PGK NEWS (ಪಶ್ಚಿಮ ಘಟ್ಟ ವಾಯ್ಸ್) ಉಡುಪಿಯ ಮಲ್ಪೆ ಬಳಿ ಅರಬ್ಬೀ ಸಮುದ್ರದಲ್ಲಿ ಮಗುಚಿದ ಮೀನುಗಾರಿಕಾ ಬೋಟ್, 8 ಮೀನುಗಾರರ ರಕ್ಷಣೆ!
PGK-
0
PGK NEWS ಪಶ್ಚಿಮ ಘಟ್ಟ ವಾಯ್ಸ್ಉಡುಪಿ: ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ. ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ.
ಮೀನುಗಾರಿಕೆಗೆ ಬಳಸುವ ನಾವೆಯೊಂದು ಅರಬ್ಬೀ ಸಮುದ್ರದಲ್ಲಿ (The Arabian Sea) ಹಂತಹಂತವಾಗಿ ಮುಳುಗುತ್ತಿರುವ ಭಯಾನಕ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಈ ಬೋಟ್ ನಲ್ಲಿ ಮೀನು ಹಿಡಿಯಲೆಂದು ಅರಬ್ಬೀ ಸಮುದ್ರದ ಆಳಕ್ಕೆ (deep waters) ತೆರಳಿದ್ದ ಎಲ್ಲ 8 ಮೀನುಗಾರರನ್ನು (fishermen) ರಕ್ಷಿಸಲಾಗಿದೆ. ಪಶ್ಚಿಮ ಘಟ್ಟ ವಾಯ್ಸ್ಉಡುಪಿ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ, (Malpe) ಬಳಿ ಅವಗಢ ಸಂಭವಿಸಿದ್ದು ಮುಳುಗಿದ ಬೋಟ್ ಉಡುಪಿ ತಾಲ್ಲೂಕಿನಲ್ಲಿರುವ ಕಡೆಕಾರಿನ ರಕ್ಷಾ ಅವರಿಗೆ ಸೇರಿದ್ದಂತೆ. ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ.
ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ. ಬೋಟ್ ಒಡತಿ ರಕ್ಷಾಗೆ ಸುಮಾರು ರೂ. 18 ಲಕ್ಷಗಳಷ್ಟು ನಷ್ಟವುಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.