PGK NEWS ( ಪಶ್ಚಿಮ ಘಟ್ಟ ವಾಯ್ಸ್
ಧಾರವಾಡ : ಇಲ್ಲಿನ ಏತ ನೀರಾವರಿ ಇಲಾಖೆ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಲೋಕಾಯುಕ್ತರು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದಾಗ ಏತ ನೀರಾವರಿ ಇಲಾಖೆ ಅಧಿಕಾರಿಗಳಾದ ಮಂಜುನಾಥ ಬಿ. ಹಾಗೂ ಪ್ರಕಾಶ ಹೊಸಮನಿ ಸಿಕ್ಕಿ ಬಿದ್ದಿದ್ದಾರೆ.
ಶಿಗ್ಗಾವಿ ಏತ ನೀರಾವರಿ ಉಪವಿಭಾಗ ಮಂಜುನಾಥ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ, ಕಿರಿಯ ಅಭಿಯಂತರಗುತ್ತಿಗೆದಾರ ಬಾಲಕೃಷ್ಣ ನಾಯ್ಕರಿಂದ ಲಂಚ ಸ್ವೀಕರಿಸುತ್ತಿದ್ದರು. ಇವರು
1 ಲಕ್ಷ ರೂ.ಹಣ ಪಡೆಯುತ್ತಿದದ್ದ ವೇಳೆ ಲೋಕಾಯುಕ್ತರು ಖೆಡ್ಡಾ ತೋಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾಮಗಾರಿಗಳು ಇವಾಗಿದ್ದು,ಮೊದಲ ಬಿಲ್ ಲಂಚ ಪಡೆದುಕೊಂಡೇ ಮಂಜೂರಿ ಮಾಡಿ, ಇದೀಗ ಅಂತಿಮ ಬಿಲ್ ಪಾಸ್ ಮಾಡಲು ಪುನಃ ಲಂಚಕ್ಕೆ ಬೇಡಿಕೆ ಇಟ್ಟಾಗ ಲಂಚದ ಹಣ ಕೊಡುವಾಗ ಲೋಕಾಯುಕ್ತರು ಬಲೆ ಬೀಸಿದ್ದಾರೆ.
www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)