(ಪಶ್ಚಿಮಘಟ್ಟ ವಾಯ್ಸ್ ಕಾರವಾರ: ಕುಮಟಾ- ಶಿರಸಿ ಮಧ್ಯೆ ರಸ್ತೆ ಸಂಚಾರ ಬಂದ್ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಹಿಂಪಡೆದಿದ್ದಾರೆ
.ಮಾಧ್ಯಮಗಳ ಜೊತೆಗೆ ಮಂಗಳವಾರ ಸಂಜೆ ಈ ಕುರಿತು ಜಿಲ್ಲಾಧಿಕಾರಿ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನ ಸಂಚಾರಕ್ಕೆ ಆಗುವ ಅಡಚಣೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಎಂದಿನಂತೆ ಮುಂದುವರಿಯಲಿದೆ .
ತೀರಾ ಅಗತ್ಯ ಮತ್ತು ಅನಿವಾರ್ಯ ಕಾಮಗಾರಿ ಅನಿಸಿದಾಗ , ಆ ಕಾಲದ ಅವಶ್ಯಕತೆ ನೋಡಿ,ಕಾಮಗಾರಿಯ ಅಗತ್ಯದಷ್ಟೇ ದಿನ ಮಾತ್ರ ಬಂದ್ ಮಾಡುವ ವಿಚಾರ ಮುಂದಿನ ದಿನಗಳಲ್ಲಿ ಪರಿಶೀಲಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಯೋಚಿಸಿದ್ದಾರೆ.
ಕುಮಟಾ ಸಿದ್ದಾಪುರ ರಸ್ತೆ ಸುಧಾರಣೆ ಕಾಮಗಾರಿ ಮಾಡಿಕೊಂಡ ನಂತರ, ಕುಮಟಾ ಶಿರಸಿ ಮೇಲ್ಸೇತುವೆ ಕಾಮಗಾರಿ ವೇಳೆ ಅಗತ್ಯ ಇದ್ದಷ್ಟು ದಿನ ಮುಚ್ಚುವ ವಿಚಾರ ಮುಂದೆ ನೋಡೋಣ .ಸದ್ಯಕ್ಕೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಒಂದು ಬದಿ ಕಾಮಗಾರಿ, ಒಂದು ಬದಿ ವಾಹನ ಸಂಚಾರ ನಡೆಯಲಿದೆ.
ಶಿರಸಿ, ಕುಮಟಾ ಸಹಾಯಕ ಕಮಿಷನರ್ ವರದಿ ಪಡೆದು ಸಾರ್ವಜನಿಕರ ಹಿತ ಗಮನಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.