ಪಶ್ಚಿಮ ಘಟ್ಟ ವಾಯ್ಸ್:-
ಶಿರಸಿ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ 14 ಮತ್ತು 17ನೇ ವರ್ಷ ವಯೋಮಿತಿ ಒಳಗಿನ 2023/24ನೇ ಸಾಲಿನ ಟೇಬಲ್ ಟೆನಿಸ್ ಪಂದ್ಯಾವಳಿ ಶಿರಸಿ ಸಿದ್ದಾಪುರಕ್ಷೇತ್ರದ ಶಾಸಕರಾದ ಭಿಮ್ಮಣ್ಣ ನಾಯಕ ಉದ್ಘಾಟನೆ ಮಾಡುವ ಮುಖಾಂತರ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತರಾದ ದೇವರಾಜ್ ಡಿ, ಶಿಕ್ಷಣ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಎಂಎಸ್ ಉಪಸಮಿತಿ ಅಧ್ಯಕ್ಷರಾದ ದೀಪಕ ದೊಡ್ಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ದೇವರಾಜ್ ಡಿ ಅವರು ಎಲ್ಲ ವಿದ್ಯಾರ್ಥಿಗಳಿಗೆಸೋಲು ಗೆಲವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿ ಶುಭ ಕೋರಿದರು. ನಂತರ ಮಾತಾಡಿದ ಶಾಸಕರು ಕ್ರೀಡೆಯ ಮಹತ್ವವನ್ನು ತಿಳಿಸಿದರು, ಶಿರಸಿ ಎಲ್ಲಾ ಹಂತಗಳಲ್ಲಿಯೂ ಎತ್ತಿದ ಕೈ ಅಂತಾ ಹೇಳಿ ರಾಜ್ಯ ಮಟ್ಟದ ಕ್ರೀಢಾ ಕೂಟ ನಡೆಸುತ್ತಿರುವದು ಹೆಮ್ಮೆಯ ವಿಷಯ ಎಂದರು, ನಿರ್ಣಾಯಕರು ಕೊಟ್ಟಂತ ತೀರ್ಪಿಗೆ ಬದ್ಧರಾಗಿ ಈ ಗೆಲುವು ಮತ್ತು ಸೋಲನ್ನು ಸಮನಾಗಿ ಪಡೆದು ಕ್ರೀಡಾಕೂಟನ್ನು ಯಶಸ್ವಿ ಮಾಡಿ ಎಂದು ಶುಭ ಕೋರಿದರು.ಈ ಪಂದ್ಯದಲ್ಲಿ 31 ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ತರಭೇತಿದಾರರು. ಪಲಾಗೊಂಡಿದ್ದರು. ಹಾಗೂ ಈ ಸಂಧರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ಶಿರಸಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
www.westernghatsvoice.com