PGK NEWS(ಪಶ್ಚಿಮ ಘಟ್ಟ ವಾಯ್ಸ್:-
ಇಂದು ತೆಲಂಗಾಣ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸ್ತಿದ್ದಾರೆ. ಹೀಗಾಗಿ ಹೈದರಾಬಾದ್ನಲ್ಲಿ ಸಕಲ ಸಿದ್ಧತೆ ನಡೀತಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಹಲವು ನಾಯಕರಿಗೆ ಆಹ್ವಾನ ಹೋಗಿದೆ. ಆದ್ರೆ, ಇಂಡಿಯಾ ಒಕ್ಕೂಟದ ನಾಯಕರು ಗೈರಾಗುವ ಸಾಧ್ಯತೆ ಇದೆ. ತೆಲುಗು ನಾಡಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ದರ್ಬಾರ್ ಆರಂಭ ಆಗ್ತಿದೆ. ಪಂಚರಾಜ್ಯ ಎಲೆಕ್ಷನ್ ಪೈಕಿ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಟೀಂ, ದಂಡು ದಾಳಿಗಳನ್ನ ಮೆಟ್ಟಿ ನಿಂತು ಹೊಸ ಇತಿಹಾಸ ಬರೆದಿದೆ. ಸತತ 2 ಬಾರಿ ಗೆದ್ದು ಬೀಗಿದ್ದ ಕೆಸಿಆರ್ ಕಾರು ರೇಸ್ನಿಂದ ಹೊರಬಿದ್ದಿದೆ. ಈ ಬೆನ್ನಲ್ಲೇ ಮುತ್ತಿನ ನಗರಿಯ, ನಾಯಕತ್ವ ರೇವಂತ್ ರೆಡ್ಡಿ ಹೆಗಲೇರಿದೆ.64 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಕಗ್ಗಂಟು ಮಾಯವಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ಅಂತೂ, ಇಂತೂ ಅಂತಿಮವಾಗಿ ಸಿಎಂ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಹೈಕಮಾಂಡ್ ನಿಟ್ಟುಸಿರು ಬಿಟ್ಟಿದೆ. ರೇವಂತ್ರನ್ನೇ ಸಿಎಂ ಸಿಂಹಾಸನಕ್ಕೆ ಪಟ್ಟಾಭಿಷೇಕ ಆಗ್ತಿದೆ. ಇಂದು ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಸೋನಿಯಾ ಪಾಲ್ಗೊಳ್ಳುವ ಸಾಧ್ಯತೆಯಿದೆ. ಸಂಸತ್ತಿಗೆ ಆಗಮಿಸಿದ್ದ ಸೋನಿಯಾ ಹೈದರಾಬಾದ್‌ಗೆ ತೆರಳುವ ಸುಳಿವು ನೀಡಿದ್ದಾರೆ.ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನ ರೇವಂತ್ ರೆಡ್ಡಿ ಭೇಟಿ ಆಗಿದ್ದರು. ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ರು. ರೇವಂತ್ ರೆಡ್ಡಿ ಸಹಿತ 18 ಶಾಸಕರು ಸಚಿವರಾಗಿ ಮಧ್ಯಾಹ್ನ 1.04ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಸಿದ್ಧತೆ ನಡೀತಿದೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ. ಸಮಾರಂಭಕ್ಕೆ ಎಐಸಿಸಿ ನಾಯಕರು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಿಎಂಗಳಿಗೆ ಆಮಂತ್ರಣ ಹೋಗಿದೆ. ತಮ್ಮ ರಾಜಕೀಯ ಗುರು ಚಂದ್ರಬಾಬು ನಾಯ್ಡು, ಆಂಧ್ರ ಸಿಎಂ ಜಗನ್, ಮಾಜಿ ಸಿಎಂ ಕೆಸಿಆರ್, ತಮಿಳುನಾಡು ಸಿಎಂ ಸ್ಟಾಲಿನ್ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ.
ಇನ್ನು, ಡಿಕೆಶಿ ಬಗ್ಗೆ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಕರ್ನಾಟಕದಲ್ಲಿರುವ ಜವಾಬ್ದಾರಿ ಮರೆತು, ತೆಲಂಗಾಣ-ದೆಹಲಿ ಮಧ್ಯೆ ತಿರುಗುತ್ತಿರುವ ಬೇಜವಾಬ್ದಾರಿ ಡಿಸಿಎಂ ಅಂತ ಟ್ವೀಟ್ ಮಾಡಿ ಕೆಣಕಿಸಿದೆ. ಇತ್ತ, ವಿಪಕ್ಷ ನಾಯಕ ಅಶೋಕ್ ಸಹ ಸಚಿವರ ವರ್ತನೆ ಬಗ್ಗೆ ಟೀಕಿಸಿದ್ದಾರೆ. ರೈತರಿಗೆ ಸಾಂತ್ವನ ಹೇಳೋದು ಬಿಟ್ಟು ತೆಲಂಗಾಣಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಒಟ್ಟಾರೆ, ಪಂಚರಾಜ್ಯ ಚುನಾವಣೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಬಗ್ಗೆ ಮುನಿದ I.N.D.I.A ಒಕ್ಕೂಟ ನಾಯಕರು, ಇಂದು ತೆಲಂಗಾಣ ಕಾರ್ಯಕ್ರಮಕ್ಕೆ ಹಾಜರಿ ಹಾಕ್ತಾರಾ? ಕರ್ನಾಟಕ ರೀತಿ ಎಲ್ಲಾ ನಾಯಕರು ಬರ್ತಾರಾ ಇಲ್ವಾ ಅನ್ನೋದು ಕುತೂಹಲ ಮನೆ ಮಾಡಿದೆ.
www.westernghatsvoice.com
GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)