( ಪಶ್ಚಿಮ ಘಟ್ಟ ವಾಯ್ಸ್)
ಬೆಂಗಳೂರು :-ಇಂದು ಕಾರ್ಮಿಕ ಸಚಿವರಾದಂತಹ ಸನ್ಮಾನ್ಯ ಶ್ರೀ ಸಂತೋಷ್ ಲಾಡ್ ರವರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ, ಕಾರ್ಮಿಕ ವರ್ಗದ ಕುಂದುಕೊರತೆಗಳನ್ನು ಆಲಿಸಿ ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ಎಲ್ಲಾ ಪದಾಧಿಕಾರಿಗಳಿಂದ ಅಹವಾಲುಗಳನ್ನು ಸ್ವೀಕರಿಸಿ, ಶೀಘ್ರವಾಗಿ ಇವೆಲ್ಲದರ ಬಗ್ಗೆ ಕ್ರಮ ಕೈಗೊಂಡು, ಕೆಲವು ಬೇಡಿಕೆಗಳನ್ನು ಈಡೇರಿಸಿ ಕೊಡುವುದಾಗಿ ಆಶ್ವಾಸನೆಯನ್ನು ಕೊಟ್ಟು, ಎಲ್ಲರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡು, ಕೆಪಿಸಿಸಿ ಕಾರ್ಮಿಕ ವಿಭಾಗದ ಕೆಲಸ ಕಾರ್ಯ ವೈಖರಿಗಳ ಬಗ್ಗೆ ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದಂತಹ ಕೆ ಪುಟ್ಟಸ್ವಾಮಿ ಗೌಡ್ರು, ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದಂತಹ , ಹರಿಣಿ ಗೌಡ ರವರು ಹಾಗೂ ರಕ್ಷಿತ್ ರಾಜ್ಯ ಕಾರ್ಯದರ್ಶಿ ಮತ್ತು ಜಯರಾಮಯ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ ಇನ್ನು ಅನೇಕ ಪ್ರಮುಖರು ಮುಖಂಡರು ಪದಾಧಿಕಾರಿಗಳು ಇಂದು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.