PGK NEWS (ಪಶ್ಚಿಮ ಘಟ್ಟ ವಾಯ್ಸ್ ) ಅತಿಕ್ರಮಣ ಕೆರೆಗಳನ್ನು ಸರ್ವೆ ಮಾಡಿ ಸರಕಾರಕ್ಕೆ ವರದಿ ಒಪ್ಪಿಸಿದ ಅಧಿಕಾರಿಗಳಿಗೆ ಲೋಕಾ ನ್ಯಾಯಮೂರ್ತಿ ಶಹಬ್ಬಾಸ್ ಗಿರಿ!

 ಪಶ್ಚಿಮ ಘಟ್ಟ ವಾಯ್ಸ್ :


ಪಶ್ಚಿಮ ಘಟ್ಟ ವಾಯ್ಸ್ :-ಧಾರವಾಡ (ಜ.): ಸಾಮಾನ್ಯವಾಗಿ ಇತ್ತಿಚಿನ ದಿನಗಳಲ್ಲಿ ಅಕ್ರಮ ಲೇಔಟ್ ಗಳು ಎನ್ ಎ ಲೇಔಟ್ ಗಳು ತಲೆ ಎತ್ತಿ ನಿಲ್ಲುತ್ತಿವೆ ರೈತರ ಜಮೀನುಗಳು ಉಳಿಯುತ್ತಿಲ್ಲ ಜೊತೆಗೆ ಕೆರೆ ಕಟ್ಟೆಗಳು ಕೂಡಾ ಸಾಕಷ್ಟು ಅತಿಕ್ರಮಣವಾಗಿದೆ. ಆದರೆ ಅತಿಕ್ರಮಣ ಕೆರೆಗಳನ್ನು ಸರ್ವೆ ಮಾಡಿ ಸರಕಾರಕ್ಕೆ ವರದಿ ಒಪ್ಪಿಸಿದ ಶ್ರೆಯಸ್ಸು ಧಾರವಾಡ ಸರ್ವೆ ಇಲಾಖೆಗೆ ಸಲ್ಲುತ್ತದೆ ಜೊತೆಗೆ ಇದಕ್ಕೆ‌ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲರು ಕೂಡಾ ಸರ್ವೆ ಅಧಿಕಾರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಪ್ರಗತಿ ಪರಿಶಿಲನೆ ಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನ್ಯಾಯಮೂರ್ತಿಗಳು ಅಧಿಕಾರಿಗಳ ಕೆಲಸಕ್ಕೆ ಅಸ್ತು ಅಂದಿದ್ದಾರೆ. 

ಇತ್ತಿಚಿನ ದಿನಗಳಲ್ಲಿ ಲ್ಯಾಂಡ್ ಮಾಪೀಯಾ ದೊಡ್ಡ ಮಟ್ಟದಲ್ಲಿ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಲೆ ಇದೆ ಅದರಲ್ಲೂ ಕೂಡಾ ವಿದ್ಯಾಕಾಶಿ ಧಾರವಾಡದಲ್ಲಿ ಎಲ್ಲೆಂದರಲ್ಲಿ ಲೇಔಟ್ ಗಳು ನಿರ್ಮಾಣ ವಾಗುತ್ತಿವೆ ಅದರಲ್ಲೂ ಕೆರೆಗಳನ್ನ ಅತಿಕ್ರಮಣ ಮಾಡಿ ಲೇಔಟ್ ಗಳನ್ನ ನಿರ್ಮಾಣ ಮಾಡಿದ್ದಾರೆ ಅದರಲ್ಲೂ ಅತಿಕ್ರಮಣ ಕೆರೆಗಳನ್ನ ತೆರವು ಮಾಡುವುದು ಅಷ್ಟೊಂದು ಸುಲಭವಲ್ಲ ಅದರಲ್ಲೂ ಧಾರವಾಡ ಡಿಡಿಎಲ್ ಆರ್ ಮೋಹನ್ ಶಿವಣ್ಣವರ ಕೂಡಾ ಸದ್ಯ ಧಾರವಾಡದಲ್ಲಿ ಜಿಲ್ಲೆಯ 1206 ಕೆರೆಗಳನ್ನ ಸದ್ಯ ಸರ್ವೆ ಮಾಡಿ ಸರಕಾರಕ್ಕೆ‌ ವರದಿಯನ್ನ ಸಲ್ಲಿಸಿದ್ದಾರೆ. ಇನ್ನು ಈ ಕುರಿತು ಧಾರವಾಡದಲ್ಲಿ ನಡೆದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಅವರು ಕೂಡಾ ಅಧಿಕಾರಿಗಳ ಉತ್ತಮ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.


ಇನ್ನು ಸದ್ಯ ಧಾರವಾಡದಲ್ಲಿರುವ ಕರೆಗಳ ಮಾಹಿತಿಯನ್ನ ನೋಡೋದಾದ್ರೆ ಜಿಲ್ಲೆಯಲ್ಲಿ ಎಂಟು ತಾಲೂಕಿನಲ್ಲಿ 1206 ಕರೆಗೆಳಿವೆ ಅದರ ವಿಸ್ತಿರ್ಣ 7,054 ಎಕರೆ 17 ಗುಂಟೆಯಷ್ಡು ವಿಸ್ತಿರ್ಣವನ್ನ ಹೊಂದಿದೆ  ಇಗಾಗಲೆ 1206 ಕರೆಗೆಳನ್ನ‌ ಅಳತೆ ಮಾಡಲಾಗಿದೆ, ಅದರಲ್ಲಿ 156 ಕೆರೆಗಳನ್ನ ಒತ್ತುವರಿ ಗುರುತಿಸಿಲಾಗಿದೆ ಒತ್ತುವರಿಯಾದ 156 ಎಕರೆಯ ವಿಸ್ತಿರ್ಣ 281 ಎಕರೆ 13 ಗುಂಟೆ ಒತ್ತುವರಿಯಾಗಿದೆ ಕರೆಯ ಸುತ್ತ 30 ಮಿಟರ್ ಬಫರ್ ಜೋನ್ ಹಾಕಲಾಗಿದೆ, ಬಳಿಕ ಎಡಿಎಲ್‌ಆರ್ ಅವರು ಎಲ್ಲ‌ ತಾಲೂಕು ತಹಿಶಿಲ್ದಾರಗಳಿಗೆ ಮಾಹಿತಿಯನ್ನ ಕೊಟ್ಟಿದ್ದೆವೆ ಸದ್ಯ ಎಲ್ಲ ತಹಶಿಲ್ದಾರಗಳು 156 ರಲ್ಲಿ 86 ಕೆರೆಗಳನ್ನ ತೆರವುಗೊಳಿಸಿದ್ದಾರೆ ಜೊತೆಗೆ 86 ಕೆರೆಯ ವಿಸ್ತಿರ್ಣ 116 ಎಕರೆ ವಿಸ್ತಿರ್ಣ ಸದ್ಯ ತೆರವುಮಾಡಲಾಗಿದೆ. ಇನ್ನು 70 ಕರೆಗಳು ತೆರವುಗೊಳಿಸೋದು ಬಾಕಿ ಇದೆ. ಸದ್ಯ 6773 ಕರೆಗಳು ಮುಕ್ತವಾಗಿವೆ. ಇನ್ನು ಸದ್ಯ ಜಿಲ್ಲೆಯ 70 ಕರೇಗಳು ತೆರವು ಮಾಡೋದು ಬಾಕಿ‌ ಇದೆ. ಅದರಲ್ಲಿ ಕುಂದಗೋಳದಲ್ಲಿ 70 ಕೆರೆಗಳಲ್ಲಿ 40 ಕೆರೆಗಳಲ್ಲಿ ಸರಕಾರ ಕಟ್ಟಡಗಳುದೇವಸ್ಥಾನಗಳು, ಸಭಾಭವನಗಳು ಇವೆ.ಅವುಗಳ ಬಗ್ಗೆ ಸರಕಾರದ ಗಮನಕ್ಕೆ‌ತರಲಾಗಿದೆ.ಸದ್ಯ ಎಲ್ಲ‌ ಭೂ ಮಾಪನ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಲೋಕಾಯುಕ್ತ ನ್ಯಾಯ ಮೂರ್ತಿಗಳು ಅಧಿಕಾರಿಗಳ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ...

ಇನ್ನು ಧಾರವಾಡದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲರು ಕಳೆದ ತಿಂಗಳ ಪ್ರಗತಿ ಪರಿಶಿಲನೆ ಸಭೆ ನಡೆಸಿ ಜಿಲ್ಲೆಯಲ್ಲಿ ಭೂ ಮಾಪನ ಇಲಾಖೆಯ ಅಧಿಕಾರಿಗಳ ಕೆಲಸದ ಬಗ್ಗೆ ಮಾಹಿತಿಯನ್ನ ಪಡೆದುಕ್ಕೊಂಡು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.ಇತ್ತಿಚಿನ ದಿನಗಳಲ್ಲಿ ಕೆರೆಗಳನ್ನ‌ ಕೆಲ‌ ಜಿಲ್ಲೆಗಳಲ್ಲಿ ಸರ್ವೆ ಕೂಡಾ ಅಧಿಕಾರಿಗಳು ಮಾಡುತ್ತಿಲ್ಲ. ಇನ್ನು ಸರ್ವೆ ಮಾಡೋದು ದೂರ ಉಳಿತು ಆದರೆ ಅತಿಕ್ರಮಣ ತೆರವು ಮಾಡ್ತಿಲ್ಲ ಅಧಿಕಾರಿಗಳು ಆದರೆ ಧಾರವಾಡ ಜಿಲ್ಲೆಯ ಅಧಿಕಾರಿಗಳು ಮಾಡಿರುವ ಕೆಲಸಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಅವರು ಶಹಬ್ಬಾಶ ಗಿರಿ ಕೊಟ್ಟಿದ್ದಾರೆ. ಇನ್ನು ಎಲ್ಲ ಅಧಿಕಾರಿಗಳು ಈ ರೀತಿಯಾಗಿ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಇಂತಹ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಕೆರೆಗಳು ಉಳಿಯುತ್ತಿವೆ..ಜಿಲ್ಲೆಯಲ್ಲಿ ನಿರ್ಮಾಣವಾದ ಕೆರೆಗಳನ್ನ ಉಳಿಸಿಕ್ಕೊಳ್ಳಲು ಆಗುತ್ತಿಲ್ಲ ಆದರೆ ಅವುಗಳನ್ನ ಉಳಿಸಿಕ್ಕೊಳ್ಳಿಕ್ಕೆ‌ ಆಗಲಿಲ್ಲ ಅಂದರೆ ನಾವು ಎಂತಾ ಕ್ರಿಮಿನಲ್‌ಗಳು ಅಲ್ವಾ..ಆದಷ್ಟೂ ಬೇಗ ಎಲ್ಲ‌ಅಧಿಕಾರಿಗಳು ಕೆರೆಗಳನ್ನು ಉಳಿಸಿಕ್ಕೊಳ್ಳಲು ಕೆಲಸ ಮಾಡಬೇಕು ರಾಜ್ಯದಲ್ಲಿ ಎಲ್ಲೂ ಆಗದ ಕೆಲಸವನ್ನ ಧಾರವಾಡ ಭೂ ಮಾಪನ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಅವರು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲೂ ಆಗದ ಕೆಲಸವನ್ನ‌ ಧಾರವಾಡ ಭೂ ಮಾಪನ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ. ಇನ್ನು ಪ್ರಗತಿ‌ ಪರಿಶಿಲನಾ ಸಭೆಯಲ್ಲಿ ಡಿಡಿಎಸ್ ಆರ್ ಮೋಹನ್ ಶಿವಣ್ಣವರ ಅವರನ್ನ ಲೋಕಾಯುಕ್ತ ನ್ಯಾಯಮೂರ್ತಿ ಗಳು ಹಾಡಿ ಹೊಗಳಿದ್ದಾರೆ ಸಮಾಜಕ್ಕೆ‌ ನಮ್ಮದು ಕೊಡುಗೆ ಮುಖ್ಯ ಎಲ್ಲ ಅಧಿಕಾರಿಗಳು ಅವರವರ ಅಧಿನದಲ್ಲಿ ಒಳ್ಳೆಯ ಕೆಲಸವನ್ನ ಮಾಡಿದಾಗ ಮಾತ್ರ ಸಮಾಜ ಮುಂದು‌ವರೆಯುತ್ತದೆ ಎಂದು ಸಭೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳಿಗೆ ಸಲಹೆ ಕೊಟ್ಟಿದ್ದಾರೆ.ಇನ್ನು ಕೆಲಸ ಮಾಡದ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ..ಸಭೆಯಲ್ಲಿ ಎಲ್ಲ‌ ಇಲಾಖೆಯ ಅಧಿಕಾರಿಗಳು ಬಾಗವಸೀಧದ್ದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೋಲಿಸ್ ವರಿಷ್ಠಾಧಿಕಾರಿ ಬ್ಯಾಕೋಡ್,ಸಿಇಓ ಟಿ ಕೆ ಸ್ವರೂಪ ಉಪಸ್ಥಿತರಿದ್ದರು.




PGK

Post a Comment

Previous Post Next Post