PGK NEWS( ಪಶ್ಚಿಮ ಘಟ್ಟ ವಾಯ್ಸ್ :-
ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಕಲಿ ವೈದ್ಯ ಹಾಗೂ ಮಹಿಳಾ ಏಜೆಂಟ್'ಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ರಾಜಾಜಿನಗರದ ಕಿರಣ್ ಅಲಿಯಾಸ್ ಕೆವಿನ್ ಹಾಗೂ ನಂದಿನ ಲೇಔಟ್'ನ ಜೈ ಭುವನೇಶ್ವರಿ ನಗರದ ರಮ್ಯಾ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ನವಜಾತ ಶಿಶು ಮಾರಾಟ ಪ್ರಕರಣದರಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ಪೈಕಿ 8 ಮಂದಿ ಮಹಿಳೆಯರಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಸೇಫ್: ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲೂ ಕಾರ್ಯನಿರ್ವಹಿಸುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಹಾಗೂ ಆಸ್ಪತ್ರೆಗಳ ಮೇಲೆ ಆಗಾಗ್ಗ ಪಿಸಿ ಆ್ಯಂಡ್ ಪಿಎನ್‌ಡಿಸಿ ಸಮಿತಿಯ ರಾಜ್ಯ ಮತ್ತು ಜಿಲ್ಲಾ ತಂಡ ಭೇಟಿ ನೀಡಿ ಪರಿಶೀಲಿಸುತ್ತಿರುತ್ತವೆ. ಸರ್ಕಾರಿ ಆಸ್ಪತ್ರೆಗಳು ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಇಂತಹ ದಂಧೆ ನಡೆಯುವುದಿಲ್ಲ ಎಂಬ ನಂಬಿಕೆ. ಈ ಕಾರಣದಿಂದ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ನಡೆಸುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಗಳು ಸೇಫ್ ಆಗಿವೆ. ಈ ಕಾರಣದಿಂದ ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾಕಷ್ಟಿವೆ.
ಸಾಮಾಜಿಕ ಕಾರ್ಯಕರ್ತೆ
ಪಿಸಿ ಆ್ಯಂಡ್ ಪಿಎನ್‌ಡಿಸಿ ಸಮಿತಿಯಿಂದ ಈಗಾಗಲೇ 5 ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಕೆಲ ಸರ್ಕಾರಿ ವೈದ್ಯರೂ ಸಾರ್ವಜನಿಕ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ ಮಾಡು ತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಮಿತಿ ಸಭೆಯಲ್ಲಿ ಸಹ ಗಮನ ಸೆಳೆಯಲಾಗಿದೆ. ನವೆಂಬರ್ ನಲ್ಲಿ ಸೂಚಿಸಿದ ಪ್ರಕರಣಗಳಿಗೆ ಇನ್ನೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಮಿತಿಯ ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರೆ ಸಮಸ್ಯೆಗೆ ಕಡಿವಾಣ ಹಾಕಬಹುದು.
ಮದುವೆಯಿಲ್ಲದೆ ಗರ್ಭಿಣಿಯಾಗಿದ್ದ ತನ್ನ ಸಂಬಂಧಿಯೊಬ್ಬಳು ಗರ್ಭಪಾತಕ್ಕೆ ಮುಂದಾಗಿದ್ದಾಗ ಬಂಧಿತ ಆರೋಪಿ ರಮ್ಯಾ ಆಕೆಗೆ ಹಣದ ಆಮಿಷ ಒಡ್ಡಿ, ಮಗುವಿಗೆ ಜನ್ಮ ನೀಡುವಂತೆ ಮಾಡಿದ್ದಳು. ಮಗುವಿಗೆ ಜನ್ಮ ನೀಡಿದ ನಂತರ ಆರೋಪಿ ರಮ್ಯಾ ಇತರೆ ಎಂಟು ಆರೋಪಿಗಳ ಸಹಾಯದಿಂದ ಮಗುವನ್ನು ಮಾರಾಟ ಮಾಡಿದ್ದಳು. ಮಗುವನ್ನು ಮಾರಾಟ ಮಾಡಲು ತನ್ನ ಸಂಬಂಧಿಕ ಮಹಿಳೆಗೆ ಕೆಲವು ಲಕ್ಷಗಳನ್ನು ನೀಡಿದ್ದಳು. ಅಲ್ಲದೆ, ಆಕೆಯ ಮದುವೆಗೂ ಸಹಾಯ ಮಾಡಿದ್ದಳು. ಇದೀಗ ಸಿಸಿಬಿ ಅಧಿಕಾರಿಗಳು ರಮ್ಯಾ ಮಗುವನ್ನು ಮಾರಾಟ ಮಾಡಿದ್ದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ಇನ್ನು ಮತ್ತೊಬ್ಬ ಆರೋಪಿ ಕೆವಿನ್ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಬಿಟ್ಟಿದ್ದ. ಬಳಿಕ ವೈದ್ಯರೊಬ್ಬರ ಬಳಿ ಸಹಾಯಕನಾಗಿ ಕೆವಿನ್ ಕೆಲಸ ಮಾಡುತ್ತಿದ್ದ. ಆನಂತರ ತಾನೇ ರಾಜಾಜಿನಗರದ 6ನೇ ಬ್ಲಾಕ್ ನಲ್ಲಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ಶುರು ಮಾಡಿದ್ದ ಎಂದು ಮೂಲಗಳು ತಿಳಿಸಿವೆ.