತಿತ್ತು. ಕಾಂತಾರ ಚಿತ್ರ ಪ್ರಸಿದ್ಧವಾದ ನಂತರ ಹಂದಿ ಬಗ್ಗೆ ವಿಶೇಷ ಪ್ರೀತಿ ಬಂದಿತ್ತು. ಆದರೆ, ಶುಕ್ರವಾರ ರಾತ್ರಿ ಮಾಂಸದಲ್ಲಿ ನಾಡ ಬಾಂಬ್ ಇಡಲಾಗಿದ್ದು , ಅದನ್ನು ಜಗಿದ ಹಂದಿ ಮೃತಪಟ್ಟಿದೆ.
ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆಗಸ್ಟ್‌ 4ರಂದು ನಾಡಬಾಂಬ್ ಸ್ಫೋಟವಾಗಿ ಹಂದಿಯೊಂದು ಮೃತಪಟ್ಟಿತ್ತು.
 ತಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಂದಿ ಸಾವಿನಿಂದ ಗ್ರಾಮಸ್ಥರು ತೀವ್ರ ದುಖಃಕ್ಕೆ ಒಳಗಾಗಿದ್ದರು. ತಕ್ಷಣ ಈ ಬಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.
 ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬುವವರನ್ನು ಬಂಧಿಸಿದ್ದರು.
ಇನ್ನು ನಾಡ ಬಾಂಬ್ ಸ್ಪೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇದೀಗ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೆಶಗಳಿಗೆ ಬರುವುದನ್ನು ಚೆಂಡಿಯಾ ಗ್ರಾಮದ ಜನರು ಗಮನಿಸಿದ್ದರು.

ಊರಿನ ಜನರ ಪ್ರೀತಿ ಸಂಪಾದಿಸಿದ್ದ ಕಾಡುಹಂದಿ:
ಚೆಂಡಿಯಾ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕಾಡಿನಿಂದ ನಾಡಿಗೆ ಬರುತ್ತಿದ್ದ ಒಂದು ಕಾಡುಹಂದಿಗೆ ಜನರು ಪೂಜೆ ಮಾಡುತ್ತಿದ್ದರು. ಇನ್ನು ಗ್ರಾಮಸ್ಥರು ಬಂದರೂ ಯಾರಿಗೂ ತೊಂದರೆ ಕೊಡದೇ ಸಂಪನ್ನನಂತೆ ಗ್ರಾಮಸ್ಥರೊಂದಿಗೆ ಹೊಂದಿಕೊಂಡಿತ್ತು. ಹೀಗಾಗಿ, ಊರಿನ ಜನರ ಪ್ರೀತಿ ಸಂಪಾದಿಸಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಗೆ, ಜನರು ಹಂದಿಗೆ ಆಹಾರವಾಗಿ ಕಾಳು, ಕಡಿ ಸೇರಿದಂತೆ ತಾವು ಊಟ ಮಾಡುವ ಆಹಾರವನ್ನೂ  ಹಾಕುತ್ತಿದ್ದರು.  ಆಹಾರ ಸೇವಿಸಿ ನಂತರ ಯಾರಿಗೂ ಉಪಟಳ ನೀಡದೇ ಕಾಡಿಗೆ ಮರಳುತಿತ್ತು.

ಜನರ ದೂರಿನ ಮೇರೆಗೆ ಆರ್ ಎಫ್ ಒ ರಾಘವೇಂದ್ರ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ.‌
PGK

Post a Comment

Previous Post Next Post