PGK NEWS(ಪಶ್ಚಿಮಘಟ್ಟ ವಾಯ್ಸ್) ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ.

 


PGK NEWS(ಪಶ್ಚಿಮಘಟ್ಟ ವಾಯ್ಸ್)  ಉಡುಪಿ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಘಟನೆ ಕುರಿತು ಅಲ್ಲಿನ ಮಹಿಳೆಯರು ಮಾತನಾಡಿದ್ದನ್ನು ನೋಡಿ ಆತಂಕವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಹೇಳಿದ್ದಾರೆ

      .ಶಿವಮೊಗ್ಗದಲ್ಲಿ ಈದ್ ಮಿಲಾದ್ (Shivamogga EidMilad) ಮೆರವಣಿಗೆ ಘರ್ಷಣೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ. ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯಾ ಎಂದು ಪ್ರಶ್ನಿಸಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ?. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ತಲ್ವಾರ್ ಪ್ರದರ್ಶಿಸಿ, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಗೃಹ ಸಚಿವರು ಮರದ ತಲ್ವಾರ್‍ಗೆ ಬಣ್ಣ ಬಳಿಯಲಾಗಿದೆ ಅಂತಾರೆ. ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಮುಸಲ್ಮಾನರ ಓಲೈಕೆಗಾಗಿ ಪೊಲೀಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಭೇಟಿ ಕೊಡಲಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದರು.






PGK

Post a Comment

Previous Post Next Post