PGK NEWS(ಪಶ್ಚಿಮ ಘಟ್ಟ ವಾಯ್ಸ್)
ಶಿರಸಿ: ಪಶ್ವಿಮ ಘಟ್ಟದ ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ತೀರಸ್ಕರಿಸಬೇಕೆಂದು ಆಗ್ರಹಿಸಿ ಶಿರಸಿಯಲ್ಲಿ ಡಿಸೆಂಬರ್ 2 ರಂದು ಐತಿಹಾಸಿಕ ಕಸ್ತೂರಿ ರಂಗನ್ ವರದಿ ವಿರೋಧ ಜಾಥ ಸಂಘಟಿಸಿ, ವರದಿ ತಿರಸ್ಕರಿಸಲು ಹಕ್ಕೊತ್ತಾಯ ಮಾಡಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಪರಿಸರ ಸೂಕ್ಷ ಪ್ರದೇಶವೆಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಿದ ಹಳ್ಳಿಗಳಲ್ಲಿ ಜಿಲ್ಲಾದ್ಯಂತ ಸುಮಾರು 400ಕ್ಕಿಂತ ಮಿಕ್ಕಿ ಹಳ್ಳಿಗಳಲ್ಲಿ ಜಾಗೃತ ಕಾರ್ಯಕ್ರಮ ಸಂಘಟಿಸುವ ಮೂಲಕ, ವರದಿ ಅನುಷ್ಠಾನದಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮದ ಕುರಿತು, ಜಾಗೃತ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಲಾಗಿದೆ ಎಂದರು.
ಅಂತಿಮ ವರದಿ ಜ್ಯಾರಿಗೆ ಬಂದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಟೌನ್‌ಶಿಫ್, ಆಧುನಿಕ ಪ್ರವಾಸೋಧ್ಯಮಕ್ಕೆ ಮಾರಕ, ವಿದ್ಯುತ್ ಸಂಪರ್ಕ, ಬೊರವೆಲ್, ಮರಳುಗಾರಿಕೆ, ಥರ್ಮಲ್ ಪವರ್ ಪ್ಲಾಂಟ್, ರೆಡ್ ಕ್ಯಾಟಗರಿ ಕೈಗಾರಿಕೆ. ಗಣಿಗಾರಿಕೆ, ವಾಣಿಜ್ಯಕರಣ, ಹೊಸ ಜಲವಿದ್ಯುತ್ ಯೋಜನೆ ನಿಯಂತ್ರಣ, ಕೃಷಿ ಚಟುವಟಿಕೆಗೆ ರಾಸಾಯನಿಕ ಸಿಂಪಡನೆ ನಿರ್ಭಂದ ಹಾಗೂ ರೆಸಾರ್ಟ, ಏರ್‌ಪೋರ್ಟಗಳ ನಿರ್ಮಾಣ ನಿಯಂತ್ರಣ ಮುಂತಾದ ಸೌಲಭ್ಯ ಮತ್ತುಸೌಕರ್ಯದಿಂದ ವಂಚಿತವಾಗುತ್ತಾರೆ ಎಂದು ತಿಳಿಸಿದರು.
604 ಹಳ್ಳಿಗಳು ಸೂಕ್ಷ್ಮ ಪರಿಸರ ಪ್ರದೇಶ
ಜಿಲ್ಲೆಯ 138 ಗ್ರಾಮ ಪಂಚಾಯಿತಿ, 604 ಹಳ್ಳಿಗಳನ್ನು ಅತೀ ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಿರುವುದರಿಂದ, ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದ ಜನಸಾಮಾನ್ಯರಿಗೆ ಉಂಟಾಗಲಿದೆ ಎಂದರು.
ಕಸ್ತೂರಿ ರಂಗನ ವರದಿಯಂತೆ ಜಿಲ್ಲೆಯಲ್ಲಿ ಗುರುತಿಸಿದ ಸೂಕ್ಷ್ಮ ಪ್ರದೇಶದ ವಿವರ
ಕ್ರ.ಸಂ.-ತಾಲೂಕು – ಹಳ್ಳಿ ಸಂಖ್ಯೆ
1 ಅಂಕೋಲಾ 43
2 ಭಟ್ಕಳ 28
3 ಹೊನ್ನಾವರ 44
4 ಜೋಯಿಡಾ 96
5 ಕಾರವಾರ 36
6 ಕುಮಟ 42
7 ಸಿದ್ಥಾಪುರ 103
8 ಶಿರಸಿ 125
9 ಯಲ್ಲಾಪುರ 87
ಒಟ್ಟು 604
ಅರಣ್ಯವಾಸಿಗಳು ಅತಂತ್ರ
ವರದಿ ಜ್ಯಾರಿಯಿಂದ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಪ್ರದೇಶದಲ್ಲಿ ಅವಲಂಭಿತವಾಗಿರುವ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿ, ಅತಂತ್ರರಾಗುವರೆಂಬ ವಾತಾವರಣ ಸೃಷ್ಟಿಯಾಗಿದೆ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)