PGK news( ಪಶ್ಚಿಮ ಘಟ್ಟ ವಾಯ್ಸ್) ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ – ಕೇಂದ್ರದ ಉದ್ದೇಶವೇನು? ವಿವಾದ ಯಾಕೆ?

 




PGKNEWS( ಪಶ್ಚಿಮ ಘಟ್ಟ ವಾಯ್ಸ್)  ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಅರಣ್ಯಗಳಿಗೆ ಮಸೂದೆಯು ಹಾನಿ ಮಾಡುತ್ತದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡ್ಡುತ್ತವೆ. ಅರಣ್ಯ ವಾಸಿಗಳಿಗೆ ಬದೆರಿಕೆಯಾಗಿದೆ ಎಂದು ಪರಿಸರ ತಜ್ಞರು ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಆದರೂ, ಕೇಂದ್ರವು ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಮಸೂದೆ ಏನು ಹೇಳುತ್ತದೆ ಎಂಬುದನ್ನು ನೋಡೋಣ...

ಹವಾಮಾನ ಬದಲಾವಣೆಗೆ ನಾನಾ ರೀತಿಯ ಕಾರಣಗಳಿವೆ. ಅದರಲ್ಲಿ, ಪರಿಸರದ ವಿನಾಶವೂ ಒಂದು. ಭೂಮಿಯ ಹಸಿರು ವಲಯ ಕ್ಷೀಣಿಸುತ್ತಿದೆ. ಕಾಂಕ್ರಿಟ್‌ ಕಾಡುಗಳು ತಲೆ ಎತ್ತುತ್ತಿವೆ. ತಾಪಮಾನವೂ ಹೆಚ್ಚುತ್ತಿದೆ. ಮಳೆಯ ಕಾಲಮಾನ ಏರುಪೇರಾಗಿದೆ. ಕೆಲವೆಡೆ ಅತಿವೃಷ್ಟಿಯಾದರೆ, ಹಲವೆಡೆ ಬರ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ ಅತ್ಯಗತ್ಯವಾಗಿದೆ. ಈ ನಡುವೆ, ಕೇಂದ್ರ ಸರ್ಕಾರವು ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023ನ್ನು ಸಿದ್ದಪಡಿಸಿದೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಕೂಡ ಮಸೂದೆಗೆ ಒಪ್ಪಿಗೆ ನೀಡಿದೆ. ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

ದೇಶದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ತಿದ್ದುಪಡಿ ಮಸೂದೆಯ ಉದ್ದೇಶವೆಂದು ಸರ್ಕಾರ ಹೇಳಿದೆ. ಆದರೆ, ಅದರಲ್ಲಿನ ಅಂಶಗಳು ಪರಸ್ಪರ ವ್ಯತಿರಿಕ್ತವಾಗಿವೆ. ಮಸೂದೆಯಲ್ಲಿ ಲೋಕೋಪಯೋಗಿ ಯೋಜನೆಗಳಿಗಾಗಿ ಅರಣ್ಯದ ಮರಗಳನ್ನು ಕಡಿಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಗಡಿ ಮತ್ತು ಗಡಿಯೇತರ ರಾಷ್ಟ್ರೀಯ ಭದ್ರತೆಯ ಪ್ರದೇಶಗಳನ್ನು ಅರಣ್ಯ ಮುಕ್ತಗೊಳಿಸುವುದಾಗಿಯೂ ಮಸೂದೆಯಲ್ಲಿ ಹೇಳಲಾಗಿದೆ. ಜೊತೆಗೆ, ಅರಣ್ಯವಾಸಿಗಳಿರುವ ಅರಣ್ಯಗಳನ್ನು ಅವರಿಂದ ಮುಕ್ತಗೊಳಿಸಿ ಶುದ್ಧ ‘ಹಸಿರು ಹೊದಿಕೆ’ಯನ್ನು ನಿರ್ಮಿಸುವುದಾಗಿ ಮಸೂದೆಯಲ್ಲಿ ಹೇಳಲಾಗಿದೆ.

ಏನಿದು ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ?

ಈ ಮಸೂದೆ ಮೂಲಕ ಅರಣ್ಯ ಸಂರಕ್ಷಣಾ ಕಾಯಿದೆ-1980ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 1980ರ ಕಾಯ್ದೆಯು ಭಾರತದ ಅರಣ್ಯಗಳನ್ನು ರಕ್ಷಿಸಲು ಜಾರಿಗೆ ತಂದ ಶಾಸನವಾಗಿದೆ. ಇದು ಅರಣ್ಯ ಸಂಪನ್ಮೂಲಗಳನ್ನು – ಮರ, ಬಿದಿರು, ಕಲ್ಲಿದ್ದಲು ಹಾಗೂ ಖನಿಜಗಳನ್ನು ಹೊರತೆಗೆಯುವುದು ಮತ್ತು ಅಲ್ಲಿನ ಸಮುದಾಯಗಳನ್ನು ಹೊರಹಾಕುವುದನ್ನು ನಿಯಂತ್ರಿಸುತ್ತದೆ. ಈ ಕಾಯ್ದೆಯ ಜೊತೆಗಿರುವ ಅರಣ್ಯ ಹಕ್ಕು ಕಾಯ್ದೆಯು ಆದಿವಾಸಿಗಳು ಮತ್ತು ಅರಣ್ಯವನ್ನು ಅವಲಂಬಿಸಿರುವ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುತ್ತದೆ.

ಆದರೂ, 1951ರಿಂದ 1975ರ ಅವಧಿಯಲ್ಲಿ ಸುಮಾರು 40 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ನಾನಾ ಅರಣ್ಯೇತರ ಉದ್ದೇಶಗಳಿಗಾಗಿ ತೆರವು ಮಾಡಲಾಗಿದೆ. ಅಂತೆಯೇ, 1980ರಿಂದ 2023 ರವರೆಗೆ 10 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಅಂದರೆ, 1980ರಲ್ಲಿ ಜಾರಿಗೆ ಬಂದ ಕಾಯಿದೆಯು ಅರಣ್ಯ ಭೂಮಿಯನ್ನು ಕೈಗಾರಿಕೆಗಳಂತಹ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳುವ ವೇಗವನ್ನು ತಗ್ಗಿಸಿದೆ.

ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರದ ದಾಖಲೆಗಳಲ್ಲಿ ಈಗಾಗಲೇ ‘ಅರಣ್ಯ’ ಎಂದು ಗುರುತಿಸಲಾದ ಪ್ರದೇಶಗಳಿಗೆ ಮಾತ್ರ ಆ ಕಾಯ್ದೆ ರಕ್ಷಣೆ ನೀಡುತ್ತಿತ್ತು. ಗೋದವರ್ಮನ್ ತಿರುಮಲ್ಪಾಡ್ ಪ್ರಕರಣದಲ್ಲಿ 1996ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅರಣ್ಯ ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಇದರ ಅಡಿಯಲ್ಲಿ, ಔಪಚಾರಿಕವಾಗಿ ‘ಅರಣ್ಯಗಳು’ ಎಂದು ಔಪಚಾರಿಕವಾಗಿ ಅಧಿಸೂಚಿತಗೊಳ್ಳದ ಪ್ರದೇಶಗಳು ಕೂಡ ಅರಣ್ಯಗಳು ಆಗಿರುತ್ತವೆ. ‘ಅರಣ್ಯ’ ಎಂಬುದಕ್ಕೆ ಎಲ್ಲವನ್ನು ಒಳಗೊಳ್ಳುವ ವ್ಯಾಖ್ಯಾನವಿಲ್ಲ ಎಂದಿದ್ದ ತಿರುಮಲ್ಪಾಡ್ ತೀರ್ಪು, ತಮ್ಮದೇ ಆದ ಮಾನದಂಡಗಳನ್ನು ಬಳಸಿಕೊಂಡು ಅರಣ್ಯಗಳನ್ನು ವ್ಯಾಖ್ಯಾನಿಸುವ ಮತ್ತು ಗುರುತಿಸುವ ಜವಾಬ್ದಾರಿಯನ್ನು ಸರ್ಕಾರಗಳಿಗೆ ನೀಡಿದೆ.


ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರದ ದಾಖಲೆಗಳಲ್ಲಿ ಈಗಾಗಲೇ ‘ಅರಣ್ಯ’ ಎಂದು ಗುರುತಿಸಲಾದ ಪ್ರದೇಶಗಳಿಗೆ ಮಾತ್ರ ಆ ಕಾಯ್ದೆ ರಕ್ಷಣೆ ನೀಡುತ್ತಿತ್ತು. ಗೋದವರ್ಮನ್ ತಿರುಮಲ್ಪಾಡ್ ಪ್ರಕರಣದಲ್ಲಿ 1996ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅರಣ್ಯ ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಇದರ ಅಡಿಯಲ್ಲಿ, ಔಪಚಾರಿಕವಾಗಿ ‘ಅರಣ್ಯಗಳು’ ಎಂದು ಔಪಚಾರಿಕವಾಗಿ ಅಧಿಸೂಚಿತಗೊಳ್ಳದ ಪ್ರದೇಶಗಳು ಕೂಡ ಅರಣ್ಯಗಳು ಆಗಿರುತ್ತವೆ. ‘ಅರಣ್ಯ’ ಎಂಬುದಕ್ಕೆ ಎಲ್ಲವನ್ನು ಒಳಗೊಳ್ಳುವ ವ್ಯಾಖ್ಯಾನವಿಲ್ಲ ಎಂದಿದ್ದ ತಿರುಮಲ್ಪಾಡ್ ತೀರ್ಪು, ತಮ್ಮದೇ ಆದ ಮಾನದಂಡಗಳನ್ನು ಬಳಸಿಕೊಂಡು ಅರಣ್ಯಗಳನ್ನು ವ್ಯಾಖ್ಯಾನಿಸುವ ಮತ್ತು ಗುರುತಿಸುವ ಜವಾಬ್ದಾರಿಯನ್ನು ಸರ್ಕಾರಗಳಿಗೆ ನೀಡಿದೆ.

ಮತ್ತೊಂದೆಡೆ, ರಾಜ್ಯಗಳು ಗಣಿಗಾರಿಕೆ ಕಾರ್ಯಾಚರಣೆಗಳಿಗಾಗಿ ಕಂಪನಿಗಳಿಗೆ ತೋಟಗಳಿಗೆ ಮೀಸಲಾದ ಅರಣ್ಯ ಪ್ರದೇಶಗಳನ್ನು ಹಂಚುತ್ತಿವೆ – ಇದು ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಅರಣ್ಯಗಳನ್ನು ಕೈಗಾರಿಕಾ ಬಳಕೆಗಳಿಗೆ ಬಳಸಿಕೊಳ್ಳುವ ಮತ್ತು ಮರು ಅರಣ್ಯೀಕರಣಕ್ಕೆ ಸಹಾಯ ಮಾಡುವ ಕಾಯಿದೆಯ ಮೂಲ ಉದ್ದೇಶವನ್ನು ಮೀರಿ ಹೊಸ ಪರಿಹಾರಗಳನ್ನು ರೂಪಿಸಲು ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಹೇಳಿಕೊಂಡಿದೆ.

ತಿದ್ದುಪಡಿಗಳಿಗೆ ಆಕ್ಷೇಪಣೆಗಳೇನು? 

ಜೆಪಿಸಿ 31 ಸದಸ್ಯರನ್ನು ಒಳಗೊಂಡಿದೆ. ಅವರಲ್ಲಿ 18 ಮಂದಿ ಬಿಜೆಪಿಯವರು. ಸಾಮಾನ್ಯವಾಗಿ ಸಂಸತ್ತಿನ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗಳಿಗೆ ಕಳುಹಿಸಲಾದ ಮಸೂದೆಗಳನ್ನು ಈ ಸದಸ್ಯರು ಸಂಪೂರ್ಣವಾಗಿ ತನಿಖೆ ಮಾಡುತ್ತಾರೆ. ಅವರು ತಮ್ಮ ವರದಿಯಲ್ಲಿ ಹಲವು ದೃಷ್ಟಿಕೋನಗಳ ಕುರಿತು ಸ್ವತಂತ್ರ ಮೌಲ್ಯಮಾಪನ ಮಾಡುತ್ತಾರೆ. ಆದರೆ, ಸಮಿತಿಯು ಇಂತಹ ಯಾವುದೇ ಸಾಮೂಹಿಕ, ಸ್ವತಂತ್ರ ಮೌಲ್ಯಮಾಪನವನ್ನು ಮಾಡಿಲ್ಲವೆಂಬುದು ತಿಳಿದುಬಂದಿದೆ. ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ಪ್ರಾಸಂಗಿಕವಾಗಿ ಆರು ಸದಸ್ಯರು ಅಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ, ತಿದ್ದುಪಡಿ ಪ್ರಸ್ತಾವಗಳು 2022ರ ಜೂನ್‌ನಿಂದ ಸಾರ್ವಜನಿಕ ವಲಯದಲ್ಲಿವೆ. ಎನ್‌ಜಿಒಗಳು, ಪರಿಸರವಾದಿಗಳು ಹಾಗೂ ಆದಿವಾಸಿ-ಬುಡಕಟ್ಟು ಸಮುದಾಯಗಳು ತಮ್ಮ ಆಕ್ಷೇಪಗಳನ್ನು ಕೂಡ ಸೂಚಿಸಿವೆ.



https://www.westernghatsvoice.com/2023/08/pgk-news





PGK

Post a Comment

Previous Post Next Post