PGK NEWS. (ಪಶ್ಚಿಮ ಘಟ್ಟ ವಾಯ್ಸ್) ಹೊಸ ಸಂಸತ್​ ಭವನಕ್ಕೆ ಕಲಾಪ ಶಿಫ್ಟ್​: ಹಳೆಯ ಕಟ್ಟಡವನ್ನು ಗ್ರಂಥಾಲಯವನ್ನಾಗಿ ಮಾಡಿ ವಿಪಕ್ಷ ಒತ್ತಡ .!

   (ಪಶ್ಚಿಮ ಘಟ್ಟ ವಾಯ್ಸ್)  

ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನ ಐದು ದಿನಗಳ ಕಾಲ ನಡೆಯಲಿದೆ. ಇಂದು ಹಳೆಯ ಸಂಸತ್​ ಭವನದಲ್ಲಿ ಆರಂಭವಾಗಿರುವ ಕಲಾಪ ನಾಳೆ ನೂತನ ಸಂಸತ್​ ಭವನಕ್ಕೆ ಸ್ಥಳಾಂತರವಾಗಲಿದೆ. ಹಳೆಯ ಸಂಸತ್ ಕಟ್ಟಡವು ಸಂವಿಧಾನದ ಅಂಗೀಕಾರ ಸೇರಿದಂತೆ ಕೆಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಇನ್ನು ಮುಂದೆ ಸರ್ಕಾರದ ಕಾರ್ಯ ಚಟುವಟಿಕೆಗಳು ಹೊಸ ಕಟ್ಟಡದಲ್ಲಿ ನಡೆಯಲಿವೆ. ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಹಳೆಯ ಸಂಸತ್​ ಕಟ್ಟಡ ಇನ್ಮುಂದೆ ಏನಾಗಲಿದೆ ಎಂಬುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

.ಹಳೆಯ ಸಂಸತ್​ ಭವನದ ನಿರ್ಮಾಣ 1927ರಲ್ಲಿ ಪೂರ್ಣಗೊಂಡಿತು. ಅದಕ್ಕೆ ಇದೀಗ 96 ವರ್ಷಗಳು. ಇಂದಿನ ಅವಶ್ಯಕತೆಗಳಿಗೆ ಈ ಕಟ್ಟಡ ಅಸಮರ್ಪಕವಾಗಿದೆ ಎಂದು ಮಾತುಗಳು ಹಲವು ವರ್ಷಗಳಿಂದ ಕೇಳಿಬಂದಿತು. ಹೊಸ ಸಂಸತ್​ ಭವನ ನಿರ್ಮಾಣವಾಗಿದ್ದು, ಇನ್ನು ಮುಂದೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಹಳೆಯ ಸಂಸತ್​ ಭವನದ ನೆನಪುಗಳು ಮಾತ್ರ ಎಂದಿಗೂ ಮಾಸುವುದಿಲ್ಲ.

ಇಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಸಂಸತ್​ ಭವನದ ಪ್ರತಿಯೊಂದು ಇಟ್ಟಿಗೆಗೂ ಕೃತಜ್ಞತೆ ಸಲ್ಲಿಸಿದರು ಮತ್ತು ಸಂಸದರು ಹೊಸ ಭರವಸೆ ಮತ್ತು ನಂಬಿಕೆಯೊಂದಿಗೆ ಹೊಸ ಸಂಸತ್​ ಭವನವನ್ನು ಪ್ರವೇಶಿಸಲಿದ್ದಾರೆ ಎಂದು ಹೇಳಿದರು.

ಹಳೆಯ ಸಂಸತ್'​ ಕಟ್ಟಡವನ್ನು  ಗ್ರಂಥಾಲಯವನ್ನಾಗಿ ಮಾಡಿ ವಿಪಕ್ಷ ಒತ್ತಡ .!

ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯದ ಹೋರಾಟಕ್ಕೆ ಮಾತ್ರವಲ್ಲ, ಅದರ ನಂತರ ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಹಳೇ ಸಂಸತ್​ ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಸ್ಥಳಗಳನ್ನು ಒದಗಿಸಲು ಅದನ್ನು ಮಾರ್ಪಾಡು ಮಾಡಲಾಗುವುದು ಎಂದು ತಿಳಿದುಬಂದಿದೆ.

ಹೊಸ ಸಂಸತ್ ಕಟ್ಟಡವನ್ನು ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ಬೃಹತ್ ಕಟ್ಟಡದಲ್ಲಿ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು. ಉಭಯ ಸದನಗಳ ಜಂಟಿ ಅಧಿವೇಶನಕ್ಕಾಗಿ 1,280 ಸಂಸದರಿಗೆ ಲೋಕಸಭೆಯ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ ಮತ್ತು ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳು ಇವೆ.

ಪ್ರಧಾನಿ ಮೋದಿ (Narendra Modi) ಸೇರಿದಂತೆ ಎಲ್ಲಾ ಸಂಸದರು ಇದು ಮೆಗಾ ಫೋಟೋಶೂಟ್‌ ಮಾಡಿಸಿದರು. ಸುಂದರ ನೆನಪುಗಳೊಂದಿಗೆ ಹಳೆ ಸಂಸತ್‌ ಭವನಕ್ಕೆ ವಿದಾಯ ಹೇಳಿದರು. ಹಳೆ ಸಂಸತ್‌ ಭವನಕ್ಕೆ ‘ಸಂವಿಧಾನ ಸದನ’ ಅಂತ ಹೆಸರಿಡಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈಗ ಎಲ್ಲಾ ಕಾರ್ಯ, ಕಲಾಪ ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌ ಆಗಿದೆ. ಹಾಗಾದ್ರೆ ಹಳೆ ಸಂಸತ್‌ ಭವನ ಕಥೆ ಏನು? ಈ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.  

ಹಳೆ ಸಂಸತ್‌ ಭವನ ರಚನೆ ಆಗಿದ್ದು ಯಾವಾಗ?


ಇದು 1927 ರಲ್ಲಿ ಪೂರ್ಣಗೊಂಡಿತು. ಈಗ ಹಳೆ ಸಂಸತ್‌ ಭವನಕ್ಕೆ 96 ವರ್ಷ. ಈ ಕಟ್ಟಡವನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಇದನ್ನು 1921-1927 ರ ನಡುವೆ ನಿರ್ಮಿಸಲಾಯಿತು. ಇದನ್ನು ಜನವರಿ 1927 ರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸ್ಥಾನವಾಗಿ ತೆರೆಯಲಾಯಿತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟ ಬಳಿಕ, ಇದನ್ನು ಭಾರತದ ಸಂವಿಧಾನ ಸಭೆಯು ಸ್ವಾಧೀನಪಡಿಸಿಕೊಂಡಿತು. 26 ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದ ನಂತರ ಭಾರತವು ಗಣರಾಜ್ಯವಾಯಿತು

ಕಟ್ಟಡವನ್ನು ಬೀಳಿಸಲ್ಲ
ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಸಂಸತ್ತಿನ ಕಟ್ಟಡವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾತ್ರವಲ್ಲ, ದೇಶದ ಉದಯಕ್ಕೂ ಸಾಕ್ಷಿಯಾಗಿದೆ. ಹೀಗಾಗಿ ಕಟ್ಟಡವನ್ನು ಕೆಡವಲಾಗುವುದಿಲ್ಲ. ಸಂಸತ್ತಿನ ಕಾರ್ಯಕ್ರಮಗಳಿಗೆ ಸ್ಥಳಗಳನ್ನು ಒದಗಿಸಲು ಅದನ್ನು “ರಿಟ್ರೊಫಿಟ್” ಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 

ಈ ಐತಿಹಾಸಿಕ ರಚನೆಯನ್ನು ಸಂರಕ್ಷಿಸಲಾಗುವುದು. ಏಕೆಂದರೆ ಇದು ದೇಶದ ಪುರಾತತ್ವ ಆಸ್ತಿಯಾಗಿದೆ. ಸಂಸತ್‌ ರಚನೆಯನ್ನು ಸರಿಪಡಿಸಬೇಕು. ಪರ್ಯಾಯ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು ಎಂದು 2021 ರಲ್ಲಿ ಆಗಿನ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು.

ರಾಷ್ಟ್ರೀಯ ವಸ್ತು ಸಂಗ್ರಹಾಲಯ


ರಾಷ್ಟ್ರೀಯ ವಸ್ತು ಸಂಗ್ರಹಾಗಾರದ ರೂಪದಲ್ಲಿ ಹಳೆಯ ಕಟ್ಟಡ ಕಾರ್ಯ ನಿರ್ವಹಿಸಲಿದೆ. ಭಾರತದ ಪುರಾತನ ಹಾಗೂ ಸೂಕ್ಷ್ಮ ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ಈ ಕಟ್ಟಡದ ಕೆಲವು ಭಾಗವನ್ನು ಮ್ಯೂಸಿಯಂ ರೂಪದಲ್ಲಿ ಬದಲಿಸಲು ತೀರ್ಮಾನಿಸಲಾಗಿದೆ.

ಹೊಸ ಸಂಸತ್‌ ಭವನ ವಿಶೇಷತೆ ಏನು?




ಸೆ.19 ರಿಂದ ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದೆ. 2023ರ ಮೇ ತಿಂಗಳಲ್ಲಿ ಇದು ಉದ್ಘಾಟನೆಯಾಯಿತು. ಈ ಭವನದಲ್ಲಿ 888 ಲೋಕಸಭಾ ಸದಸ್ಯರು ಹಾಗೂ 300 ರಾಜ್ಯಸಭಾ ಸದಸ್ಯರು ಕುಳಿತುಕೊಳ್ಳುವಷ್ಟು ಆಸನದ ವ್ಯವಸ್ಥೆ ಇದೆ. ಒಟ್ಟಿಗೆ 1,280 ಸದಸ್ಯರು ಕುಳಿತುಕೊಳ್ಳಬಹುದು.




















PGK

Post a Comment

Previous Post Next Post