PGK NEWS:-ಹೈದರಾಬಾದ್: ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಎಂದಿಗೂ ಸಂಭವಿಸಬಾರದಿತ್ತು. ಇದೊಂದು ಐತಿಹಾಸಿಕ ತಪ್ಪು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಹೈದರಾಬಾದ್ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಐತಿಹಾಸಿಕವಾಗಿ ಭಾರತ ಒಂದು ದೇಶವಾಗಿತ್ತು. ದುರಾದೃಷ್ಠವಶಾತ್ ಇದು ವಿಭಜನೆಯಾಯಿತು. ಅದು ಸಂಭವಿಸಬಾರದಿತ್ತು ಎಂದಿದ್ದಾರೆಐತಿಹಾಸಿಕವಾಗಿ ಭಾರತ ಒಂದು ದೇಶವಾಗಿತ್ತು ಮತ್ತು ದುರದೃಷ್ಟವಶಾತ್ ಇದು ವಿಭಜನೆಯಾಯಿತು. ಈ ವಿಚಾರವಾಗಿ ನಾನು ಚರ್ಚೆಯಲ್ಲಿ ಭಾಗವಹಿಸಲು ಸಿದ್ದನಿದ್ದೇನೆ. ದೇಶ ವಿಭಜನೆಗೆ ಯಾರು ಕಾರಣ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಆ ಸಮಯದಲ್ಲಿ ಮಾಡಿದ ತಪ್ಪನ್ನು ನಾನು ಒಂದು ಸಾಲಿನಲ್ಲಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ವಿಸ್ತೃತ ಚರ್ಚೆಯ ಅಗತ್ಯವಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಅಜಾದ್ ಅವರು ಬರೆದಿರುವ ‘ಇಂಡಿಯಾ ವಿನ್ಸ್ ಫ್ರೀಡಂ’ ಪುಸ್ತಕವನ್ನು ಒಮ್ಮ ಓದಿ. ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ದೇಶ ವಿಭಜನೆಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಅವರು ಕಾಂಗ್ರೆಸ್ ನಾಯಕರಿಗೆ ಹೇಗೆ ಮನವಿ ಮಾಡಿದರೆಂಬುದರ ಕುರಿತು ವಿವರಿಸಲಾಗಿದೆ.
ದೇಶದ ವಿಭಜನೆ ಯಾವುದೇ ಕಾರಣಕ್ಕೂ ಆಗಬಾರದಿತ್ತು. ಆಗ ಅಲ್ಲಿದ್ದ ಎಲ್ಲಾ ನಾಯಕರು ದೇಶ ವಿಭಜನೆಗೆ ಪ್ರಮುಖ ಕಾರಣರಾಗಿದ್ದರು. ಆ ಸಮಯದಲ್ಲಿದ್ದ ಇಸ್ಲಾಂ ಧರ್ಮಗುರುಗಳು ಹಾಗೂ ವಿದ್ವಾಂಸರು ಎರಡು ದೇಶಗಳ ವಿಭಜನೆಯನ್ನು ವಿರೋಧಿಸಿದ್ದರು. ಆದರೂ ಕಾಂಗ್ರೆಸ್ನವರು ದೇಶವನ್ನು ವಿಭಜಿಸುವ ಮೂಲಕ ಐತಿಹಾಸಿಕ ತಪ್ಪು ಮಾಡಿದ್ದಾರೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಹೈದರಾಬಾದ್ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.