ಪಶ್ಚಿಮ ಘಟ್ಟ ವಾಯ್ಸ್ ಹಾವೇರಿ: ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿರುವ ದೊಡ್ಡಹುಣಸೆಮರಗಳು ಅತ್ಯಂತ ಪುರಾತನ ಎಂದು ಪ್ರಸಿದ್ಧವಾಗಿದ್ದು ಕಲ್ಮಠದ ಆವರದಲ್ಲಿರುವ ದೊಡ್ಡಹುಣಸೆಮರಗಳಂತೂ ಸುಮಾರು 2000 ವರ್ಷಗಳ ಹಿಂದೆ ನಡೆಲಾಗಿತ್ತು ಎನ್ನಲಾಗಿದೆ. ಈ ಮೂರು ಮರಗಳಲ್ಲಿ ಒಂದು ಮರ ಜುಲೈನಲ್ಲಿ ಸುರಿದ ಭಾರಿ ಮಳೆ ಗಾಳಿ ಮತ್ತು ಫಂಗಸ್‌ನಿಂದ ಧರೆಗುರುಳಿತ್ತು. ಇದೀಗ ಸತತ ಪ್ರಯತ್ನದ ಬಳಿಕ ಮತ್ತೆ ಆ ಮರಕ್ಕೆ ಜೀವ ಕಳೆ ಬಂದಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.
ಮರ ಉರುಳಿ ಬಿದ್ದಾಗ ಕಲ್ಮಠದ ಸ್ವಾಮೀಜಿಗಳು ಸೇರಿದಂತೆ ದೊಡ್ಡಹುಣಸೀಮರದ ಪ್ರಾಮುಖ್ಯತೆ ತಿಳಿದಿದ್ದ ಸವಣೂರು ಜನ ಪರಿಸರ ಪ್ರೇಮಿಗಳಿಗೆ ಈ ಸುದ್ದಿ ಆತಂಕ ತಂದಿತ್ತು. ಎರಡು ಸಾವಿರ ವರ್ಷ ಪುರಾತನ ಮರದ ರಕ್ಷಣೆಗೆ ರಾಜ್ಯದ ವಿವಿಧಡೆಯಿಂದ ಪರಿಸರಪ್ರೇಮಿಗಳು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದರು. ಕಲ್ಮಠದ ಚೆನ್ನಬಸವಶ್ರೀಗಳ ಮುಂದಾಳತ್ವದಲ್ಲಿ ಮರವನ್ನು ನೆಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಪರಿಣತರ ಸಲಹೆ ಪಡೆದು ಮರ ನೆಡಲು ಕಾರ್ಯಾಚರಣೆ ನಡೆಸಲಾಗಿತ್ತು.
ಮರವೊಂದನ್ನು ನೆಡುವುದೆಂದರೆ ಅದು ಶತಮಾನದ ಯೋಜನೆ ಎಂಬುದು ಸುಳ್ಳಲ್ಲ. ಕೆಲವೊಂದು ಮರಗಳು ಶತಶತಮಾನಗಳನ್ನೂ ಮೀರಿ ಬಾಳುತ್ತದೆ ಎಂಬುದಕ್ಕೆ ಹಾವೇರಿ ಜಿಲ್ಲೆಯ ಸವಣೂರಿನ ದೊಡ್ಡ ಹುಣಸೇಮರಗಳೇ ಸಾಕ್ಷಿ. ಅದರಲ್ಲೂ ಇಲ್ಲಿನ ಕಲ್ಮಠದ ಆವರಣದಲ್ಲಿರುವ ಸುಮಾರು 2 ಸಾವಿರ ವರ್ಷಗಳ ಪ್ರಾಚೀನತೆ ಹೊಂದಿರುವ ಮೂರು ಮರಗಳಿವೆ. ಅದರಲ್ಲಿ ಮೂರನೇ ಮರ ಗಾಳಿ ಮಳೆ ಫಂಗಸ್‌ನಿಂದ ಇತ್ತೀಚೆಗೆ ಧರೆಗುರುಳಿದಾಗ ದಿಕ್ಕುದೋಚದಂತಾಗಿತ್ತು. ನಂತರ ಪರಿಸರಪ್ರೇಮಿಗಳು ವಿಜ್ಞಾನಿಗಳ ಸಮ್ಮುಖದಲ್ಲಿ ಮತ್ತೆ ನೆಟ್ಟಿದ್ದು ಕೇವಲ ಮೂರು ತಿಂಗಳಲ್ಲಿ ಮರ ಚಿಗುರಲಾರಂಭಿಸಿದೆ.
- ಹಾವೇರಿ ತಾಲೂಕಿನ ಸವಣೂರಿನ ಕಲ್ಮಠದಲ್ಲಿವೆ 3 ಪ್ರಾಚೀನ ದೊಡ್ಡಹುಣಸೆ ಮರ
- ಇತ್ತೀಚೆಗೆ ಬಿದ್ದ ಮಳೆ ಗಾಳಿಗೆ ಫಂಗಸ್ ನಿಂದಾಗಿ ಉರುಳಿಬಿದ್ದಿದ್ದ ಮೂರನೇ ಮರ
- ಕಲ್ಮಠ ಚೆನ್ನಬಸವಶ್ರೀಗಳ ನೇತೃತ್ವದಲ್ಲಿ ಮತ್ತೆ ಮರ ನೆಟ್ಟಿದ್ದ ಪರಿಸರಪ್ರೇಮಿಗಳು
- ಕೇವಲ 3 ತಿಂಗಳ ಸತತ ಪ್ರಯತ್ನ, ಆರೈಕೆಯಲ್ಲೇ ಚಿಗುರೊಡೆಯಲಾರಂಭಿಸಿರುವ ಮರ
ಹೇಗೆ ನಡೆಯಿತು ಕಾರ್ಯಾಚರಣೆ?
ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್
ತರಿಸಿ ಮರಮರು ನೆಡುವ ಕಾರ್ಯಾಚರಣೆ ನಡೆಸಲಾಗಿತ್ತು. ಮರದ ಬುಡದಲ್ಲಿನ ಫಂಗಸ್ ತಗೆದು ವಿವಿಧ ಕೊಂಬೆಗಳನ್ನು ಕಟ್ ಮಾಡಿ ವಿವಿಧ ಔಷಧಿಗಳ ಲೇಪನ ಮಾಡಿ ಮರವನ್ನು ಮರಳಿ ಜುಲೈ 13 ರಂದು ಮರು ನೆಡಲಾಗಿತ್ತು. ಈ ರೀತಿ ನೆಟ್ಟ ಮರದ ಬುಡಕ್ಕೆ ಕಾಂಪೋಸ್ಟ್ ಗೊಬ್ಬರ ಸೇರಿದಂತೆ ವಿವಿಧ ಔಷಧಿಗಳನ್ನೇ ಹಾಕಲಾಗಿತ್ತು.
ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್
ತರಿಸಿ ಮರಮರು ನೆಡುವ ಕಾರ್ಯಾಚರಣೆ ನಡೆಸಲಾಗಿತ್ತು. ಮರದ ಬುಡದಲ್ಲಿನ ಫಂಗಸ್ ತಗೆದು ವಿವಿಧ ಕೊಂಬೆಗಳನ್ನು ಕಟ್ ಮಾಡಿ ವಿವಿಧ ಔಷಧಿಗಳ ಲೇಪನ ಮಾಡಿ ಮರವನ್ನು ಮರಳಿ ಜುಲೈ 13 ರಂದು ಮರು ನೆಡಲಾಗಿತ್ತು. ಈ ರೀತಿ ನೆಟ್ಟ ಮರದ ಬುಡಕ್ಕೆ ಕಾಂಪೋಸ್ಟ್ ಗೊಬ್ಬರ ಸೇರಿದಂತೆ ವಿವಿಧ ಔಷಧಿಗಳನ್ನೇ ಹಾಕಲಾಗಿತ್ತು.
ಎರಡು ಸಾವಿರ ವರ್ಷ ಪುರಾತನ ಮರ ಈ ಹಿಂದಿನ ವೈಭೋಗ ಹೊಂದಲಿ ಎಂದು ಲಕ್ಷಾಂತರ ಭಕ್ತರು ಪ್ರಾರ್ಥನೆ ಸಲ್ಲಿಸಿದ್ದರು. ವಿಜ್ಞಾನಿಗಳ ಶ್ರಮ ಶ್ರೀಗಳು ಆಶೀರ್ವಾದ ಭಕ್ತರ ಹಾರೈಕೆಯಿಂದ ಮರ ಚಿಗುರಲಾರಂಭಿಸಿದೆ. ಸುಮಾರು 3 ತಿಂಗಳು ಕಾಲ ವಿಜ್ಞಾನಿಗಳು ಹೇಳಿದಂತೆ ಔಷೋಧಪಾಚಾರ ನಡೆಸಿದ ಸ್ವಾಮೀಜಿಳ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಮರ ಮರುನೆಡಲು ಶ್ರಮಿಸಿದ ಶ್ರಮಜೀವಿಗಳಿಗೆಲ್ಲಾ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ. ಮರ ಚಿಗುರುಲಾರಂಭಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು ಉಪನ್ಯಾಸಕರು ಶಿಕ್ಷಕರು ಮಠಕ್ಕೆ ಭೇಟಿ ನೀಡಿ ಮರ ವೀಕ್ಷಣೆ ಮಾಡುತ್ತಿದ್ದಾರೆ.
ಶ್ರಮಕ್ಕೆ ಸಿಕ್ಕ ಪ್ರತಿಫಲ
ಇದು ಮನಸ್ಸಿಗೆ ಸಾಕಷ್ಟು ಸಂತಸ ತಂದಿದೆ. ನಾವು ಪಟ್ಟ ಶ್ರಮಕ್ಕೆ ತಕ್ಕಪ್ರತಿಫಲ ಸಿಕ್ಕಂತಾಗಿದೆ ಎಂದು ಸ್ವಾಮಿಜಿಗಳು ಅಭಿಪ್ರಾಯಪಟ್ಟರು. ಈ ಹಿಂದೆ ಮರ ಯಾವ ರೀತಿ ಇತ್ತು ಆ ರೀತಿಯಾಗುವವರೆಗೆ ಮರದ ಆರೈಕೆಯನ್ನು ನಾವು ಮಾಡುತ್ತೇವೆ. ಮರ ಮೊದಲಿನಂತೆ ಬೆಳೆಯುವ ಮೂಲಕ ಭಕ್ತರ ಆಶಯ ಈಡೇರಲಿ ಎನ್ನುತ್ತಾರೆ ಸ್ವಾಮೀಜಿಗಳು.
ಸಾಕಷ್ಟು ಪ್ರಾಮುಖ್ಯತೆ ಹೊಂದಿದ ಮೂರುಮರಗಳಲ್ಲಿ ಒಂದು ಮರ ಕಳೆದ ಜುಲೈನನಲ್ಲಿ ಧರೆಗುರುಳಿತ್ತು. ಸ್ವಾಮಿಜಿಗಳು ವಿಜ್ಞಾನಿಗಳು ಸೇರಿದಂತೆ ಹಲವು ಅಧಿಕಾರಿಗಳು ಮರ ಮರುನೆಡಲು ನೆರವಿಗೆ ಬಂದಿದ್ದರು. ಅವುಗಳೆಲ್ಲಾದರ ಪರಿಣಾಮ ಮರ ಚಿಗುರುತ್ತಿರುವುದು ಆ ಎಲ್ಲ ಜೀವಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ ಎಂಬ ಅಭಿಪ್ರಾಯವನ್ನು ಪ್ರಾಚಾರ್ಯರು ವ್ಯಕ್ತಪಡಿಸಿದ್ದಾರೆ.
www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)