ಚಿಕ್ಕಮಗಳೂರು: ಅಮೆರಿಕ, ಆಸ್ಪ್ರೇಲಿಯಾ ವಾಸಿಗಳಿಗೆ ಅಕ್ರಮವಾಗಿ ಮಂಜೂರಾಗಿದ್ದ ಸರಕಾರಿ ಭೂಮಿಯ ಖಾತೆ ರದ್ದುಪಡಿಸಿ 80 ಎಕರೆ ಕಾಫಿ ತೋಟವನ್ನು ಸರಕಾರದ ವಶಕ್ಕೆ ಪಡೆಯುವ ಮೂಲಕ ಜಿಲ್ಲಾಡಳಿತ ಭೂ ಅಕ್ರಮದ ಮೊದಲ ಛಾಟಿ ಏಟು ನೀಡಿದೆ.
ದಶಕಗಳಿಂದ ಅಮೆರಿಕ, ಆಸ್ಪ್ರೇಲಿಯ ಸೇರಿದಂತೆ ದೇಶದ ಮುಂಬಯಿ, ಬೆಂಗಳೂರಿನಲ್ಲಿ ವಾಸವಿರುವ ಒಂದೇ ಕುಟುಂಬದ 7 ಜನರಿಗೆ 32 ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಮೂಡಿಗೆರೆ, ಕಡೂರು ತಾಲೂಕಿನಲ್ಲಿ ಸುಮಾರು 6 ಸಾವಿರ ಎಕರೆಗೂ ಹೆಚ್ಚು ಸರಕಾರಿ ಭೂಮಿ ಅಕ್ರಮವಾಗಿ ಖಾತೆ ಮಾಡಿದ ಕುರಿತು 15 ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಿದೆ. ಈ ಮೂಲಕ ಸರ್ಕಾರ ಅಷ್ಟೂ ಭೂಮಿ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ.
ಮೂಡಿಗೆರೆ, ಕಡೂರು ತಾಲೂಕಿನಲ್ಲಿ ಸುಮಾರು 6 ಸಾವಿರ ಎಕರೆಗೂ ಹೆಚ್ಚು ಸರಕಾರಿ ಭೂಮಿ ಅಕ್ರಮವಾಗಿ ಖಾತೆ ಮಾಡಿದ ಕುರಿತು 15 ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಿದೆ. ಈ ಮೂಲಕ ಸರ್ಕಾರ ಅಷ್ಟೂ ಭೂಮಿ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ.
ಇದರ ಬೆನ್ನಲ್ಲೇ ಮತ್ತಷ್ಟು ಭೂ ಅಕ್ರಮ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ
ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್, ಹಾದಿಓಣಿ ಸರ್ವೆ ನಂಬರ್‌ನಲ್ಲಿ ತಮ್ಮ ಕಾಫಿ ತೋಟದ ಪಕ್ಕದ ಸರಕಾರಿ ಜಾಗವನ್ನು ವಿದೇಶದಲ್ಲಿರುವ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದ ಪ್ರಕರಣಲ್ಲಿ7 ಜನರ ಖಾತೆ ರದ್ದುಪಡಿಸಿದ್ದಾರೆ. ಅಲ್ಲದೆ, ಭೂಮಿಯನ್ನು ಶುಕ್ರವಾರ ಸರಕಾರದ ವಶಕ್ಕೆ ಪಡೆಯಲಾಗಿದೆ.
ಇಬ್ಬರು ತಹಸೀಲ್ದಾರ್, ಕಂದಾ ಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾ ಗಿದೆ. ಇಬ್ಬರನ್ನು ಬಂಧಿಸಿದ್ದು, ಇಬ್ಬರು ತಹಸೀಲ್ದಾರ್‌ಗಳ ಬಂಧನಕ್ಕೆ ಬಲೆ ಬೀಸಿದೆ.
ಅರಣ್ಯ ಭೂಮಿಯೂ ಗುಳುಂ
ವಿದೇಶಿ ವಾಸಿಗಳು ಸೇರಿದಂತೆ ಏಳು ಜನರ ಅಕ್ರಮ ಖಾತೆ ರದ್ದುಪಡಿಸಿದ್ದರಿಂದ 35 ಎಕರೆ ಕಂದಾಯ ಜಾಗ ದೊರೆತಿದೆ. ಅಲ್ಲದೆ ಅದೇ ತೋಟಕ್ಕೆ ಹೊಂದಿಕೊಂ ಡಂತಿರುವ 45 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿಯನ್ನೂ ಇಲಾಖೆ ಪತ್ತೆ ಮಾಡಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ 80 ಎಕರೆ ಜಾಗವನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.80 ಎಕರೆಯಲ್ಲೂ ಕಾಫಿ ತೋಟ ಇದ್ದು, ಅದನ್ನು ಹಾಳು ಮಾಡದೆ ತೋಟದ ಸಮೇತ ವಶಕ್ಕೆ ಪಡೆಯಲಾಗಿದೆ. ಸಾರ ಗೋಡು ಮತ್ತು ಮಧುಗುಂಡಿ ನಿರಾಶ್ರಿರಿಗೆ ಇಲ್ಲಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಆಲೋಚನೆ ಮಾಡಿದ್ದಾರೆ.
ಬೇನಾಮಿ ಹೆಸರಲ್ಲಿ ಆಸ್ತಿ?
ಅಕ್ರಮದಲ್ಲಿ ಭಾಗಿಯಾಗಿರುವ ಕೆಲ ನೌಕರರ ಅಕ್ರಮ ಆಸ್ತಿ ಸಂಪಾದನೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯ ವ್ಯಕ್ತಿಗಳ ಹೆಸರಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಸಂಪಾದನೆ ಮಾಡಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆಯೂ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING