PGK NEWS(ಪಶ್ಚಿಮ ಘಟ್ಟ ವಾಯ್ಸ್) ಉಪ್ಪಿನಂಗಡಿ: ಮರ ಕಳ್ಳತನ ಪ್ರಕರಣ; ಆರೋಪಿ ಸೆರೆ.


PGK NEWS(ಪಶ್ಚಿಮ ಘಟ್ಟ ವಾಯ್ಸ್) :-ಉಪ್ಪಿನಂಗಡಿ: ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಸರಕಾರಿ ಮೀಸಲು ಅರಣ್ಯದಿಂದ ಮರಕಳ್ಳತನ ನಡೆಸಿದ ಓರ್ವನನ್ನು ಅರಣ್ಯಾಧಿಕಾರಿಗಳ ತಂಡ ಮಂಗಳವಾರ ಬಂಧಿಸಿದ್ದಾರೆ.

ಧರ್ನಪ್ಪ ಗೌಡ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ಅಜಿತ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಕಾಡಿನಲ್ಲಿ ಬೇಂಗ ಮರವೊಂದನ್ನು ಕಡಿದು, ಅದನ್ನು ದಿಮ್ಮಿಗಳನ್ನಾಗಿ ಮಾಡುತ್ತಿದ್ದಾಗ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ಮರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಮರದ ಮೌಲ್ಯ ಒಂದು ಲಕ್ಷದ 26 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಪ್ರಶಾಂತ್, ಭರತ್, ಅರಣ್ಯ ಪಾಲಕ ಸನತ್, ವಿನಯಚಂದ್ರ, ರಾಜೇಶ್, ಲಿಂಗಪ್ಪ, ಸುನೀಲ್ ನಾಯ್ಕ ಹಾಗೂ ಜೀಪು ಚಾಲಕ ಕಿಶೋರ್ ಭಾಗವಹಿಸಿದ್ದರು.



ವರದಿ :-ಕಿಶೋರ್ ಶೆಟ್ಟಿ.

PGK

Post a Comment

Previous Post Next Post