( ಪಶ್ಚಿಮ ಘಟ್ಟ ವಾಯ್ಸ್ PGK NEWS:)
-ಕಾರವಾರ: ಕಾವೇರಿ ನೀರಿಗಾಗಿ ಬಂದ್ ಮಾಡುವುದು ಸಹ ಕರ್ನಾಟಕದ ಹಿತ ದೃಷ್ಟಿಯಿಂದ. ಕಾಂಗ್ರೆಸ್ ಸರ್ಕಾರ ಸಹ ಬಡವರ ಮತ್ತು ರೈತರ ಪರ ನಿಲುವು ಹೊಂದಿದೆ ಹಾಗೂ ಕಾರ್ಯಕ್ರಮ ಜಾರಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಕಾವೇರಿ ನೀರಿಗಾಗಿ ನಾವು ಸಹ ಸುಪ್ರಿಂ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿದ್ದೆವೆ. ನಾವು ಬಡವರ ಪರವಾಗಿ, ರೈತರ ಪರವಾಗಿ ಕೆಲಸ ಮಾಡುತ್ತಿದ್ದೆವೆ. ನಮ್ಮ ಬೆಂಬಲ ಯಾವತ್ತಿಗೂ ರೈತರ ಪರವಾಗಿದೆ. ನಾಳೆ ಕೋರ್ಟನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತೆ ಎಂಬ ವಿಶ್ವಾಸವಿದೆ ಎಂದರು.
ಇಂಡಿಯಾ ಒಕ್ಕೂಟದ ಹಿತ ಕಾಯುದಕ್ಕೆ ನೀರು ಬೀಡುತ್ತಿದ್ದಾರೆ ಎಂಬ ಬಿಜೆಪಿಯ ಸಿ.ಟಿ. ರವಿ ಹೇಳಿಕೆಗೆ ಗರಂ ಆದ ಸಚಿವ ವೈದ್ಯರು, ಬಿಜೆಪಿ ಪಕ್ಷದವರಿಗೆ ಬರೀ ಆರೋಪ ಮಾಡುವುದೇ ಕೆಲಸ. ಆರೋಪ ಮಾಡುವುದು ಬಿಟ್ಟು ಜೀವಮಾನದಲ್ಲಿ ಬೇರೆ ಏನು ಕೆಲಸ ಮಾಡಿದ್ದಾರೆ ಅವರು ಹೇಳಿ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.
ಹಿಂದೆ ರಾಜ್ಯದಲ್ಲಿ ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವಾಗ ಕಾವೇರಿ ನದಿ ನೀರು ಹಂಚಿಕೆ ವಿಚಾರ ಬಗೆಹರೆಸಬೇಕಿತ್ತು. ಆಗ ಮೌನವಾಗಿದ್ದ ಬಿಜೆಪಿ, ಈಗ ರಾಜ್ಯದಲ್ಲಿ ಬೊಬ್ಬೆ ಹಾಕುತ್ತಿದೆ. ಬಿಜೆಪಿ 26 ಸಂಸದರು ತುಟಿ ಪಿಟಕ್ ಎನ್ನುತ್ತಿಲ್ಲ. ರೈತರ ಪರವಾಗಿ ಬಿಜೆಪಿಯವರು ಎಂದೂ ಕೆಲಸ ಮಾಡಿಲ್ಲ. ನಾವು ರೈತರ ಪರವಾಗಿ ನಿಲ್ಲುತ್ತೇವೆ ಎಂದು ಮಂಕಾಳ ವೈದ್ಯ ಹೇಳಿದರು.
ಕಾವೇರಿ ನೀರಿನ ವಿಚಾರವಾಗಿ ಜೆಡಿಎಸ್ – ಬಿಜೆಪಿ ರಸ್ತೆಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನ ಹೆದರಿಸಲಿಕ್ಕೆ ಹೊರಟಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಹೆದರವುದಿಲ್ಲ. ನಾವು ರಾಜಕಾರಣ ಮಾಡುತ್ತಿಲ್ಲ, ಜನಪರ ಕೆಲಸ ಮಾಡುತ್ತಿದ್ದೆವೆ ಎಂದರು.
ಬೀದಿಗಿಳಿದು ಹೋರಾಟ ಮಾಡಿ ನಮ್ಮ ದಾರಿ ತಪ್ಪಿಸಲಿಕ್ಕೆ ನೋಡುತ್ತಿದ್ದಾರೆ. ಅವರು ಏನೇ ಮಾಡಿದರು ನಾವು ಹೆದರುವುದಿಲ್ಲ. ಜನ ನಮ್ಮ ಪರವಾಗಿದ್ದರಿಂದ ಅವರು ಹೆದರಿಕೊಂಡು ಬೀದಿಗಿಳಿದಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ನುಡಿದರು.
ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವೈದ್ಯರು, ಮಂತ್ರಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಹೈಕಮಾಂಡ್ ಹಾಗೂ ಎಲ್ಲ ಶಾಸಕರು ಸೇರಿ ಆಯ್ಕೆ ಮಾಡಿದ್ದಾರೆ. ಮೂರು ಡಿಸಿಎಂ ಬೇಕಾದರೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ ನಿರ್ಧಾರವೇ ಪೈನಲ್ ಎಂದ ಸಚಿವರು, ಇಂತಹ ವಿಷಯದಲ್ಲಿ ನಮ್ಮ ಬೆಂಬಲ ಮುಖ್ಯವಲ್ಲ, ಹೈಕಮಾಂಡ್ ಇಂತಹ ವಿಚಾರದಲ್ಲಿ ಏನು ಮಾಡುತ್ತದೆ ಎಂಬುವುದೇ ಮುಖ್ಯ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.