PGK NEWS(.ಪಶ್ಚಿಮ ಘಟ್ಟ ವಾಯ್ಸ್) ಶ್ರೀಗಂಧದ ಮರ ಕಳ್ಳತನ: "ಕಡೂರಿನಲ್ಲಿ ನಾಲ್ವರ ಸೆರೆಹಿಡಿದ "ಅರಣ್ಯ ಅಧಿಕಾರಿಗಳು .


 PGK NEWS(.ಪಶ್ಚಿಮ ಘಟ್ಟ ವಾಯ್ಸ್) ಚಿಕ್ಕಮಗಳೂರು,  ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುಖ್ಯಾತ ಶ್ರೀಗಂಧ ಮರ ಕಳ್ಳತನದ ತಂಡವನ್ನು ಕಡೂರು ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಅಲ್ಲದೆ ಬಂಧಿತರಿಂದ 21 ಕೆ.ಜಿ. ಶ್ರೀಗಂಧದ ಜೊತೆ ಬೈಕ್, ಮಚ್ಚು, ಕೊಡಲಿ, ಹಾರೆಯನ್ನು ವಶಪಡಿಸಿಕೊಂಡಿದ್ದಾರೆ. ಕರಿಯಪ್ಪ ಅಲಿಯಾಸ್ ಕರಿಚಿತರೆ, ಪರಮೇಶ್ ಅಲಿಯಾಸ್ ಮುಕುಡಿ, ಶಿವರಾಜ್, ಬಾಲಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ. ಕರಿಯಪ್ಪ ಅಲಿಯಾಸ್ ಕರಿಚಿರತೆ ಎಮ್ಮೆದೊಡ್ಡಿ, ಸಖರಾಯಪಟ್ಟಣ, ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಬಾರಿ ಶ್ರೀಗಂಧದ ಮರಗಳನ್ನು ಕಡಿದ ಕಳ್ಳಸಾಕಾಣಿಕೆ ಮಾಡಿದ್ದು, ಆತನ ಮೇಲೆ ನಾಲ್ಕೈದು ಪ್ರಕರಣಗಳು ದಾಖಲಾಗಿವೆ.


ಹಲವು ಪ್ರಕರಣಗಳಲ್ಲಿ ಪ್ರಮುಖ ಕಿಂಗ್ ಪಿನ್ ಆಗಿದ್ದ ಕರಿಯಪ್ಪನನ್ನು ಬಂಧಿಸಲು ಅರಣ್ಯ ಅಧಿಕಾರಿಗಳು ಹಲವು ದಿನಗಳಿಂದ ಬಲೆ ಬೀಸಿದ್ದರು. ಇದೀಗ ಕಡೂರಿನ ಎಮ್ಮೆ ದೊಡ್ಡಿ ಮೀಸಲು ಅರಣ್ಯದಲ್ಲೇ ಶ್ರೀಗಂಧ ಮರವನ್ನು ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಕಡೂರು ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಕುಖ್ಯಾತ ಕಳ್ಳನನ್ನು ಬಂಧಿಸಿದ್ದ ಪೊಲೀಸರು ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಅರಸೀಕೆರೆ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಇತ್ತೀಚೆಗಷ್ಟೇ ಬಂಧಿಸಿದ್ದರು. ಮೊಹಮ್ಮದ್‌ ಸುಹೇಬ್ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿತ್ತು. ಬಂಧಿತನಿಂದ 7 ಆಂಪ್ಲಿಪ್ಲೇಯರ್, 6 ಸಿಸಿ ಕ್ಯಾಮೆರಾಗಳು, 1 ಕಂಪ್ಯೂಟರ್, 1 ಟಿವಿ, 1 ಸೌಂಡ್ ಮಿಕ್ಸರ್, 2 ಸ್ಪೀಕರ್, 2 ಮಾನಿಟರ್, 1 ಡಿವಿಆರ್, ಬೀಗ ಹೊಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್, 2 ಸ್ಪೀಕರ್ ಇರುವ ಹೋಂ ಥಿಯೇಟರ್, ಸಿಸಿ ಕ್ಯಾಮೆರಾ ಸ್ವಿಚ್, ಒಂದು ಮಾನಿಟರ್, ಕ್ಯಾನೆನ್ ಕ್ಯಾಮೆರಾ ಸೇರಿದಂತೆ ಒಟ್ಟು 5,35,000 ರೂ ಬೆಲೆಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.


ಆರೋಪಿ ಮೊಹಮ್ಮದ್‌ ಸುಹೇಬ್ ಮೈಸೂರಿನ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಪಿರ್ದೋಸ್ ಮಸೀದಿ, ಹಳೆ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್.ನಗರದ ಜಾಮೀಯಾ ಮಸೀದಿ, ಹಾಸನದ ಕುಬಾ ಮಸೀದಿ ಮತ್ತು ಗುಜರಾತಿ ದರ್ಗಾ, ಗಂಡಸಿಯ ಮದಿನಾ ಮಸೀದಿ, ಅರಸೀಕೆರೆ ನಗರದ ಜಾಮೀಯಾ ಮಸೀದಿ ಮತ್ತು ಖಾದರ್ ಚಾವಲಿ ದರ್ಗಾಗಳಲ್ಲಿ ಕಳ್ಳತನ ಮಾಡಿದ್ದ ಎನ್ನುವುದು ಪೊಲೀಸ್‌ ಕಾರ್ಯಾಚರಣೆಯಲ್ಲಿ ತಿಳಿದುಬಂದಿತ್ತು. ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಕಳ್ಳತನ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್‌ ಸುಹೇಬ್‌ನನ್ನು ಬಂಧಿಸಲಾಗಿತ್ತು. ಆರೋಪಿ ಹತ್ತು ಮಸೀದಿ ಹಾಗೂ ದರ್ಗಾಗಳಲ್ಲಿ ಕಳ್ಳತನ ಮಾಡಿರುವ ಮಾಹಿತಿ ಇದ್ದು, ಒಟ್ಟು ಎಂಟು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದಿದ್ದರು. ಇನ್ನು ಆರೋಪಿ ಕಳ್ಳತನ ಮಾಡಿದ ವಸ್ತುಗಳನ್ನು ಶ್ರೀರಂಗಪಟ್ಟಣದ ಮನೆಯೊಂದರಲ್ಲಿ ಇಟ್ಟು ನಂತರ ಮಾರಾಟ ಮಾಡುತ್ತಿದ್ದ. ಮೊಹಮ್ಮದ್ ಸುಹೇಬ್ ಸುನ್ನತ್ ಬೀದಿ, ವಿರಾಜಪೇಟೆಯವನು. ಮದುವೆಯಾದ ನಂತರ ಈತನನ್ನು ಜಮಾತ್‌ನಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಮೊಹಮ್ಮದ್ ಸುಹೇಬ್ ದರ್ಗಾ, ಮಸೀದಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾನೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದರು.









PGK

Post a Comment

Previous Post Next Post