PGK NEWS (ಪಶ್ಚಿಮಘಟ್ಟ ವಾಯ್ಸ್)ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ; ಮುಂದಿನ ವರ್ಷವೇ 20 ಸಾವಿರ ಶಿಕ್ಷಕರ ನೇಮಕ - ಸಚಿವ ಮಧು ಬಂಗಾರಪ್ಪ!

 


PGK NEWS (ಪಶ್ಚಿಮಘಟ್ಟ ವಾಯ್ಸ್):-ಮುಂಬರುವ ವರ್ಷದಲ್ಲಿ 20 ಸಾವಿರ ನೂತನ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಶೀಘ್ರ ಚರ್ಚಿಸಲಾಗುವುದು,'' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್‌.ಮಧು ಬಂಗಾರಪ್ಪ ಹೇಳಿದ್ದಾರೆ.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನೂತನ ಸರಕಾರಿ ಪದವಿ ಪೂPPP pರ್ವ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ''ಶಿಕ್ಷಣ ಇಲಾಖೆ ಅತ್ಯಂತ ಕಷ್ಟದ ಕೆಲಸವಾಗಿದ್ದು, ಇಲಾಖೆಯಲ್ಲಿಸಾಕಷ್ಟು ತೊಂದರೆ ಇದೆ. ಇದನ್ನು ನಿಭಾಯಿಸಲು ಸಿಎಂ ಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ನನಗೆ ಈ ಇಲಾಖೆ ನೀಡಿದ್ದಾರೆ,'' ಎಂದರು.

3 ವರ್ಷ 3 ಸಾವಿರ ಕೆಪಿಎಸ್‌ ಶಾಲೆ

ರಾಜ್ಯದಲ್ಲಿ 55 ಸಾವಿರ ಶಾಲೆಗಳು, 3 ಸಾವಿರ ಪಿಯು ಕಾಲೇಜು, 2 ಲಕ್ಷ ಶಿಕ್ಷಕರು, 2 ಕೋಟಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 34 ಸಾವಿರ ಕೋಟಿ ಬಜೆಟ್‌ ಹೊಂದಿದೆ. ಇನ್ನೂ 40 ಸಾವಿರ ಶಿಕ್ಷಕರ ಕೊರತೆ ಇದ್ದು, ಸದ್ಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬರುವ ವರ್ಷ 20 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಲಾಗುವುದು. ಮುಂದಿನ 3 ವರ್ಷ 3 ಸಾವಿರ ಕೆಪಿಎಸ್‌ ಶಾಲೆ ಪ್ರಾರಂಭಿಸುತ್ತೇವೆ,'' ಎಂದು ಭರವಸೆ ನೀಡಿದರು.

ಜಿಪಿಟಿ ಶಿಕ್ಷಕರಿಗೆ ನೇಮಕಾತಿ ಆದೇಶ

ಹೈಕೋರ್ಟ್‌ ಪ್ರಕರಣ ಇತ್ಯರ್ಥಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಾದ್ಯಂತ ಜಿಪಿಟಿ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ‘‘ಪ್ರಸ್ತುತ 13 ಸಾವಿರ ಶಿಕ್ಷಕರ ನೇಮಕ ಸಂಬಂಧಿಸಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಕೋರ್ಟ್‌ನಲ್ಲಿ ಕೇಸ್‌ ಇರುವುದರಿಂದ ಅಂಥ ಜಿಲ್ಲೆಯಲ್ಲಿ ನೇಮಕ ಪ್ರಕ್ರಿಯೆ ನಡೆಸಿಲ್ಲ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಶನಿವಾರವೇ ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗಿದೆ’’ ಎಂದರು.

ಶೀಘ್ರ ಸಿಎಂಗೆ ಪ್ರಸ್ತಾವನೆ

ಶಿಕ್ಷಣ ಇಲಾಖೆಯಲ್ಲಿಶಿಕ್ಷಕರ ಕೊರತೆ ಇದ್ದು, ಶೀಘ್ರವಾಗಿ ಮತ್ತೆ 20 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು.

ಸರಿ ಪಡಿಸಿಕೊಳ್ಳಲು ಸೂಚನೆ

ರಾಜ್ಯದಲ್ಲಿ1,600 ಶಾಲೆಗಳು ಕಟ್ಟಡ ಹಾಗೂ ಮೂಲಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಸರಕಾರದ ನಿಯಮಾವಳಿ ಪಾಲಿಸಿಲ್ಲಎಂಬ ದೂರುಗಳು ಬಂದಿವೆ. ಈಗಲೇ ಅವುಗಳ ವಿರುದ್ಧ ಕ್ರಮ ಜರುಗಿಸಿದರೆ, ಪ್ರಸ್ತುತ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಅವರಿಗೆ ಇನ್ನೂ ಒಂದು ಬಾರಿ ಕಾಲಾವಕಾಶ ನೀಡಿ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗುವುದು. ಇಲ್ಲವಾದಲ್ಲಿಮುಂದಿನ ವರ್ಷದಿಂದ ಅಂಥ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ, ಅನುಮತಿ ನೀಡುವುದಿಲ್ಲ’’ ಎಂದರು.


www.westernghatsvoice.com

GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING





ವರದಿ ನವೀನ್ ಭದ್ರಾವತಿ

PGK

Post a Comment

Previous Post Next Post