ಪುತ್ರನ ಹೆಸರಿನ ಟ್ರಸ್ಟ್​ಗೆ ನಿವೇಶನ ಮಂಜೂರು ಮಾಡುವಂತೆ ಗದಗ ಜಿಲ್ಲಾಧಿಕಾರಿಗೆ ಸಿದ್ದರಾಮಯ್ಯ ಸೂಚನೆ!



(ಪಶ್ಚಿಮ ಘಟ್ಟ ವಾಯ್ಸ್)
 
CM
Siddaramaiah Janata Darshan: ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸೋಮವಾರ ಜನತಾ ದರ್ನಶ ನಡೆಸಿದ ಸಿಎಂ ಸಿದ್ದರಾಮಯ್ಯ, ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಹೆಸರಿನ ಟ್ರಸ್ಟ್​ಗೆ ನಿವೇಶನ ಮಂಜೂರು ಮಾಡುವಂತೆ ಗದಗ ಜಿಲ್ಲಾಧಿಕಾರಿಗೆ ತಾಕೀತು ಮಾಡಿದ್ದಾರೆ


ಬೆಂಗಳೂರು, ನವೆಂಬರ್ : ಮುಖ್ಯಮಂತ್ರಿ  (Siddaramaiah) ಅವರು ಸೋಮವಾರ ಬೆಳಿಗ್ಗೆಯಿಂದ ಜನತಾ ದರ್ಶನ (Janata Darshan) ನಡೆಸುತ್ತಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದಾರೆ. ಇದೇ ವೇಳೆ, ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಹೆಸರಿನ ಟ್ರಸ್ಟ್​ಗೆ ನಿವೇಶನ ಮಂಜೂರು ಮಾಡಿಸಿದ್ದಾರೆ. ನಿವೇಶನ ವಿಚಾರವಾಗಿ ಟ್ರಸ್ಟ್​​ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಸಿಎಂಗೆ ಅಹವಾಲು ಸಲ್ಲಿಸಿದ್ದರು.

ಗದಗ ನಗರದಲ್ಲಿ ರಾಕೇಶ್​ ಸಿದ್ದರಾಮಯ್ಯ ಹೆಸರಿನಲ್ಲಿ ಟ್ರಸ್ಟ್​ ಟ್ರಸ್ಟ್​​​ಗೆ 22 ಗುಂಟೆ ಜಮೀನು ಮಂಜೂರಾತಿಗೆ ಕೋರಿ ಈ ಹಿಂದೆ ಡಿಸಿಗೆ ಪತ್ರ ಬರೆಯಲಾಗಿತ್ತು. ಆದರೆ, ಈ ಭೂಮಿಯನ್ನು ಕಿತ್ತೂರು ಚನ್ನಮ್ಮ ಸಮುದಾಯ ಭವನಕ್ಕೆ ನೀಡಬೇಕೆಂದು ಸಚಿವ ಹೆಚ್​​.ಕೆ.ಪಾಟೀಲ್​​ ಗದಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಮಕೃಷ್ಣ ರೊಳ್ಳಿ ದೂರು ಸಲ್ಲಿಕೆ ಮಾಡಿದ್ದಾರೆ.

ದೂರು ಸಲ್ಲಿಕೆಯಾದ ಕೂಡಲೇ ಗದಗ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದ ಸಿಎಂ, ಭೂಮಿಯನ್ನು ರಾಕೇಶ್​ ಟ್ರಸ್ಟ್​ಗೆ ನೀಡುವಂತೆ ಸಿಎಂ ತಾಕೀತು ಮಾಡಿದ್ದಾರೆ.

ದೇಗುಲದಲ್ಲಿ ಪೂಜೆ ಮಾಡಲು ಕುರುಬರಿಗೆ ಅವಕಾಶ ಕೊಡಿ: ಸಿದ್ದರಾಮಯ್ಯಗೆ ಮನವಿ

ದೇಗುಲದಲ್ಲಿ ಕುರುಬರಿಗೆ ಪೂಜೆ ಮಾಡಲು ಅವಕಾಶ ಕೊಡಿಸಲು ಜನತಾ ದರ್ಶನದ ವೇಳೆ ಮನವಿ ಸಲ್ಲಿಸಲಾಯಿತು. ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿರುವ ಮಾಳಿಂಗರಾಯ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಮಹಾದೇವಪ್ಪ ಅವರು ಸಿಎಂಗೆ ಮನವಿ ಸಲ್ಲಿಸಿದರು.

ದೇಗುಲದಲ್ಲಿ ತಲೆ ತಲಾಂತರದಿಂದ ಕುರುಬ ಸಮುದಾಯದವರು ಪೂಜೆ ಮಾಡುತ್ತಿದ್ದರು. ಇತ್ತೀಚೆಗೆ ಪೂಜಾರಿಗಳ ಮೇಲೆ ಅನ್ಯ ಸಮುದಾಯದವರು ಹಲ್ಲೆ ನಡೆಸಿದ್ದಾರೆ. ಮೊದಲಿನಂತೆ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಸಲ್ಲಿಸಿದರು.

ಮನವಿ ಸಂಬಂಧ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.



www.westernghatsvoice.com

GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)













PGK

Post a Comment

Previous Post Next Post