ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಉದಯನಿಧಿ, ಸನಾತನ ಧರ್ಮ ಜಾತಿ ತಾರತಮ್ಯ ಮಾಡುತ್ತದೆ. ಹೀಗಾಗಿ ನಾನು ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದಿದ್ದೆ. ಅದಕ್ಕೆ ಉದಾಹರಣೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ, ಹೊಸದಾಗಿ ನಿರ್ಮಿಸಲಾಗಿರುವ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಇದು ಸನಾತನ ಧರ್ಮದ ಜಾತಿವಾದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಉತ್ತರಿಸಿದರು.
.ಸನಾತನ ಧರ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿರುವ ಸಚಿವ ಉದಯನಿಧಿ ಸ್ಟಾಲಿನ್, ನಾನು ಹಿಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ನಿಮ್ಮ ಹೇಳಿಕೆಗೆ ಕ್ಷಮೆಯಾಚಿಸುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉದಯನಿಧಿ ಸ್ಟಾಲಿನ
ಸಾಮಾಜಿಕ ತಾರತಮ್ಯದ ಪ್ರಸ್ತುತ ಉದಾಹರಣೆಯನ್ನು ನೀಡಬಹುದೇ ಎಂದು ಕೇಳಿದಾಗ, ಉದಯನಿಧಿ ಸ್ಟಾಲಿನ್, ಹೊಸ ಸಂಸತ್ತಿನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಪ್ರಸ್ತುತ ಸನಾತನ ತಾರತಮ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಹೇಳಿದರು. ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ.
ಉತ್ತರ ನೀಡಲು ನಿರಾಕರಿಸಿದರು. ನಾನು ಹಿಂದು ಧರ್ಮದ ವಿರೋಧಿಯಲ್ಲ. ಸನಾತನ ಸಂಸ್ಥೆಗಳು ಜಾತಿ ತಾರತಮ್ಯದಂತಹ ಆಚರಣೆಗಳನ್ನು ಒಪ್ಪಿಕೊಂಡಿವೆ. ಅದನ್ನು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ನಾನು ಒಂದು ಸಮಾರಂಭದಲ್ಲಿ ಮಾತ್ರ ಹೇಳಿದ್ದೇನೆ. ಇನ್ನು ಅದನ್ನು ಎಲ್ಲಿ ಬೇಕಾದರೂ ಹೇಳುವೆ. ನಾನು ಆಡಿದ ಮಾತಿಗೆ ಬದ್ಧನಾಗಿದ್ದೇನೆ. ಹಿಂದು ಧರ್ಮವನ್ನು ಮಾತ್ರವಲ್ಲ, ಎಲ್ಲ ಧರ್ಮಗಳಲ್ಲಿನ ಕೆಡುಕನ್ನು ನಾನು ಟೀಕಿಸಿದ್ದೇನೆ. ಜಾತಿ, ಭೇದಗಳನ್ನು ಖಂಡಿಸಿದ್ದೇನೆ ಅಷ್ಟೇ ಎಂದು ಉದಯನಿಧಿ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.
ಕಾನೂನು ಕ್ರಮ ಎದುರಿಸಲು ಸಿದ್ಧ
ಉದಯನಿಧಿ ಹೇಳಿಕೆಗೆ ವ್ಯಾಪಕ ಟೀಕೆ :ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಯುವಜನ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ, ಕೊರೊನಾ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಇದು ವಿವಾದದ ಕಿಡಿ ಹೊತ್ತಿಸಿದೆ.
ಉದಯನಿಧಿ ಹೇಳಿಕೆಗೆ ದೇಶಾದ್ಯಂತ ಭಾರೀ ಟೀಕೆಗೆ ಗುರಿಯಾಗಿದೆ. ಇಂಡಿಯಾ ಮೈತ್ರಿಕೂಟದ ಕೆಲ ಸದಸ್ಯರು ಇಂತಹ ಹೇಳಿಕೆ ನೀಡಬಾರದು. ಯಾವುದೇ ಧರ್ಮವನ್ನು ಟೀಕಿಸುವುದು ಸಲ್ಲದು ಎಂದು ಹೇಳಿದ್ದಾರೆ.
ತಮ್ಮ ತಾಯಿಯನ್ನು ದೇವಸ್ಥಾನಕ್ಕೆ ಹೋಗದಂತೆ ತಡೆಯುವಂತೆ ಉದಯನಿಧಿ ಸ್ಟಾಲಿನ್ ಅವರಿಗೆ ಸವಾಲು ಹಾಕುತ್ತೇನೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರನನ್ನು ಸನಾತನ ಧರ್ಮ ಕುರಿತು ವಿವಾದಾತ್ಮಕ ಹೇಳಿಕೆಗಾಗಿ ತರಾಟೆಗೆ ತೆಗೆದುಕೊಂಡರು.ಹೇಳಿಕೆಯನ್ನು ಬಾಲಿಶ ಮತ್ತು ಕುಚೇಷ್ಟೆ ಎಂದು ಕರೆದ ಅಣ್ಣಾಮಲೈ, ಸನಾತನ ಧರ್ಮವು ಕಾಲಾತೀತ ಮತ್ತು ಶಾಶ್ವತವಾಗಿದೆ. ಮೊಘಲರು, ಈಸ್ಟ್ ಇಂಡಿಯಾ ಕಂಪನಿ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಸಹ ಅದನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅದನ್ನು ತೊಡೆದುಹಾಕಲು ಅವನು ಯಾರು? ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.
Advertisement