PGKNEWS (ಪಶ್ಚಿಮ ಘಟ್ಟ ವಾಯ್ಸ್)
ರಾಣೆಬೆನ್ನೂರ: ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಬೈಕ್ ಸವಾರನಿಗೆ 11 ತಿಂಗಳು ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಓ.ಎ. ಗುರುವಾರ ಆದೇಶ ಹೊರಡಿಸಿದ್ದಾರೆ.
ನಗರದ ಹಲಗೇರಿ ಕ್ರಾಸ್ ಬಳಿಯ ನಿವಾಸಿ ನಿಸಾರ್ ಅಹ್ಮದ್ ಹಲಗೇರಿ ಶಿಕ್ಷೆಗೊಳಗಾದ ಅಪರಾಧಿ.ಈತ 2019 ಮಾರ್ಚ್ 5ರಂದು ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಬಂದು ನಗರದ ಬಸ್ ನಿಲ್ದಾಣದ ಬಳಿ ನಿಂತಿದ್ದ ತಾಲೂಕಿನ ಬಸಪ್ಪ ಅಂತರವಳ್ಳಿ ಕುರುಬರ ಎಂಬುವರಿಗೆ ಡಿಕ್ಕಿ ಪಡಿಸಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸಪ್ಪ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ.
Look
ಈ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ ಎಸ್.ಎಂ. ವಾದ ಮಂಡಿಸಿದ್ದರು.