PGK NEWS(ಪಶ್ಚಿಮ ಘಟ್ಟ ವಾಯ್ಸ್ ) ಬಡವರಿಗೆ ಮನೆ ಭಾಗ್ಯ! ಕೇವಲ 1 ಲಕ್ಷ ಪಾವತಿಸಿದರೆ ಸಿಗುತ್ತೆ ಸಿದ್ದರಾಮಯ್ಯನವರ ಸರ್ಕಾರದಿಂದ ಮನೆ!


PGK NEWS(ಪಶ್ಚಿಮ ಘಟ್ಟ ವಾಯ್ಸ್ ) ದೇಶದಲ್ಲಿ ಸ್ವಂತ ಮನೆ (own house) ಇಲ್ಲದೆ ಬಾಡಿಗೆ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವುದಕ್ಕೂ ಕೂಡ ಹಣ ಇಲ್ಲದೆ ಗುಡಿಸಿಲಿನಲ್ಲಿ ವಾಸವಾಗಿರುವ ಸಾಕಷ್ಟು ಕುಟುಂಬಗಳು ಇವೆ.

ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳಲ್ಲಿ ಒಂದು, ಹಾಗಾಗಿ ಎಲ್ಲರೂ ಕೂಡ ಸ್ವಂತ ಸೂರು ಹೊಂದಿರಬೇಕು ಎನ್ನುವುದು ಕೇಂದ್ರ ಸರ್ಕಾರದ (central government) ಉದ್ದೇಶ, ಎಲ್ಲರೂ ಸಹ ಹೋಮ್ ಲೋನ್ (Home Loan) ಪಡೆದು ಮನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಇದೇ ಕಾರಣಕ್ಕೆ ಬೇರೆ ಬೇರೆ ಪ್ರದೇಶಗಳಿಗೆ ಅನುಗುಣವಾಗುವಂತೆ ಬೇರೆ ಬೇರೆ ರೀತಿಯ ವಸತಿ ಯೋಜನೆ (housing scheme) ಗಳನ್ನು ಬಿಡುಗಡೆ ಮಾಡಲಾಗಿದೆ, ಅತಿ ಕಡಿಮೆ ಬೆಲೆಗೆ ಸರ್ಕಾರದಿಂದಲೇ ಮನೆ ಪಡೆದುಕೊಳ್ಳುವ ವಸತಿ ಯೋಜನೆಗಳು ಜಾರಿಯಲ್ಲಿ ಇದೆ.

2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas scheme) ಯನ್ನು ಜಾರಿಗೆ ತರಲಾಯಿತು, ಈ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಮನೆ ಕಟ್ಟಿಕೊಳ್ಳಲು ಸರ್ಕಾರ ಸಬ್ಸಿಡಿ (government subsidy) ಒದಗಿಸುತ್ತಿದೆ.

2022 ಒಳಗೆ ಪ್ರತಿಯೊಬ್ಬ ಬಡ ಫಲಾನುಭವಿ ಕುಟುಂಬಗಳು ಸ್ವಂತ ಮನೆ (Own House) ಹೊಂದಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಈ ಯೋಜನೆ ಪೂರ್ಣ ಯಶಸ್ವಿ ಆಗಲು ಸಾಧ್ಯವಾಗಿಲ್ಲ.

ಇದಕ್ಕೆ ಮುಖ್ಯ ಕಾರಣ ಸರಕಾರದಿಂದ ಘೋಷಿತವಾಗಿರುವ ಪ್ರಧಾನಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ಘಟಕ ವೆಚ್ಚ 7 ಲಕ್ಷ ಆಗಿದ್ದು ಇದರಲ್ಲಿ ಮೂರು ಲಕ್ಷ ಸರ್ಕಾರದಿಂದ ಸಿಕ್ಕರೆ ಇನ್ನೂ ನಾಲ್ಕು ಲಕ್ಷವನ್ನ ಮನೆ ಪಡೆದುಕೊಳ್ಳುವವರೆ ಪಾವತಿ ಮಾಡಬೇಕಿತ್ತು, ಆದರೆ ಬಡವರಿಗೆ ಇದು ಕೂಡ ಬಹಳ ದೊಡ್ಡ ಮೊತ್ತವಾಗಿರುವುದರಿಂದ ಈ ಮನೆ ಯೋಜನೆ ಯಶಸ್ವಿಯಾಗಿಲ್ಲ, ಜನರು ಅಷ್ಟಾಗಿ ಖರೀದಿ ಮಾಡಲಿಲ್ಲ.

ರಾಜ್ಯ ಸರ್ಕಾರದ ವಸತಿ ಯೋಜನೆ!

ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಹಾಯಧನದ ಮೂಲಕ ರಾಜ್ಯದಲ್ಲಿಯೂ ಸಾಕಷ್ಟು ಜನರಿಗೆ ಮನೆ ಕಟ್ಟಿಸಿ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿತು, ಇದೇ ಕಾರಣಕ್ಕೆ ಕೆಲವು ಕೊಳಗೇರಿ ಪ್ರದೇಶಗಳಲ್ಲಿ ಇರುವ ಗುಡಿಸಲು ಹಾಗೂ ಷಡ್ಡುಗಳನ್ನು ತೆಗೆದು ಹಾಕಲಾಗಿತ್ತು

ಇದರಿಂದ ಬಡವರಿಗೆ ಸೂರು ಇಲ್ಲದಂತೆ ಆಗಿದೆ. ರಾಜ್ಯದಲ್ಲಿ 1.80 ಲಕ್ಷ ಮನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು. ಈ ವರ್ಷದ ಕೊನೆಯಲ್ಲಿ ಬಹುತೇಕ ಮನೆಗಳನ್ನು ಬಡವರಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಯೋಜನೆ!(Karnataka slum board housing scheme)

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ(KSBHS) ಯೋಜನೆಯ ಅಡಿಯಲ್ಲಿ ಈಗ ಸರ್ಕಾರ ಅಗತ್ಯ ಇರುವವರಿಗೆ ಮನೆ ನೀಡಲು ಮತ್ತೊಂದು ಕ್ರಮ ಕೈಗೊಂಡಿದ್ದು ಇನ್ನು ಮುಂದೆ ಬಡವರು ನಾಲ್ಕು ಲಕ್ಷ ರೂಪಾಯಿಗಳನ್ನು ಕಟ್ಟಬೇಕಾಗಿಲ್ಲ .ಅದರ ಬದಲು ಕೇವಲ ಒಂದು ಲಕ್ಷ ರೂಪಾಯಿಗಳನ್ನು ಪಾವತಿಸಿದರೆ ಸರಕಾರದ ಮನೆ ಅಂತವರ ಸ್ವಂತದಾಗುತ್ತದೆ.

ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (minister Jamir Ahmad Khan) ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೂಡ ಅನುಮೋದನೆ ನೀಡಿದ್ದಾರೆ.

                            (ನುಡಿದಂತೆ ನಡೆಯುವ ಸರ್ಕಾರ)

ಈ ಹಿನ್ನೆಲೆಯಲ್ಲಿ ಜನರಿಂದ ಕೇವಲ ಒಂದು ಲಕ್ಷ ರೂಪಾಯಿಗಳನ್ನು ಪಡೆದು ಅವರಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. 50,000 ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ 500 ಕೋಟಿಗಳನ್ನು ಅನುಮೋದನೆ ನೀಡಿದೆ ಸದ್ಯ ತೀರ ಅಗತ್ಯ ಇರುವ ಕರ್ನಾಟಕ ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೆ ಕೇವಲ ಒಂದು ಲಕ್ಷಕ್ಕೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎನ್ನಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ವಸತಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ಕೂಡ ಸ್ವಂತ ಸೂರು ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.




PGK

Post a Comment

Previous Post Next Post