PGK NEWS ( ಪಶ್ಚಿಮ ಘಟ್ಟ ವಾಯ್ಸ್
ರಾಜ್ಯದಲ್ಲಿ ಸರ್ಕಾರಿ ಭೂಮಿ (government land) ಒತ್ತುವರಿ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ, ದಿನದಿಂದ ದಿನಕ್ಕೆ ಭೂ ಮಾಫಿಯಾ (Land Mafia) ಎನ್ನುವುದು ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.ಇಡೀ ರಾಜ್ಯದ್ಯಂತ ನೋಡಿದರೆ ಒಂದಲ್ಲ ಒಂದು ಜಾಗದಲ್ಲಿ ಸರ್ಕಾರಿ ಭೂಮಿ ಒತ್ತುವರಿ (government land encroachment) ಆಗಿರುವುದು ಕಂಡು ಬಂದಿದೆ, ಅದರಲ್ಲೂ ಈ ರೀತಿ ಭೂಮಿ ಒತ್ತುವರಿಗೆ ಸರ್ಕಾರಿ ಅಧಿಕಾರಿಗಳೇ ಸಹಕರಿಸುತ್ತಿದ್ದು ಸದ್ಯ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಭೂಮಿ ಒತ್ತುವರಿಗೆ ಸಹಾಯ ಮಾಡಿದವರಿಗೆ ಶಿಕ್ಷೆ!
ಕಳ್ಳತನ ಮಾಡುವವರಿಗೆ ಶಿಕ್ಷೆ ಕೊಡುವುದು ಮಾತ್ರವಲ್ಲ ಕಳ್ಳತನ ಮಾಡುವುದಕ್ಕೆ ಸಹಾಯ ಮಾಡಿದವರಿಗೂ ಶಿಕ್ಷೆ ಕೊಡುವುದು ಮುಖ್ಯವಾಗುತ್ತದೆ, ಅದೇ ರೀತಿ ಸಾಕಷ್ಟು ರಿಯಲ್ ಎಸ್ಟೇಟ್ ಬಿಸಿನೆಸ್ (real estate business) ಮಾಡುವವರು ಹಾಗೂ ಮತ್ತಿತರ ಭೂಮಿ ಖರೀದಿ, ಮಾರಾಟ ಮಾಡುವವರು ಸರ್ಕಾರಿ ಭೂಮಿಯನ್ನು ಸರ್ಕಾರಕ್ಕೆ ತಿಳಿಯದ ಹಾಗೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ.
ಜೊತೆಗೆ ಒತ್ತುವರಿ ಮಾಡಿದ ಜಮೀನನ್ನು ಖಾಸಗಿ ಜಮೀನು (Private Property) ಎನ್ನುವಂತೆ ಮಾರಾಟ ಮಾಡುತ್ತಿದ್ದಾರೆ, ಇದಕ್ಕೆ ಸರ್ಕಾರಿ ಅಧಿಕಾರಿಗಳು ಕೂಡ ಸಹಕರಿಸುತ್ತಿರುವುದು ಶೋಚನೀಯ!
ಇಂತಹ ಭೂ ಒತ್ತುವರಿ ಮಾಡಿಕೊಂಡವರಿಗೆ ಶಿಕ್ಷೆ (punishment) ವಿಧಿಸುವುದು ಮಾತ್ರವಲ್ಲದೆ ಅಂಥವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ವಿಧಾನಪರಿಷತ್ತಿನ ಸಭೆ ಒಂದರಲ್ಲಿ ಭೂ ಒತ್ತುವರಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿರುವ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ!
ಅಕ್ರಮ ಭೂಮಿ ಹಿಂಪಡೆಯಲು ಕ್ರಮ!
ಸಚಿವರು ತಿಳಿಸಿರುವಂತೆ ಕೇವಲ ಬೆಂಗಳೂರಿನಲ್ಲಿ (Bengaluru) ಮಾತ್ರವಲ್ಲದೆ ರಾಜ್ಯದ ಇನ್ನೂ ಹಲವು ಜಿಲ್ಲೆಗಳಲ್ಲಿ ಅಕ್ರಮ ಒತ್ತುವರಿ ಕೆಲಸ ನಡೆದಿದೆ ಇದನ್ನು ಪರಿಶೀಲಿಸಿ ರಿಪೋರ್ಟ್ ನೀಡುವಂತೆ ಆಯಾ ಜಿಲ್ಲಾ ಕಂದಾಯ ಇಲಾಖೆಗೆ (revenue department) ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಯಾರು ಅಕ್ರಮ ಜಮೀನು ಒತ್ತುವರಿ ಮಾಡಿಕೊಂಡಿರುತ್ತಾರೋ ಅಂತವರನ್ನು ತೆರೆವು ಗೊಳಿಸಲು ಸರ್ಕಾರ ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಇನ್ನು ಇಂದು ಖಾಲಿ ಇದ್ದ ಸರ್ಕಾರಿ ಭೂಮಿ ಅದೆಷ್ಟು ಬಾರಿ ಇನ್ನೊಮ್ಮೆ ನೋಡಿದರೆ ಖಾಲಿ ಇರುವುದಿಲ್ಲ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರಲಾಗುತ್ತೆ. ಇದಕ್ಕಾಗಿ ಡಿಜಿಟಲ್ ಮಾರ್ಗವನ್ನು ಅನುಸರಿಸುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ
ಸರಕಾರದ ಈ ಎಲ್ಲಾ ಭೂ ದಾಖಲೆಗಳನ್ನು (Property Documents) ಅಪ್ಲಿಕೇಶನ್ ಗಳಲ್ಲಿ ಅಪ್ಲೋಡ್ ಮಾಡಲಾಗುತ್ತೆ. ಖಾಲಿ ಇರುವ ಜಾಗಗಳನ್ನು ಗುರುತಿಸಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಜಾಗಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಒಂದು ವೇಳೆ ಅಕ್ರಮ ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದರೆ ತಕ್ಷಣವೇ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.