PGK NEWS(ಪಶ್ಚಿಮಘಟ್ಟ ವಾಯ್ಸ್) ಶಿವಮೊಗ್ಗ ಗಲಭೆ: ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದಿದ್ಯಾಕೆ? ಕಾರಣ ಬಿಚ್ಚಿಟ್ಟ ಸಂಸದ ರಾಘವೇಂದ್ರ!

ಶಿವಮೊಗ್ಗPGK NEWS(ಪಶ್ಚಿಮಘಟ್ಟ ವಾಯ್ಸ್)

 ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದು ಬೇಸರವಿದೆ. ಮುಸ್ಲಿಂ ಓಲೈಕೆ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಇದು ವಿಶೇಷ ಏನಿಲ್ಲ ಅಧಿಕಾರಿಗಳು ಕೂಡ ಅದನ್ನೇ ಮಾಡುತ್ತಿದ್ದಾರೆ. ಒಂದು‌ ಧರ್ಮದ ಓಲೈಕೆಯ ಕೆಲಸ ನಡೆಯುತ್ತಿದೆ ಎಂದು  ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ನಗರದಲ್ಲಿ Tv9 ಜೊತೆ ಮಾತನಾಡಿದ ಅವರು, ಹಿಂದೂ ಮಹಾಸಭಾ ಶಾಂತಿಯುತವಾಗಿ ಗಣೇಶ ವಿಸರ್ಜನೆ ಮಾಡಲಾಗಿದೆ. ಇನ್ನೊಂದು ಧರ್ಮದ ಭಾವನೆಗೆ ಧಕ್ಕೆ ಮತ್ತು ಪ್ರಚೋದನೆ ಮಾಡುವ ರೀತಿ ಫ್ಲೆಕ್ಸ್, ಬ್ಯಾನರ್ ಖಡ್ಗವನ್ನು ಬಳಸಿದ್ದರು. ತಲ್ವಾರ್ ಹಾಗೂ ಆಯುಧಗಳನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂಗಳ ರಕ್ಷಣೆ ಮಾಡಲು ಬಂದವರ ಮೇಲೆ ಕೇಸ್ ದಾಖಲಿಸಿದ್ದಾರೆ. ಸರ್ಕಾರ ಒಂದು ಧರ್ಮದ ಓಲೈಕೆ ಮಾಡುವ ಕೆಲಸವನ್ನು ಮಾಡುತ್ತಿದೆ. ಹೊರ ರಾಜ್ಯದಿಂದ ವಾಹನಗಳು ಬಂದಿವೆ, ಈ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಯಲ್ಲಿ ಗಾಯಗೊಂಡಿರುವವರನ್ನು ಮೆಗ್ಗಾನ್​ ಆಸ್ಪತ್ರೆಯಲ್ಲಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಗಲಾಟೆ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.

ಸಂಸದ ರಾಘವೇಂದ್ರಗೆ ದೂರು ನೀಡಿದ ಗಾಯಾಳುಗಳು

ಸುಮ್ನೆ ನಿಂತಿಕೊಂಡವರ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಹಸಿರು ಮಾಸ್ಕ್ ಕಟ್ಟಿಕೊಂಡು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಹೊಡತ ತಿಂದವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ ಎಂದು ಪೊಲೀಸರ ವಿರುದ್ದವೇ ಗಾಯಾಳುಗಳು ಆರೋಪ ಮಾಡಿದ್ದಾರೆ. ಅತಿರೇಖವಾಗಿ ಮಾಡಿದ್ದಾರೆ, ಮಿನಿ ಪಾಕಿಸ್ತಾನವನ್ನಾಗಿ ಮಾಡಿದ್ದಾರೆ. ಧರ್ಮ ಆಚರಣೆ ಮಾಡಲಿ ನಮ್ಮ ವಿರೋಧ ಇಲ್ಲ. ಇವರು ಪರ್ಸನಲ್‌ ಆಗಿ ತೆಗದುಕೊಂಡು ಈ ರೀತಿ ಮಾಡಿದ್ದಾರೆ ಎಂದು ಸಂಸದ ರಾಘವೇಂದ್ರಗೆ ಗಾಯಾಳುಗಳು ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ-ಡಾ.ಅಶ್ವತ್ಥ್

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ತುಷ್ಟಿಕರಣಕ್ಕಾಗಿ ಸರ್ಕಾರ ಸೈಲೆಂಟ್ ಆಗಿದೆ. ಸರ್ಕಾರ ಎಸ್​ಪಿ ಕೈಕಟ್ಟಿ ಹಾಕಿದರೆ ಹೇಗೆ ಕೆಲಸ ಮಾಡಲು ಸಾಧ್ಯ? ದೇಶ ನಿರ್ನಾಮ ಮಾಡಲು ಬಂದವರನ್ನು ಇವರು ಮೆರೆಸುತ್ತಾರೆ. ಸಿದ್ದರಾಮಯ್ಯ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಮನಸ್ಥಿತಿಗೆ ತಕ್ಕಂತೆ ಶಿವಮೊಗ್ಗದಲ್ಲಿ ಕೆಲಸ ಮಾಡ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಜವಾಬ್ದಾರಿಯಿಂದ ಮಾತಾಡಲಿ. ಶಿವಮೊಗ್ಗ ಗಲಭೆ ಸಣ್ಣಪುಟ್ಟ ಅಂದ್ರೆ ದೊಡ್ಡ ಪ್ರಕರಣ ಯಾವುದು? ಯಾರ ಪ್ರಾಣ ಹೋಗಬೇಕಿತ್ತು ಎಂದು ಬಯಸುತ್ತಿದ್ದಾರಾ? ಯಾವುದೇ ಕ್ರಮ ತೆಗೆದುಕೊಳ್ಳದೆ ಈ ರೀತಿ ಹೇಳಿಕೆ ಕೊಡ್ತೀರಾ ಎಂದು ವಾಗ್ದಾಳಿ ಮಾಡಿದ್ದಾರೆ.







PGK

Post a Comment

Previous Post Next Post