PGK NEWS(.ಪಶ್ಚಿಮ ಘಟ್ಟ ವಾಯ್ಸ್) Shivamogga: ಲಂಚ ಸ್ವೀಕರಿಸುವಾಗ ರೆಡ್​​ಹ್ಯಾಂಡ್​​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ


 .ಪಶ್ಚಿಮ ಘಟ್ಟ ವಾಯ್ಸ್)ಶಿವಮೊಗ್ಗ: ಲಂಚ ಪಡೆಯುವಾಗ ಪಿಡಿಓ ರೆಡ್ ಹ್ಯಾಂಡ್ ಆಗಿ ಪಂಚಾಯತ್ ಡೆವಲಪ್ಮೆಂಟ್‌ ಆಫೀಸರ್ (Panchayat Development Officer), ಲೋಕಾಯುಕ್ತ (Lokayukta) ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ (Gram Panchayat) ನಡೆದಿದೆ. ಬಗನಕಟ್ಟೆ ಗ್ರಾಪಂ ಪಿಡಿಓ ಮಂಜುನಾಥ್ ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ವ್ಯಕ್ತಿಯಿಂದ ಮನೆ ನಿರ್ಮಾಣಕ್ಕಾಗಿ (House construction) 5 ಲಕ್ಷ ಮಂಜೂರಾಗಿತ್ತು, ಈ ವೇಳೆ ಮನೆ ನಿರ್ಮಾಣ ಮಾಡಲು ಹಣ ಮಂಜೂರು ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ (Bribe) ಪಿಡಿಒ ಮಂಜುನಾಥ್ ಬೇಡಿಕೆ ಇಟ್ಟಿದ್ದರಂತೆ.

ಮಂಜುನಾಥ ಮೇಲೆ ದೂರು ಬರುತ್ತಿದ್ದಂತೆ ಇಂದು ಪಿಐ ಪ್ರಕಾಶ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.



www.westernghatsvoice.com

GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)





PGK

Post a Comment

Previous Post Next Post