PGK NEWS (ಪಶ್ಚಿಮಘಟ್ಟ ವಾಯ್ಸ್ ) ಗಾಝಾ ಪ್ರದೇಶವನ್ನು ಎರಡು ತುಂಡು ಭಾಗಗಳಾಗಿ ಕತ್ತರಿಸಲಾಗಿದೆ ಎಂದ ಇಸ್ರೇಲ್ ಸೇನೆ: ಇರಾಕ್ ಗೆ ಬ್ಲಿಂಕೆನ್ ಅನಿರೀಕ್ಷಿತ ಭೇಟಿ!

 


ಪಶ್ಚಿಮಘಟ್ಟ ವಾಯ್ಸ್ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾಗಿ ಒಂದು ತಿಂಗಳು ಆದ ಬೆನ್ನಲ್ಲೇ ಇಸ್ರೇಲ್ ಮಿಲಿಟರಿ ಭಾನುವಾರ ತಡರಾತ್ರಿ ಗಾಜಾ ನಗರವನ್ನು ಸುತ್ತುವರಿದು ಅದನ್ನು ಎರಡು ಭಾಗಗಳಾಗಿ ವಿಭಜಿಸಿದೆ ಎಂದು ಘೋಷಿಸಿದೆ. ಮುತ್ತಿಗೆ ಹಾಕಿದ ಗಾಝಾ ಪಟ್ಟಿಯು ಯುದ್ಧ ಪ್ರಾರಂಭವಾದಾಗಿನಿಂದ ಮೂರನೇ ಸಂಪೂರ್ಣ ಸಂವಹನ ಸ್ಥಗಿತಕ್ಕೆ ಒಳಗಾಯಿತು. ಏತನ್ಮಧ್ಯೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪ್ಯಾಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾದರು. ನಂತರ ಇರಾಕ್ ಗೆ ಅನಿರೀಕ್ಷಿತ ಭೇಟಿ ನೀಡಿದರು.

ಗಾಝಾದಲ್ಲಿ ನಾಲ್ಕು ವಾರಗಳಿಗೂ ಹೆಚ್ಚು ಕಾಲ ನಡೆದ ಯುದ್ಧದಲ್ಲಿ ಕನಿಷ್ಠ 9,770 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ಇತಿಹಾಸದಲ್ಲೇ ನಡೆದ ಭೀಕರ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು. 240 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ವಶಪಡಿಸಿಕೊಂಡ ನಂತರ ಈ ಕಾರ್ಯಾಚರಣೆ ಪ್ರಾರಂಭವಾಯಿತು.


ಗಾಝಾ ನಗರವನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದರಿಂದ ಗಾಝಾ ಭಾನುವಾರ ಇಸ್ರೇಲ್‌ನಿಂದ ಮತ್ತೆ ದೊಡ್ಡ ಪ್ರಮಾಣದ ಬಾಂಬ್ ದಾಳಿಗೆ ಒಳಗಾಗಿದೆ. “ಇಂದು ಉತ್ತರ ಗಾಝಾ ಮತ್ತು ದಕ್ಷಿಣ ಗಾಝಾ ಇದೆ” ಎಂದು ಅವರು ಹೇಳಿದರು. ಇದು ಹಮಾಸ್ ವಿರುದ್ಧದ ಇಸ್ರೇಲ್ ನ ಯುದ್ಧದಲ್ಲಿ “ಮಹತ್ವದ ಹಂತ” ಎಂದು ಕರೆದರು. ಇಸ್ರೇಲಿ ಪಡೆಗಳು 48 ಗಂಟೆಗಳಲ್ಲಿ ಗಾಝಾ ನಗರವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಮಾಧ್ಯಮಗಳು ತಿಳಿಸಿವೆ. ರಾತ್ರಿ ವೇಳೆ ಉತ್ತರ ಗಾಝಾದಲ್ಲಿ ಬಲವಾದ ಸ್ಫೋಟಗಳು ನಡೆದ ಬಗ್ಗೆ ವರದಿಯಾಗಿವೆ.

ರಷ್ಯಾ - ಉಕ್ರೇನ್‌ ಯುದ್ಧದ ನಂತರ, ಈಗ ಗಲ್ಫ್‌ ಪ್ರದೇಶದಲ್ಲಿನ ವಿವಾದವು ಸರಕು ಮಾರುಕಟ್ಟೆಗೆ ದೊಡ್ಡ ಹೊಡೆತವನ್ನು ತಂದಿದೆ ಎಂದು ವಿಶ್ವ ಬ್ಯಾಂಕ್‌ ಮುಖ್ಯ ಅರ್ಥಶಾಸ್ತ್ರಜ್ಞ ಇಂಗರ್ಮಿಟ್‌ ಗಿಲ್‌ ಹೇಳಿದ್ದಾರೆ. ಇದು ಜಾಗತಿಕ ಆರ್ಥಿಕತೆಗೆ ಅಡ್ಡಿ ಉಂಟುಮಾಡಬಹುದು. ಆಯಾ ರಾಷ್ಟ್ರಗಳ ನೀತಿ ನಿರೂಪಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ಈ ಯುದ್ಧವು ಮತ್ತಷ್ಟು ಹರಡಿದರೆ, ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಆಹಾರ ಹಣದುಬ್ಬರ ಹೆಚ್ಚಾಗಬಹುದು 

ತೈಲ ಬೆಲೆ ಹೆಚ್ಚಿರುವುದರಿಂದ ಆಹಾರ ಪದಾರ್ಥಗಳ ಬೆಲೆಯಲ್ಲಿಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್‌ ಉಪಮುಖ್ಯ ಆರ್ಥಿಕ ತಜ್ಞ ಅಹನ್‌ ಕೋಜ್‌ ಹೇಳಿದ್ದಾರೆ.
ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಹಾರ ಹಣದುಬ್ಬರದಲ್ಲಿ ತೀವ್ರ ಏರಿಕೆ ಆಗಬಹುದು. 2022ರ ಅಂತ್ಯದ ವೇಳೆಗೆ ವಿಶ್ವದಾದ್ಯಂತ 70 ಕೋಟಿ ಜನರು, ಅಂದರೆ ವಿಶ್ವದ ಜನಸಂಖ್ಯೆಯ ಶೇ. 10ರಷ್ಟು ಜನರು ಅಪೌಷ್ಟಿಕತೆಗೆ ಬಲಿಯಾಗುತ್ತಾರೆ. ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧವು ಇತರ ಪ್ರದೇಶಗಳಿಗೆ ವಿಸ್ತರಿಸಿದರೆ, ಪ್ರಪಂಚದಾದ್ಯಂತ ಆಹಾರ ಅಭದ್ರತೆ ಹೆಚ್ಚಾಗುವ ಅಪಾಯವಿದೆ," ಎಂದು ಅಹನ್‌ ಕೋಚ್‌ ಅಭಿಪ್ರಾಯಪಟ್ಟಿದ್ದಾರೆ. ಆಹಾರ - ಗೊಬ್ಬರ ರಫ್ತು ನಿಷೇಧಿಸಬೇಡಿ - ವಿಶ್ವ ಸಂಸ್ಥೆ ಮನವಿ    ಅಭಿವೃದ್ಧಿಶೀಲ ರಾಷ್ಟ್ರಗಳ ನೀತಿ ನಿರೂಪಕರು ಹಣದುಬ್ಬರವನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿಶ್ವ ಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ. ಆಹಾರ ಮತ್ತು ರಸಗೊಬ್ಬರಗಳ ರಫ್ತು ನಿಷೇಧಿಸದಂತೆ ವಿಶ್ವದ ಪ್ರಮುಖ ದೇಶಗಳಿಗೆ ವಿಶ್ವ ಸಂಸ್ಥೆ ಸಲಹೆ ನೀಡಿದೆ. ರಷ್ಯಾ - ಉಕ್ರೇನ್‌ ಯುದ್ಧದ ನಂತರ ಭಾರತವು ಗೋಧಿ ರಫ್ತು ನಿಷೇಧಿಸಿದೆ. ಅಕ್ಕಿ ಮತ್ತು ಸಕ್ಕರೆ ರಫ್ತಿನ ಮೇಲೂ ನಿರ್ಬಂಧ ಹೇರಿದ.


www.westernghatsvoice.com

GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)

PGK

Post a Comment

Previous Post Next Post