PGK NEWS (ಪಶ್ಚಿಮಘಟ್ಟ ವಾಯ್ಸ್ )
ಹಾವೇರಿ:-
ಬರದ ಛಾಯೆಯಿಂದ ಕಂಗೆಟ್ಟಿರುವ ಹಾವೇರಿ ಜಿಲ್ಲೆಯ ಜನರಿಗೆ, ಇದೀಗ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಟ ಹೆಚ್ಚಾಗಿದೆ. ಜಿಲ್ಲಾಡಳಿತ ಹತ್ತಾರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹಿತ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ. ಈ ಹಿನ್ನಲೆ ಜನರು ನಮ್ಮ ಜೊತೆ ಕೈ ಜೊಡಿಸದಿದ್ರೆ, ರೋಗ ತಡೆಯುವುದು ಕಷ್ಟ ಎನ್ನುತ್ತಿದ್ದಾರೆ ಅಧಿಕಾರಿಗಳು.
ಹಾವೇರಿ, ಜಿಲ್ಲೆಯಲ್ಲಿ ಮಾರಣಾಂತಿಕ ಡೆಂಗ್ಯೂ(Dengue Fever) ಹಾಗೂ ಮಲೇರಿಯಾ ರೋಗವನ್ನು ತಡೆಯಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈ ಬಾರಿ ಜಿಲ್ಲಾಡಳಿತ ಕಾರ್ಯಕ್ರಮ ನೋಡಿದರೆ, ಕಳೆದ ಬಾರಿಗಿಂತ ಬಹಳಷ್ಟು ಕಮ್ಮಿ ಪ್ರಕರಣಗಳು ದಾಖಲಾಗಬೇಕಿತ್ತು. ಆದ್ರೆ, ಈ ಬಾರಿಯ ಹವಾಮಾನ ವೈಪರಿತ್ಯದಿಂದ ಕಳೆದ ಬಾರಿಗಿಂತ ಜಾಸ್ತಿ ಪ್ರಕರಣಗಳು ದಾಖಲಾಗಿವೆ. ಹೌದು, ಈಗಾಗಲೇ ಬರೊಬ್ಬರಿ 90 ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಹಿನ್ನಲೆ ಎಚ್ಚೆತ್ತ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿಯವರು ಜಾಥಾ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರೆ, ಇನ್ನೊಂದೆಡೆ ಆಸ್ಪತ್ರೆ ರೋಗಿಗಳಿಂದ ಫುಲ್ ಆಗಿದೆ.
ಈ ಕುರಿತು ಮಾತನಾಡಿದ ವೈದ್ಯಾಧಿಕಾರಿ ಡಾ.ಸರೀತಾ ಅವರು ‘ಈಗಾಗಲೇ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಜನರು ಸಾಥ್ ಕೊಡದೆ ಇದ್ದರೆ ನಾವು ಯಾವ ಕಾರ್ಯಕ್ರಮದಿಂದಲೂ ಯಶಸ್ಸು ಕಾಣುವುದು ಅಸಾಧ್ಯ ಎಂದು ಹೇಳಿದರು. ಈ ಬಾರಿ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಕಮ್ಮಿ ಇದೆ. ಮನೆಯಲ್ಲಿ ಹೆಚ್ಚು ದಿನಗಳ ಕಾಲ ನೀರನ್ನು ಸ್ಟಾಕ್ ಮಾಡಿ ಇಡಲಾಗುತ್ತಿದೆ. ಹೀಗಾಗಿ ಡೆಂಗ್ಯೂ ಸೊಳ್ಳೆಗಳ ಉತ್ಪತ್ತಿ ಜಾಸ್ತಿ ಆಗುತ್ತಿದೆ. ಆದ್ರೆ, ಹವಾಮಾನ ವೈಪರಿತ್ಯ ಇದೆ ರೀತಿ ಮುಂದುವರೆದ್ರೆ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗಬಹುದು. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಈ ವರ್ಷ ಉತ್ತಮ ಮಳೆ ಆಗದೆ ಕೃಷಿ ಹಾಗೂ ವಿದ್ಯುತ್ನಿಂದ ಸಮಸ್ಯೆ ಅನುಭವಿಸುತ್ತಿರುವ ಜನ ಸಾಮಾನ್ಯರು, ಇನ್ನೊಂದು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಯೂ ಉಂಟಾಗುತ್ತಿದೆ. ಬರಗಾಲದಿಂದ ಬೆಳೆದ ಬೆಳೆ ರೈತನ ಕೈಗೆ ಸಿಗದೆ ಹೋಗಿದೆ. ಇದೀಗ ಸಾಂಕ್ರಾಮಿಕ ರೋಗದ ಕಾಟದಿಂದ ಸಾರ್ವಜನಿಕರು ಕಷ್ಟಪಡುವಂತಾಗಿದೆ.
www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING