ಪಶ್ಚಿಮ ಘಟ್ಟ ವಾಯ್ಸ್:PGK NEWS
ಸಾಗರ: ನಗರದ ಶ್ರೀರಾಂಪುರ ಬಡಾವಣೆಯ ಪ್ರಗತಿಪರ ಕೃಷಿಕ ಗೌತಮ್ ಪೈರವರ ಮನೆ ಅಂಗಳದಲ್ಲಿದ್ದ ಎರಡು ಗಂಧದ ಮರದ ಕಾಂಡವನ್ನು ಕತ್ತರಿಸಿಕೊಂಡು ಕಳ್ಳರು ಹೊತ್ತೊಯ್ದಿರುವ ಪ್ರಕರಣ ನಡೆದಿದೆ.ಗೌತಮ್ ಪೈ ಪ್ರಗತಿಪರ ಕೃಷಿಕರಾಗಿದ್ದು, ಮನೆಯ ಅಂಗಳದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಹೂ, ಹಣ್ಣಿನ ಗಿಡಗಳನ್ನು ಬೆಳೆದು ಮಾದರಿಯಾಗಿದ್ದಾರೆ. ಎರಡು ಗಂಧದ ಮರಗಳು 18 ಹಾಗೂ 22 ವರ್ಷದ ಅವಧಿಯಲ್ಲಿ ಬೆಳೆದಿದ್ದು, ಕಾಂಡಗಳು ಸದೃಢವಾಗಿ ಬೆಳೆದಿದ್ದವು.
ಅವರೇ ತಿಳಿಸಿದಂತೆ ಸುಮಾರು ಬೆಳಗಿನ ಜಾವ ಎರಡೂವರೆ ಹೊತ್ತಿಗೆ ಎರಡೂ ಮರಗಳ ರೆಂಬೆ ಮತ್ತು ಬುಡದ ಕೆಳಭಾಗವನ್ನು ಕತ್ತರಿಸಿ ಕಾಂಡವನ್ನು ಮಾತ್ರ ಕಳವು ಮಾಡಲಾಗಿದೆ. ಗಂಧದ ತುಂಡುಗಳು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆಬಾಳುತ್ತವೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಅಶೋಕ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.