ಕಾರವಾರ: Port: ಕಾರವಾರದ ಅನೇಕ ಬಂದರುಗಳಲ್ಲಿ ಹೂಳೆತ್ತದೆ ಇರುವುದರಿಂದ ಮೀನುಗಾರಿಕೆ ನಡೆಸಲು ಸಮಸ್ಯೆಯಾಗಿದೆ. ಹಿಂದಿನ ಸರ್ಕಾರ 20 ಕೋಟಿ ರೂ ಅನುದಾನ ಮಂಜೂರು ಂಆಡಿದ್ದರೂ ಕೆಲಸ ಆರಂಭ ವಾಗಿಲ್ಲ. ಕಾಂಗ್ರೆಸ್ ಸರ್ಕಾರವೂ ವಾಗ್ದಾನ ಕೊಡುವುದಕ್ಕಷ್ಟೇ ಸೀಮಿತವಾಗಿದೆ. ಕರ್ನಾಟಕ ಕರಾವಳಿಯ ಮೀನು ಉತ್ಪಾದನೆ ಸಾಮರ್ಥ್ಯ 4-5 ಕೋಟಿ ರೂ ಇದ್ದು, ಮೀನುಗಾರರಿಗೆ ಮೂಲಸೌಕರ್ಯದ ಉತ್ತೇಜನ ಸಿಗುತ್ತಿಲ್ಲ.
ವರ್ಷಕ್ಕೆ ಸಾವಿರಾರು ಕೋಟಿ ರೂ.ವ್ಯವಹಾರ ನಡೆಯುವ ರಾಜ್ಯದ ಮೀನುಗಾರಿಕೆ ಬಂದರುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಬಂದರುಗಳು ಹೂಳು ತುಂಬಿ ಹದಗೆಟ್ಟು ಹೋಗಿವೆ.
ಹೂಳು ತುಂಬಿ ಮೀನುಗಾರಿಕೆ ಬೋಟುಗಳು ನಿಲ್ಲಿಸಲಾಗದೆ ಮೀನುಗಾರರು ಪರದಾಡುತ್ತಿದ್ದಾರೆ. ಇಳಿತ ಇರುವಾಗ ಬೋಟುಗಳು ಕೆಸರಿನಲ್ಲಿ ಸಿಲುಕಿ ವಾಲುತ್ತವೆ. ಸಮುದ್ರದ ಅಪಾಯಕಾರಿ ಸಂದರ್ಭದಲ್ಲಿ ಬಂದರಿಗೆ ಬರುವ ಬೋಟುಗಳಿಗೆ ಹೂಳಿನ ಕಾರಣಕ್ಕೆ ನಿಲ್ಲಿಸಲು ಸರಿಯಾದ ಸ್ಥಳ ಕೂಡ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲೆಯ ಮೀನುಗಾರಿಕೆ ಬಂದರುಗಳ ವ್ಯವಸ್ಥೆ ಹಾಳಾಗಿವೆ.
ರಾಜ್ಯದ ಕರಾವಳಿ ಮೂರು ಜಿಲ್ಲೆಗಳ ಮೀನುಗಾರಿಕೆ ಬಂದರುಗಳಲ್ಲಿ ಹಂತ ಹಂತವಾಗಿ ಹೂಳು ತೆಗೆಯಲು ಹಿಂದಿನ ಸರಕಾರವೇ 20 ಕೋಟಿ ರೂ.ಅನುದಾನ ಮಂಜೂರು ಮಾಡಿ ಆದೇಶ ಮಾಡಿತ್ತು. ನೂತನ ಕಾಂಗ್ರೆಸ್ ಸರಕಾರದ ಪೂರಕ ಬಜೆಟ್‌ನಲ್ಲಿಯೂ ಬಂದರು ಹೂಳು ತೆಗೆಯುವ ವಾಗ್ದಾನ ಮಾಡಿತ್ತು. ಈವರೆಗೆ ಯಾವ ಬಂದರಿನ ಹೂಳು ತೆಗೆಯುವ ಕೆಲಸ ಪೂರ್ಣ ಆಗಿಲ್ಲ.
ಇದೆಲ್ಲವೂ ಒಂದೂವರೆ ವರ್ಷ ಹಿಂದೆಯೇ ನಡೆದಿದ್ದರೂ ಇನ್ನೂ ಹೂಳು ತೆಗೆಯಲು ಪ್ರಕ್ರಿಯೆಯೇ ನಡೆದಿಲ್ಲ. ಸ್ವತಃ ಮೀನುಗಾರರಿಗೆ ಸಚಿವರ ತವರೂರು ಭಟ್ಕಳದ ಮೀನುಗಾರಿಕೆ ಬಂದರಿನಲ್ಲಿಯೂ ಈವರೆಗೆ ಪೂರ್ತಿ ಹೂಳು ತೆಗೆಯಲು ಆಗಿಲ್ಲ. ಕಾರವಾರ, ಮುದಗಾ, ಬೇಲೇಕೇರಿ, ತದಡಿ, ಹೊನ್ನಾವರ ಬಂದರುಗಳು ಕೂಡ ಹೂಳು ತುಂಬಿ ಬೋಟುಗಳು ಸರಾಗವಾಗಿ ಸಂಚರಿಸದಷ್ಟು ಸಂದಿಗ್ಧವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಎಂಟು ಪ್ರಮುಖ ಮೀನುಗಾರಿಕೆ ಬಂದರುಗಳಿವೆ. ಬೆಳಂಬಾರ, ಮಂಜಗುಣಿಯಂಥ ಸಣ್ಣ ಬಂದರುಗಳೂ ಇವೆ. ಮಾವಿನಕುರ್ವೆಯಲ್ಲಿಹೊಸ ಬಂದರು ಆಗಿದೆ. ಪ್ರಮುಖ ಎಂಟು ಮೀನುಗಾರಿಕೆ ಬಂದರುಗಳಲ್ಲಿ ಹೂಳು ತೆಗೆಯದೆ ದಶಕಗಳೇ ಆಗಿ ಹೋಗಿವೆ. ಇಂದಲ್ಲ ನಾಳೆ ಹೂಳು ತೆಗೆಯಬಹುದು ಎಂದು ಮೀನುಗಾರರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
ಸುರಕ್ಷಿತ ಬಂದರಲ್ಲೂಅಸುರಕ್ಷತೆ
ಕಾರವಾರ ಮೀನುಗಾರಿಕೆ ಬಂದರು ಪಶ್ಚಿಮ ತೀರದಲ್ಲಿರುವ ಅತ್ಯಂತ ಸುರಕ್ಷಿತ ಬಂದರು. ಈಚೆಗೆ ತೂಫಾನ್ ಆದಾಗ, ಗುಜರಾತ, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ನೂರಾರು ಬೋಟ್‌ಗಳು ಇಲ್ಲಿಆಶ್ರಯ ಪಡೆದುಕೊಂಡಿದ್ದವು. ಇಂಥ ಸುರಕ್ಷಿತ ಬಂದರಿನಲ್ಲಿಯೂ ಹೂಳು ತೆಗೆಯದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸುರಕ್ಷಿತ ಬಂದರಿನಲ್ಲಿಯೂ ಅಸುರಕ್ಷತೆ ಸ್ಥಿತಿ ಆವರಿಸಿದೆ.
ಕಾರವಾರ ಮೀನುಗಾರಿಕೆ ಬಂದರು ಪಶ್ಚಿಮ ತೀರದಲ್ಲಿರುವ ಅತ್ಯಂತ ಸುರಕ್ಷಿತ ಬಂದರು. ಈಚೆಗೆ ತೂಫಾನ್ ಆದಾಗ, ಗುಜರಾತ, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ನೂರಾರು ಬೋಟ್‌ಗಳು ಇಲ್ಲಿಆಶ್ರಯ ಪಡೆದುಕೊಂಡಿದ್ದವು. ಇಂಥ ಸುರಕ್ಷಿತ ಬಂದರಿನಲ್ಲಿಯೂ ಹೂಳು ತೆಗೆಯದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸುರಕ್ಷಿತ ಬಂದರಿನಲ್ಲಿಯೂ ಅಸುರಕ್ಷತೆ ಸ್ಥಿತಿ ಆವರಿಸಿದೆ.
ಜಿಲ್ಲೆಯಲ್ಲಿ ಕಡಲ ಮೀನುಗಾರಿಕೆಯಿಂದಲೇ ವಾರ್ಷಿಕ ಒಂದು ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಮೀನು ಉತ್ಪನ್ನ ಆಗುತ್ತಿದೆ ಎಂದು ಅಧಿಕೃತವಾಗಿ ಲೆಕ್ಕಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ ಕಡಲ ಮೀನು ಉತ್ಪಾದನೆ ಸಾಮರ್ಥ್ಯ 4-5 ಸಾವಿರ ಕೋಟಿ ರೂ.ವರೆಗೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಬಂದರುಗಳು ಇದ್ದರೂ ಉಡುಪಿ, ದಕ್ಷಿಣ ಕನ್ನಡ ಮೀರಿಸಲು ಆಗುತ್ತಿಲ್ಲ. ಜಿಲ್ಲೆಯ ಮೀನುಗಾರಿಗೆ ಉತ್ತೇಜನ ನೀಡಲಾಗುತ್ತದೆ ಎಂಬ ಮಾತು ಭರವಸೆಯಾಗಿಯೇ ಉಳಿದಿದೆ.
ಬಂದರು ಹೂಳು ತೆಗೆಯುತ್ತೇವೆ ಎನ್ನುವ ಮಾತು ಕೇಳಲು ಶುರು ಮಾಡಿ ಹಲವು ವರ್ಷಗಳು ಆಯಿತು. ಇನ್ನೂ ಹೂಳು ತೆಗೆದಿಲ್ಲ. ಈಗ ಮಳೆಗಾಲವೂ ಮುಗಿಯುತ್ತಿದೆ. ಆದರೂ ಹೂಳು ತೆಗೆಯುವ ಪ್ರಕ್ರಿಯೆ ಶುರುವಾಗಿಲ್ಲ. ಹೂಳು ರಾಶಿಯಿಂದ ಬಂದರಿನಲ್ಲಿಬೋಟ್‌ಗಳನ್ನು ನಿಲ್ಲಿಸಲು ಆಗುತ್ತಿಲ್ಲ. ಹಾನಿ ಹೆಚ್ಚಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಸಹಕಾರ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಹೇಳಿದ್ದಾರೆ.
ಭಟ್ಕಳ ಮೀನುಗಾರಿಕೆ ಬಂದರು ಹೂಳು ತೆಗೆಯುವ ಕೆಲಸ ಆರಂಭವಾಗಿದೆ. ಬೈತಖೋಲ್ ಮೀನುಗಾರಿಕೆ ಬಂದರು ಹೂಳು ತೆಗೆಯಲು ಟೆಂಡರ್ ಆಗಿದೆ. ಆದರೆ, ಸಿಆರ್‌ಝೆಡ್ ಅನುಮತಿ ಸಿಕ್ಕಿಲ್ಲ. ಅದಕ್ಕಾಗಿ ಪ್ರಸ್ತಾವ ಹೋಗಿದೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭವಾಗಲಿದೆ. ಸದ್ಯ ಈ ಎರಡು ಬಂದರುಗಳಲ್ಲಿಮಾತ್ರ ಹೂಳು ತೆಗೆಯುವ ಯೋಜನೆ ಆಗಿದೆ ಎಂದು , ಬಂದರು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ ಹೆಗಡೆ, ಹೇಳಿದ್ದಾರೆ.