PGK NEWS( ಪಶ್ಚಿಮ ಘಟ್ಟ ವಾಯ್ಸ್) ಶಾಲಾ ಕೊಠಡಿ ಮೇಲ್ಚಾವಣಿ ದುರಸ್ತಿಗೆ ಅನುದಾನ ಕೊಡಿಸಿದ ನಿವೇದಿತ ಆಳ್ವಾ.



PGK NEWS( ಪಶ್ಚಿಮ ಘಟ್ಟ ವಾಯ್ಸ್) 
 
ಕುಮಟಾ :  ತಾಲೂಕಿನ ಮೊರಬಾದ ಹೊಸನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಚಾವಣಿ ದುರಸ್ಥಿಯಾಗುವುದು ಅತಿ ಅವಶ್ಯಕವಾಗಿದ್ದು, ಶಾಲಾ ಮಕ್ಕಳು ಕೊಠಡಿಯ ಮೇಲ್ಚಾವಣಿ ಇಲ್ಲದೆ ವಿದ್ಯಾಭ್ಯಾಸ ಮಾಡುವುದು ತೀರಾ ಕಷ್ಟಕರವಾಗಿತ್ತು. ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಮತ್ತು ಸ್ಥಳೀಯ ಕೋರಿಕೆಯ ಮೇರೆಗೆ    ಕಾಂಗ್ರೆಸ್ ನಾಯಕ ನಿವೇದಿತ ಆಳ್ವಾರವರು ಸದರಿ ಶಾಲೆಯ ಕೊಠಡಿಯ ಮೇಲ್ಚಾವಣಿಯ ದುರಸ್ಥಿಗೆ  ಸುಧಾರಣೆಗೆ ಮಾಡಿಸಲು ರೂಪಾಯಿ 5 ಲಕ್ಷ ಅನುದಾನವನ್ನು ರಾಜ್ಯಸಭಾ ಸದಸ್ಯ  ಶ್ರೀ ಜಿ. ಸಿ ಚಂದ್ರಶೇಖರ್ ಇವರಿಂದ ಮಂಜೂರಿ ಮಾಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮುಂದೊದಗಬಹುದಾದ ಸಮಸ್ಯೆಯನ್ನು ಅರಿತ ನಿವೇದಿತ ಆಳ್ವಾ ತಕ್ಷಣ ಸಮಸ್ಯೆ ಪರಿಹಾರಕ್ಕೆ ಅನುದಾನ ಒದಗಿಸಿಕೊಟ್ಟಿದ್ದಾರೆ. ಈ ಬಗ್ಗೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಪಾಲಕ ವೃಂದ ಆಳ್ವಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಹಿಂದೆ ನಿವೇದಿತ ಆಳ್ವಾ,  ಕರಾವಳಿ ಪ್ರಾಧಿಕಾರದಲ್ಲಿದ್ದಾಗ ಅನೇಕ ಕೆಲಸಗಳು ಮಾಡಿದ್ದಾರೆ.







PGK

Post a Comment

Previous Post Next Post